Gold Price Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 600 ರೂ. ಹೆಚ್ಚಳ

Silver Price on March 23: ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,400 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,700 ರೂ. ಇದ್ದುದು 52,100 ರೂ. ಆಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,900 ರೂ. ಇದ್ದುದು ಇಂದು 73,400 ರೂ. ಆಗಿದೆ.

Gold Price Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 600 ರೂ. ಹೆಚ್ಚಳ
ಚಿನ್ನ
Edited By:

Updated on: Mar 23, 2022 | 6:03 AM

ಬೆಂಗಳೂರು: ಚಿನ್ನದ ಬಗೆಗಿನ ಜನರ ಆಕರ್ಷಣೆ, ಪ್ರೀತಿ ಇಂದು- ನಿನ್ನೆಯದಲ್ಲ. ಮದುವೆ, ಸಮಾರಂಭಗಳು, ಅಕ್ಷಯ ತೃತೀಯ ಹೀಗೆ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಚಿನ್ನವನ್ನು ಖರೀದಿಸುವವರ ಸಂಖ್ಯೆ ದೊಡ್ಡದಿದೆ. ಕಳೆದ ವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) 2 ದಿನಗಳಿಂದ ಮತ್ತೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 400 ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು 1 ಕೆಜಿಗೆ 600 ರೂ. ಏರಿಕೆಯಾಗಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಆದರೆ, ಇಂದು ಬಂಗಾರದ ದರ ಕುಸಿತ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,400 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,700 ರೂ. ಇದ್ದುದು 52,100 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,280 ರೂ. ಮುಂಬೈ- 47,750 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,750 ರೂ, ಬೆಂಗಳೂರು- 47,750 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,820 ರೂ, ಮಂಗಳೂರು- 47,750 ರೂ, ಮೈಸೂರು- 47,750 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,670 ರೂ, ಮುಂಬೈ- 52,100 ರೂ, ದೆಹಲಿ- 52,100 ರೂ, ಕೊಲ್ಕತ್ತಾ- 52,100 ರೂ, ಬೆಂಗಳೂರು- 52,100 ರೂ, ಹೈದರಾಬಾದ್- 52,100 ರೂ, ಕೇರಳ- 52,100 ರೂ, ಪುಣೆ- 52,170 ರೂ, ಮಂಗಳೂರು- 52,100 ರೂ, ಮೈಸೂರು- 52,100 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.

ಇಂದಿನ ಬೆಳ್ಳಿಯ ದರ:
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು 600 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,900 ರೂ. ಇದ್ದುದು ಇಂದು 73,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,400 ರೂ, ಮೈಸೂರು- 73,400 ರೂ., ಮಂಗಳೂರು- 73,400 ರೂ., ಮುಂಬೈ- 68,900 ರೂ, ಚೆನ್ನೈ- 73,400 ರೂ, ದೆಹಲಿ- 68,900 ರೂ, ಹೈದರಾಬಾದ್- 73,400 ರೂ, ಕೊಲ್ಕತ್ತಾ- 68,900 ರೂ. ಇದೆ.

ಇದನ್ನೂ ಓದಿ: Gold- Silver Rate: ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 22ರ ಚಿನ್ನ, ಬೆಳ್ಳಿ ದರ ಹೀಗಿದೆ

Gold Price Today: ಮತ್ತೆ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಎಷ್ಟು ಗೊತ್ತಾ?

TV9 Web

TV9 Kannada

Read More
Loading...
Unable to load recommendations.
Follow Us