Gold Price Today: 3 ದಿನಗಳಿಂದ ಯಥಾಸ್ಥಿತಿಯಲ್ಲಿದೆ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

| Updated By: ಸುಷ್ಮಾ ಚಕ್ರೆ

Updated on: Sep 27, 2022 | 6:14 AM

Silver Price Today: ಬೆಳ್ಳಿ ದರ ಕೂಡ ಕಳೆದ 3 ದಿನಗಳಿಂದ ಒಂದೇ ರೀತಿಯಲ್ಲಿದೆ. 3 ದಿನಗಳ ಹಿಂದೆ 1 ಕೆಜಿ ಬೆಳ್ಳಿ ಬೆಲೆ 56,800 ರೂ. ಇದ್ದುದು ಇಂದು 56,300 ರೂ. ಆಗಿದೆ.

Gold Price Today: 3 ದಿನಗಳಿಂದ ಯಥಾಸ್ಥಿತಿಯಲ್ಲಿದೆ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ
ಚಿನ್ನದ ಬೆಲೆ
Image Credit source: Zee News
Follow us on

Gold Price on 27th September 2022 | ಬೆಂಗಳೂರು: ಭಾರತದಲ್ಲಿ ಕಳೆದ ವಾರ ಹೆಚ್ಚಾಗಿದ್ದ ಚಿನ್ನದ ಬೆಲೆ (Gold Rate) 3 ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲಿ (Silver Price) ಕೂಡ ಇಂದು ಯಾವುದೇ ಬದಲಾವಣೆಯಾಗಿಲ್ಲ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಕೂಡ ಯಾವುದೇ ಏರಿಳಿತವಾಗಿಲ್ಲ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 46,500 ರೂ. ಇದ್ದುದು 46,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,730 ರೂ. ಇದ್ದುದು 50,200 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,510 ರೂ. ಮುಂಬೈ- 46,000 ರೂ, ದೆಹಲಿ- 46,150 ರೂ, ಕೊಲ್ಕತ್ತಾ- 46,000 ರೂ, ಬೆಂಗಳೂರು- 46,050 ರೂ, ಹೈದರಾಬಾದ್- 46,000 ರೂ, ಕೇರಳ- 46,000 ರೂ, ಪುಣೆ- 46,030 ರೂ, ಮಂಗಳೂರು- 46,050 ರೂ, ಮೈಸೂರು- 46,050 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಂದು ಮತ್ತೆ ಕುಸಿತ; ಬೆಳ್ಳಿ ದರ 600 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,740 ರೂ, ಮುಂಬೈ- 50,200 ರೂ, ದೆಹಲಿ- 50,350 ರೂ, ಕೊಲ್ಕತ್ತಾ- 50,200 ರೂ, ಬೆಂಗಳೂರು- 50,240 ರೂ, ಹೈದರಾಬಾದ್- 50,200 ರೂ, ಕೇರಳ- 50,200 ರೂ, ಪುಣೆ- 50,230 ರೂ, ಮಂಗಳೂರು- 50,240 ರೂ, ಮೈಸೂರು- 50,240 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಕೂಡ ಕಳೆದ 3 ದಿನಗಳಿಂದ ಒಂದೇ ರೀತಿಯಲ್ಲಿದೆ. 3 ದಿನಗಳ ಹಿಂದೆ 1 ಕೆಜಿ ಬೆಳ್ಳಿ ಬೆಲೆ 56,800 ರೂ. ಇದ್ದುದು ಇಂದು 56,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,500 ರೂ, ಮೈಸೂರು- 61,500 ರೂ., ಮಂಗಳೂರು- 61,500 ರೂ., ಮುಂಬೈ- 56,300 ರೂ, ಚೆನ್ನೈ- 61,500 ರೂ, ದೆಹಲಿ- 56,300 ರೂ, ಹೈದರಾಬಾದ್- 61,500 ರೂ, ಕೊಲ್ಕತ್ತಾ- 56,300 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ