ಬೆಂಗಳೂರು: ಹೊಸ ವರ್ಷ ಬಂತೆಂದಾಗ ಈ ವರ್ಷವಾದರೂ ಒಂದಷ್ಟು ಆಭರಣ ಖರೀದಿ ಮಾಡಬೇಕು ಎಂದು ನೀವು ಲೆಕ್ಕಾಚಾರ ಹಾಕಿರಬಹುದು. ಕಿವಿಯ ಓಲೆ, ಬಳೆ, ಸರ ಹೀಗೆ ಏನೇನು ಒಡವೆ ಬೇಕು? ಯಾವುದನ್ನು ಮೊದಲು ಕೊಳ್ಳಬೇಕು ಎಂದು ಯೋಚಿಸಿರಬಹುದು. ಅದಕ್ಕಾಗಿ ಒಂದಷ್ಟು ಹಣವನ್ನೂ ಕೂಡಿಟ್ಟಿರಬಹುದು. ಹೀಗೆ ಆಭರಣ ಖರೀದಿಗೆ ಇದು ಸರಿಯಾದ ಸಮಯವೇ? ನೀವು ಈಗ ಬಂಗಾರ ಕೊಳ್ಳಬಹುದೇ? ಎಂಬ ಅನುಮಾನ ನಿಮ್ಮ ಮನಸಲ್ಲಿ ಮೂಡಿರಬಹುದು. ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ದರ ನಿಗದಿಯ ಬಗ್ಗೆ ಒಮ್ಮೆ ಪರಿಶೀಲಿಸಿ. ಪ್ರತಿನಿತ್ಯ ಚಿನ್ನ (Gold price), ಬೆಳ್ಳಿ ಬೆಲೆ (Silver Price) ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಜನವರಿ 24, ಸೋಮವಾರ) ಚಿನ್ನ, ಬೆಳ್ಳಿ ದರ ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,490 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,900 ರೂಪಾಯಿ ನಿಗದಿಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,630 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,300 ರೂಪಾಯಿ ನಿಗದಿಯಾಗಿದೆ. ಅದರಂತೆ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 69,000 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)
ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,870 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,58,700 ರೂಪಾಯಿ ನಿಗದಿಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,040 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,00,400 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆ, ಕೆಜಿ ಬೆಳ್ಳಿಗೆ 69,000 ರೂಪಾಯಿ ನಿಗದಿಯಾಗಿದೆ.
ಹೈದರಾಬಾದ್ನಲ್ಲಿ ಚಿನ್ನ, ಬೆಳ್ಳಿ ಬೆಲೆ (Hyderabad Gold Price)
ಹೈದರಾಬಾದ್ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,490 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,900 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,630 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,300 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆ, ಕೆಜಿ ಬೆಳ್ಳಿಗೆ 69,000 ರೂಪಾಯಿ ನಿಗದಿಯಾಗಿದೆ.
ಮುಂಬೈನಲ್ಲಿ ಚಿನ್ನ, ಬೆಳ್ಳಿ ಬೆಲೆ (Mumbai Gold Price)
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,520 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,75,200 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,520 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,200 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆ, ಕೆಜಿ ಬೆಳ್ಳಿ ಬೆಲೆ 64,900 ರೂಪಾಯಿ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ನಗದು, ಚಿನ್ನಾಭರಣ ಹೊತ್ತೊಯ್ದಿದ್ದ ಗ್ಯಾಂಗ್ ಅರೆಸ್ಟ್
ಇದನ್ನೂ ಓದಿ: Budget 2022: ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿಡಲು ಚಿನ್ನದ ಉಳಿತಾಯ ಖಾತೆ ಆರಂಭಿಸುವ ಸಾಧ್ಯತೆ