Gold Silver Price on 6 November 2022 | ಬೆಂಗಳೂರು: ವಾರದಾದ್ಯಂತ ಏರಿಳಿತದಿಂದ ಕೂಡಿದ್ದ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಇದೀಗ ಮತ್ತೆ ಏರಿಕೆಯ ಲಕ್ಷಣ ಕಾಣಿಸತೊಡಗಿದೆ. ವಾರಾಂತ್ಯದಲ್ಲಿ ಷೇರುಪೇಟೆ ಉತ್ತಮ ವಹಿವಾಟು ದಾಖಲಿಸಿರುವುದು, ರೂಪಾಯಿ ಮೌಲ್ಯವೂ ವೃದ್ಧಿಯಾಗಿರುವುದು, ವಿದೇಶಿ ವಿನಿಮಯ ಮೀಸಲು 53,108 ಡಾಲರ್ಗೆ ಹೆಚ್ಚಳವಾಗಿರುವುದು ಚಿನಿವಾರ ಪೇಟೆಯ ಮೇಲೂ ಪರಿಣಾಮ ಬೀರಿದೆ. ಇಂದು ಚಿನ್ನ (Gold Price) ಹಾಗೂ ಬೆಳ್ಳಿ ದರದಲ್ಲಿ (Silver Price) ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 900 ರೂ. ಹೆಚ್ಚಾಗಿ 47,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 990 ರೂ. ಹೆಚ್ಚಾಗಿ 51,280 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂ. ಹೆಚ್ಚಾಗಿ 60,500 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನದ ದರದಲ್ಲಿ ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ; ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ?
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,700 ರೂ. ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,050 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,030 ರೂ, ಮಂಗಳೂರು- 47,050 ರೂ, ಮೈಸೂರು- 47,050 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,040 ರೂ, ಮುಂಬೈ- 51,280 ರೂ, ದೆಹಲಿ- 51,440 ರೂ, ಕೊಲ್ಕತ್ತಾ- 51,280 ರೂ, ಬೆಂಗಳೂರು- 51,330 ರೂ, ಹೈದರಾಬಾದ್- 51,280 ರೂ, ಕೇರಳ- 51,280 ರೂ, ಪುಣೆ- 51,310 ರೂ, ಮಂಗಳೂರು- 51,330 ರೂ, ಮೈಸೂರು- 51,330 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 60,500 ರೂ, ಮೈಸೂರು- 66,300 ರೂ., ಮಂಗಳೂರು- 66,300 ರೂ., ಮುಂಬೈ- 60,500 ರೂ, ಚೆನ್ನೈ- 66,300 ರೂ, ದೆಹಲಿ- 60,500 ರೂ, ಹೈದರಾಬಾದ್- 66,300 ರೂ, ಕೊಲ್ಕತ್ತಾ- 60,500 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ