Budget 2022: ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿಡಲು ಚಿನ್ನದ ಉಳಿತಾಯ ಖಾತೆ ಆರಂಭಿಸುವ ಸಾಧ್ಯತೆ
ಚಾಲ್ತಿ ಖಾತೆ ಕೊರತೆಯು ವಿಸ್ತರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಚಿನ್ನದ ಉಳಿತಾಯ ಖಾತೆ ಆರಂಭಿಸುವ ಸಾಧ್ಯತೆ ಇದೆ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ (Union Budget 2022-23) ಚಿನ್ನಸ ಸೇವಿಂಗ್ಸ್ ಅಕೌಂಟ್ಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಚಿನ್ನವನ್ನು ಭೌತಿಕವಾಗಿ ಖರೀದಿಸುವುದನ್ನು ಉತ್ತೇಜಿಸಬಾರದು. ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ ಆಗದಂತೆ ಮಿತಿಯಲ್ಲಿ ಇರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಹೀಗೆ ಮಾಡಬಹುದು, ಎಂದು ಬ್ಯಾಂಕಿಂಗ್ ಮತ್ತು ವ್ಯವಹಾರ ಮೂಲಗಳು ತಿಳಿಸಿವೆ. ಗ್ರಾಹಕರು ಬ್ಯಾಂಕ್ಗಳಲ್ಲಿ ಅಂಥ ಗೋಲ್ಡ್ ಅಕೌಂಟ್ಸ್ ತೆರೆಯಬಹುದು ಮತ್ತು ನಿಯಮಿತವಾಗಿ ಅದರಲ್ಲಿ ಹಣ ಹಾಕಬಹುದು, ಎಂದು ಮೂಲಗಳು ತಿಳಿಸಿವೆ. ವಿಥ್ಡ್ರಾ ಮಾಡುವ ಸಂದರ್ಭದಲ್ಲಿ ಚಿನ್ನದ ಬೆಲೆ ಎಷ್ಟಿರುತ್ತದೋ ಅದರ ಆಧಾರದಲ್ಲಿ ಠೇವಣಿ ಹಿಂಪಡೆಯಬಹುದು, ಎಂದು ತಿಳಿಸಲಾಗಿದೆ.
ಹೀಗೆ ಮಾಡುವುದರಿಂದ ಭೌತಿಕವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವ ಬೇಡಿಕೆ ಕಡಿಮೆ ಆಗುತ್ತದೆ. ಅಂದಹಾಗೆ ಗೋಲ್ಡ್ ಸೇವಿಂಗ್ಸ್ಗೆ ಬಡ್ಡಿ ಸಹ ದೊರೆಯುತ್ತದೆ. ಹೇಗೆ ಸವರನ್ ಗೋಲ್ಡ್ ಬಾಂಡ್ (SGB)ಗೆ ವಾರ್ಷಿಕವಾಗಿ ಶೇ 2.5ರಷ್ಟು ಬಡ್ಡಿ ದೊರೆಯುತ್ತದೋ ಅದೇ ರೀತಿಯಲ್ಲಿ ಸಿಗುತ್ತದೆ. ಇದರ ಜತೆಗೆ ಡಿಜಿಟಲ್ ಗೋಲ್ಡ್ಗೆ ನಿಯಂತ್ರಕರ ಚೌಕಟ್ಟನ್ನು ಸಹ ರೂಪಿಸುವ ಸಾಧ್ಯತೆ ಇದೆ.
ಭಾರತದ ವಾರ್ಷಿಕ ಚಿನ್ನದ ಅಗತ್ಯವಾದ 800ರಿಂದ 850 ಟನ್ಗಳನ್ನು ಆಮದು ಮಾಡಿಕೊಳ್ಳುತ್ತದೆ. ಚಿನ್ನದ ಆಮದು ಸಿಎಡಿ (ಕರೆಂಟ್ ಅಕೌಂಟ್ ಡೆಫಿಸಿಟ್) ಮೇಲೆ ಪರಿಣಾಮ ಹೊಂದಿರುತ್ತದೆ. ಅದು ಈ ಹಣಕಾಸು ವರ್ಷದ ಏಪ್ರಿಲ್ನಿಂದ ಡಿಸೆಂಬರ್ ಮಧ್ಯೆ ದುಪ್ಪಟ್ಟಿಗೂ ಹೆಚ್ಚಾಗಿ 3800 ಕೋಟಿ ಅಮೆರಿಕನ್ ಡಾಲರ್ ಆಗಿದೆ. ಬ್ಯಾಂಕರ್ಗಳು ಈ ಸಂಬಂಧವಾಗಿ ಸರ್ಕಾರದ ಜತೆಗೆ ಮಾತನಾಡಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Akshaya Tritiya: ಚಿನ್ನದ ಗಟ್ಟಿಯೋ ಸವರನ್ ಗೋಲ್ಡ್ ಬಾಂಡ್ ಚಿನ್ನದ ಇಟಿಎಫ್ ಯಾವುದು ಹೂಡಿಕೆಗೆ ಉತ್ತಮ?