Gold Price Today: ಮತ್ತೆ ಜಿಗಿಯಿತು ಚಿನ್ನ, ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ಹಿಂದಿನ ದಿನದ ವಹಿವಾಟಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ ಮತ್ತು ಕುಸಿದಿದ್ದ ಬೆಳ್ಳಿ ದರ ಇಂದು ಜಿಗಿದಿವೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 500 ರೂ. ಏರಿಕೆಯಾದರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 540 ರೂ. ಹೆಚ್ಚಳವಾಗಿದೆ. ಹಾಗೆಯೇ 1 ಕೆಜಿ ಬೆಳ್ಳಿಯ ಬೆಲೆ 800 ರೂ. ಏರಿಕೆ ಕಂಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಇದು 200 ರೂ. ಇಳಿಕೆಯಾಗಿತ್ತು. ಹೂಡಿಕೆದಾರರ ಪ್ರಮುಖ ಆಯ್ಕೆಯಾಗಿರುವ ಚಿನ್ನ, ಬೆಳ್ಳಿಯ ಬೆಲೆ ಕಳೆದ ಕೆಲವು ವಾರಗಳಿಂದ ಏರಿಳಿತ ಕಾಣುತ್ತಿದೆ. ಈ ಮಧ್ಯೆ, ಆರ್ಬಿಐ ಸಾವರಿನ್ ಗೋಲ್ಡ್ ಬಾಂಡ್ ಅನ್ನೂ ಬಿಡುಗಡೆ ಮಾಡಿದ್ದು, 23ರ ವರೆಗೆ ಖರೀದಿಸಲು ಅವಕಾಶವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 500 ರೂ. ಹೆಚ್ಚಳವಾಗಿ 50,100 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 540 ರೂ. ಏರಿಕೆಯಾಗಿ 54,650 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂ. ಹೆಚ್ಚಳವಾಗಿ 70,100 ರೂಪಾಯಿ ಆಗಿದೆ.
ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 51,150 ರೂ.
- ಮುಂಬೈ- 50,100 ರೂ.
- ದೆಹಲಿ- 50,250 ರೂ.
- ಕೊಲ್ಕತ್ತಾ- 50,100 ರೂ.
- ಬೆಂಗಳೂರು- 50,150 ರೂ.
- ಹೈದರಾಬಾದ್- 50,100 ರೂ.
- ಕೇರಳ- 50,100 ರೂ.
- ಪುಣೆ- 50,100 ರೂ.
- ಮಂಗಳೂರು- 50,150 ರೂ.
- ಮೈಸೂರು- 50,150 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 55,800 ರೂ.
- ಮುಂಬೈ- 54,650 ರೂ.
- ದೆಹಲಿ- 54,820 ರೂ.
- ಕೊಲ್ಕತ್ತಾ- 54,650 ರೂ.
- ಬೆಂಗಳೂರು- 54,700 ರೂ.
- ಹೈದರಾಬಾದ್- 54,650 ರೂ.
- ಕೇರಳ- 54,650 ರೂ.
- ಪುಣೆ- 54,650 ರೂ.
- ಮಂಗಳೂರು- 54,700 ರೂ.
- ಮೈಸೂರು- 54,700 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,700 ರೂ.
- ಮೈಸೂರು- 74,700 ರೂ.
- ಮಂಗಳೂರು- 74,700 ರೂ.
- ಮುಂಬೈ- 70,100 ರೂ.
- ಚೆನ್ನೈ- 74,700 ರೂ.
- ದೆಹಲಿ- 70,100 ರೂ.
- ಹೈದರಾಬಾದ್- 74,700 ರೂ.
- ಕೊಲ್ಕತ್ತಾ- 70,100 ರೂ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ