Gold Price Today: ಇಳಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟು ಏರಿಯಾಗಿದೆ ಗೊತ್ತಾ?

Gold Rate Today: ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,450 ರೂ. ನಿಗದಿಯಾಗಿದೆ. ಇದೇ 100 ಗ್ರಾಂ ಚಿನ್ನಕ್ಕೆ 4,44,450 ರೂ. ಆಗಿದೆ. ನಿನ್ನೆ ಚಿನ್ನದ ಬೆಲೆಗೆ ಹೋಲಿಸಿದಾಗ 10 ಗ್ರಾಂಗೆ 150 ರೂ. ಕಡಿಮೆಯಾಗಿದ್ದರೆ. 100 ಗ್ರಾಂ ಚಿನ್ನಕ್ಕೆ 1,500 ರೂ. ಇಳಿಕೆಯಾಗಿದೆ.

Gold Price Today: ಇಳಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟು ಏರಿಯಾಗಿದೆ ಗೊತ್ತಾ?
ಚಿನ್ನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: sandhya thejappa

Updated on: Dec 04, 2021 | 9:01 AM

ಆಭರಣ ಯಾರಿಗೆ ಇಷ್ಟವಿಲ್ಲ ಹೇಳಿ? ಸೌಂದರ್ಯವನ್ನು ಹೆಚ್ಚಿಸುವ ಆಭರಣ ಕಷ್ಟ ಸಮಯದಲ್ಲಿ ಕೈ ಕೂಡಾ ಹಿಡಿಯುತ್ತದೆ. ಇನ್ನು ಮಹಿಳೆಯರಿಗಂತೂ ಆಭರಣದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಆಭರಣದ ಬೆಲೆ ಸ್ಥಿರವಾಗಿರಲ್ಲ. ಪ್ರತಿ ದಿನದ ಬೆಲೆಯನ್ನು ಗಮನಿಸಿದಾಗ ಏರಿಳಿತ ಗೋಚರವಾಗುತ್ತದೆ. ಹಾಗಾದರೆ ಇಂದಿನ ಆಭರಣದ ಬೆಲೆ ಎಷ್ಟಿದೆ? ಯಾವ ಯಾವ ನಗರದಲ್ಲಿ ಆಭರಣದ ಬೆಲೆ ಹೆಚ್ಚು ಕಡಿಮೆಯಾಗಿದೆ? ಅಂತ ಇಲ್ಲಿ ತಿಳಿಸಲಾಗಿದೆ. ಇಂದು (ಡಿ.4) ಬೆಂಗಳೂರಿನಲ್ಲಿ ಚಿನ್ನ (Gold Price) ಕೊಳ್ಳುವವರಿಗೆ ಶುಭ ಸುದ್ದಿ. ಯಾಕೆಂದರೆ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಬೆಳ್ಳಿ ಬೆಲೆ (Silver Price) ನಿನ್ನೆಗಿಂತ ಸ್ವಲ್ಪ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,450 ರೂ. ನಿಗದಿಯಾಗಿದೆ. ಇದೇ 100 ಗ್ರಾಂ ಚಿನ್ನಕ್ಕೆ 4,44,450 ರೂ. ಆಗಿದೆ. ನಿನ್ನೆ ಚಿನ್ನದ ಬೆಲೆಗೆ ಹೋಲಿಸಿದಾಗ 10 ಗ್ರಾಂಗೆ 150 ರೂ. ಕಡಿಮೆಯಾಗಿದ್ದರೆ. 100 ಗ್ರಾಂ ಚಿನ್ನಕ್ಕೆ 1,500 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 1 ಕೆಜಿಗೆ 61,200 ರೂ. ಇದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 60,700 ರೂ. ಇತ್ತು. ಅಂದರೆ ಇವತ್ತು ಬೆಳ್ಳಿ ಬೆಲೆ 500 ರೂ. ಜಾಸ್ತಿಯಾಗಿದೆ. ಇನ್ನು ಮಂಗಳೂರಿನಲ್ಲೂ ಚಿನ್ನ ಮತ್ತು ಬೆಳ್ಳಿಗೆ ಮೇಲಿನ ದರವೇ ನಿಗದಿಯಾಗಿದೆ.

24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 48,490 ರೂ. ಇದ್ದರೆ. ಇದೇ ಚಿನ್ನ 100 ಗ್ರಾಂಗೆ 4,84,900 ರೂ. ಇದೆ. ನಿನ್ನೆಯ ದರ ಗಮನಿಸಿದಾಗ 10 ಗ್ರಾಂಗೆ 48,650 ರೂ. ಇದ್ದು, 160 ರೂ. ಕಡಿಮೆಯಾಗಿದೆ. 100 ಗ್ರಾಂಗೆ 4,86,500 ರೂ. ಇತ್ತು. ಈ ಲೆಕ್ಕದಲ್ಲಿ ಇಂದು 24 ಕ್ಯಾರೆಟ್ 100 ಗ್ರಾಂಗೆ 1,600 ರೂಪಾಯಿ ಕಡಿಮೆಯಾಗಿದೆ.

ದೆಹಲಿಯಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ (Delhi Gold and Silver Rate) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,600 ರೂ. ಇದೆ. ಇನ್ನು 100 ಗ್ರಾಂಗೆ 4,66,000 ರೂಪಾಯಿ ನಿಗದಿಯಾಗಿದೆ. ನಿನ್ನೆಗಿಂತ 10 ಗ್ರಾಂಗೆ 150 ರೂ. ಮತ್ತು 100 ಗ್ರಾಂಗೆ 1,500 ರೂ. ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 50,840 ರೂ. ನಿಗದಿಯಾಗಿದ್ದರೆ, 100 ಗ್ರಾಂಗೆ 5,08,400 ರೂ. ಇದೆ. ನಿನ್ನೆ ದರ ಗಮನಿಸಿದಾಗ 10 ಗ್ರಾಂ ಚಿನ್ನಕ್ಕೆ 160 ರೂ. ಮತ್ತು 100 ಗ್ರಾಂಗೆ 1,600 ರೂಪಾಯಿ ಇಳಿಕೆಯಾಗಿದೆ. ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಗೆ ಇಂದಿನ ದರ 61,200 ರೂ. ಇದೆ. ನಿನ್ನೆ 60,700 ರೂ. ಇತ್ತು. ಬೆಲೆ ಗಮನಿಸಿದಾಗ ಇಂದು 500 ರೂ. ಹೆಚ್ಚಾಗಿದೆ.

ಆಭರಣ ಬೆಲೆ ಮುಂಬೈನಲ್ಲಿ ಎಷ್ಟಿದೆ ನೋಡಿ (Mumbai Gold and Silver Rate) ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ 46,450 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,64,500 ರೂ. ಆಗಿದೆ. ನಿನ್ನೆಗಿಂತ 10 ಗ್ರಾಂಗೆ 130 ರೂ. ಮತ್ತು 100 ಗ್ರಾಂಗೆ 1,300 ರೂಪಾಯಿ ಇಳಿಯಾಗಿದೆ. ಇನ್ನು ನಗರದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,450 ರೂ. ಇದ್ದರೆ, 100 ಗ್ರಾಂಗೆ 4,74,500 ರೂ. ನಿಗದಿಯಾಗಿದೆ. ಈ ಚಿನ್ನಕ್ಕೂ 10 ಗ್ರಾಂಗೆ ನಿನ್ನೆಗಿಂತ 130 ರೂ. ಮತ್ತು 100 ಗ್ರಾಂಗೆ 1,300 ರೂಪಾಯಿ ಕಡಿಮೆಯಾಗಿದೆ. ಆದರೆ ಬೆಳ್ಳಿ ಬೆಲೆ ಗಮನಿಸಿದಾಗ ಒಂದು ಕೆಜಿಗೆ 500 ರೂಪಾಯಿ ಏರಿಕೆಯಾಗಿದೆ. ನಿನ್ನೆ 60,700 ರೂ. ಇತ್ತು. ಆದರೆ ಇಂದು 61,200 ರೂಪಾಯಿ ಆಗಿದೆ.

ಇದನ್ನೂ ಓದಿ

Mayank Agarwal: ಮೊದಲ ದಿನದಾಟದ ಬಳಿಕ ತನ್ನ ಶತಕದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ಮಯಾಂಕ್ ಅಗರ್ವಾಲ್

Covid 19 Karnataka Update: ಒಮಿಕ್ರಾನ್ ಆತಂಕದ ನಡುವೆ 413 ಹೊಸ ಸೋಂಕು ಪ್ರಕರಣಗಳು: ನಾಲ್ವರು ಸಾವು