Gold and Silver Price: ಇಂದು ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್; ಚಿನ್ನ, ಬೆಳ್ಳಿ ದರ ಇಳಿಕೆ
Gold Rate Today: ಇಂದು ಬೆಂಗಳೂರಿನಲ್ಲಿ ಆಭರಣ ಖರೀದಿಸುವವರಿಗೆ ಶುಭ ಸುದ್ದಿ. 22 ಕ್ಯಾರೆಟ್ 10 ಗ್ರಾಂಗೆ ಚಿನ್ನಕ್ಕೆ 200 ರೂ. ಮತ್ತು 24 ಕ್ಯಾರೆಟ್ 10 ಗ್ರಾಂಗೆ 220 ರೂ. ದರ ಇಳಿಕೆಯಾಗಿದೆ.
Gold and Silver Price Today| ಇಂದು (ಫೆ.17) ಆಭರಣ ಖರೀದಿಸುವವರು ಇಂದಿನ ಚಿನ್ನ (Gold Price), ಬೆಳ್ಳಿ ಬೆಲೆ (Silver Price) ಎಷ್ಟಿದೆ ಅಂತ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಬೆಲೆ ಹೆಚ್ಚಾಗಿದ್ದರೆ, ಕಡಿಮೆ ಆಗಬಹುದು ಎಂಬ ವಿಶ್ವಾಸದಲ್ಲಿ ಇರುತ್ತಾರೆ. ಜೊತೆಗೆ ಕಡಿಮೆ ಆದ ಬಳಿಕವೇ ಆಭರಣ ಖರೀದಿಸೋಣ ಅಂತ ತೀರ್ಮಾನ ಮಾಡುತ್ತಾರೆ. ಹೀಗೆ ಯೋಚಿಸುವವರು ಇಂದಿನ ದರ ಹೇಗಿದೆ ಅಂತ ಗಮನಿಸಿ. ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ನಿನ್ನೆಗಿಂತ ಕಡಿಮೆ ಆಗಿದೆಯಾ? ಅಥವಾ ಏರಿಕೆಯಾಗಿದೆಯಾ? ಎಂದು ತಿಳಿದುಕೊಳ್ಳಿ. ಇಂದು ಬೆಂಗಳೂರಿನಲ್ಲಿ ಆಭರಣ ಖರೀದಿಸುವವರಿಗೆ ಶುಭ ಸುದ್ದಿ. 22 ಕ್ಯಾರೆಟ್ 10 ಗ್ರಾಂಗೆ ಚಿನ್ನಕ್ಕೆ 200 ರೂ. ಮತ್ತು 24 ಕ್ಯಾರೆಟ್ 10 ಗ್ರಾಂಗೆ 220 ರೂ. ದರ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ? (Bangalore Gold Price): ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,200 ರೂ. ಇದೆ. ನಿನ್ನೆ ದರ ಗಮನಿಸಿದಾಗ ಇಂದು 10 ಗ್ರಾಂ ಚಿನ್ನಕ್ಕೆ 200 ರೂ. ಇಳಿಕೆಯಾಗಿದೆ. ಇದೇ ಚಿನ್ನ 100 ಗ್ರಾಂಗೆ ಇಂದು 4,62,000 ರೂ. ಇದೆ. ನಿನ್ನೆ 100 ಗ್ರಾಂಗೆ 4,64,000 ರೂ. ಇತ್ತು. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,400 ರೂ. ನಿಗದಿಯಾಗಿದ್ದು, 100 ಗ್ರಾಂಗೆ 5,04,400 ರೂ.ಇದೆ. ಬೆಳ್ಳಿ ದರವೂ ಇಂದು 400 ರೂ. ಇಳಿಕೆಯಾಗಿದೆ. 1ಕೆಜಿಗೆ 68,200 ರೂ. ಇದ್ದ ಬೆಳ್ಳಿ ಇಂದು 67,800 ರೂಪಾಯಿ ಆಗಿದೆ.
ದೆಹಲಿಯಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ ( Delhi Gold Price): 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,200 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,62,000 ರೂ. ಇದೆ. 24 ಕ್ಯಾರೆಟ್ 10 ಗ್ರಾಂಗೆ 50,630 ರೂ. ಇದೆ ನಿನ್ನೆಗಿಂತ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಗೆ 63,000 ರೂ. ಇದೆ. ನಿನ್ನೆ ಕೂಡಾ ಇಷ್ಟೇ ದರ ನಿಗದಿಯಾಗಿತ್ತು.
ಚೆನ್ನೈನಲ್ಲಿ ಆಭರಣದ ಬೆಲೆ ಎಷ್ಟಿದೆ ಗೊತ್ತಾ? (Chennai Gold Price): ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,650 ರೂ. ಇದ್ದು, 100 ಗ್ರಾಂಗೆ 4,66,500 ರೂ. ಇದೆ. ದರ ಗಮನಿಸಿದಾಗ ನಿನ್ನೆಗಿಂತ 10 ಗ್ರಾಂಗೆ 310 ರೂ. ದರ ಇಳಿಕೆಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂಗೆ 50,850 ರೂ. ಇದ್ದು, 100 ಗ್ರಾಂಗೆ 5,08,500 ರೂಪಾಯಿ ಇದೆ. ಇಂದು ಕೆಜಿ ಬೆಳ್ಳಿಗೆ ಇಂದು 67,800 ರೂಪಾಯಿ ಇದೆ. ನಿನ್ನೆ 68,200 ರೂ. ಇತ್ತು.
ಹೈದರಾಬಾದ್ನಲ್ಲಿ ಆಭರಣದ ಬೆಲೆ ಹೀಗಿದೆ (Hyderabad Gold Price): 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,200 ರೂ. ಇದ್ದು, 100 ಗ್ರಾಂಗೆ 4,62,000 ರೂ. ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂಗೆ 50,400 ರೂ. ಇದ್ದು, 100 ಗ್ರಾಂಗೆ 5,04,000 ರೂಪಾಯಿ ಇದೆ. ಇಲ್ಲಿ ಒಂದು ಕೆಜಿ ಬೆಳ್ಳಿಗೆ 67,800 ರೂ. ನಿಗದಿಯಾಗಿದೆ. ನಿನ್ನೆ 68,200 ರೂಪಾಯಿ ಇತ್ತು. ನಿನ್ನೆಗಿಂತ 400 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ
ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್; ಕ್ಯೂಟ್ ಫೋಟೋಗಳಿಗೆ ಫ್ಯಾನ್ಸ್ ಫಿದಾ
IND vs WI T20: ಟಿ20ಯಲ್ಲೂ ಭಾರತ ಶುಭಾರಂಭ: ರೋಹಿತ್ ನಾಯಕತ್ವದ ಗೆಲುವಿನ ಓಟ ಮುಂದುವರಿಕೆ