Gold Rate Today Bangalore: ಚಿನ್ನ, ಬೆಳ್ಳಿ ಎರಡೂ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2025 June 4th: ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಏರಿಕೆ ಆಗಿದೆ. ಚಿನ್ನದ ಬೆಲೆ 10 ರೂನಷ್ಟು ಅಲ್ಪ ಹೆಚ್ಚಳವಾದರೆ, ಬೆಳ್ಳಿ ಬೆಲೆ 2 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 9,090 ರೂಗೆ ಏರಿದೆ. ದೆಹಲಿ ಮೊದಲಾದೆಡೆ ಬೆಲೆ 9,100 ರೂ ದಾಟಿದೆ. ಅಪರಂಜಿ ಚಿನ್ನದ ಬೆಲೆ 9,917 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 100 ರೂ ಇದ್ದದ್ದು 102 ರೂಗೆ ಏರಿದೆ. ಚೆನ್ನೈನಲ್ಲಿ ಬೆಲೆ 113 ರೂಗೆ ಹಿಗ್ಗಿದೆ.

Gold Rate Today Bangalore: ಚಿನ್ನ, ಬೆಳ್ಳಿ ಎರಡೂ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Jun 04, 2025 | 10:21 AM

ಬೆಂಗಳೂರು, ಜೂನ್ 4: ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ (Gold rate today) ಏರಿಕೆ ಆಗುವುದು ಮುಂದುವರಿದಿದೆ. ಎರಡು ದಿನದಲ್ಲಿ 160 ರೂಗಳಷ್ಟು ಏರಿದ್ದ ಚಿನ್ನದ ಬೆಲೆ ಇಂದು ಬುಧವಾರ 10 ರೂ ಹೆಚ್ಚಳಗೊಂಡಿದೆ. ವಿದೇಶಗಳಲ್ಲಿಯೂ ಹಲವೆಡೆ ಬೆಲೆ ಇಳಿಕೆ ಆಗಿದೆ. ಮಲೇಷ್ಯಾದಂಥ ಕೆಲ ದೇಶಗಳಲ್ಲಿ ಬೆಲೆ ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆ ಆಗುತ್ತಿರುವಾಗ ಮೌನವಾಗಿದ್ದ ಬೆಳ್ಳಿಯ ಬೆಲೆಯಲ್ಲಿ ಇವತ್ತು ಭರ್ಜರಿ ಹೆಚ್ಚಳವಾಗಿದೆ. ಗ್ರಾಮ್​​ಗೆ 2 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 4ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,170 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,170 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,900 ರೂ
  • ಚೆನ್ನೈ: 90,900 ರೂ
  • ಮುಂಬೈ: 90,900 ರೂ
  • ದೆಹಲಿ: 91,050 ರೂ
  • ಕೋಲ್ಕತಾ: 90,900 ರೂ
  • ಕೇರಳ: 90,900 ರೂ
  • ಅಹ್ಮದಾಬಾದ್: 90,950 ರೂ
  • ಜೈಪುರ್: 91,050 ರೂ
  • ಲಕ್ನೋ: 91,050 ರೂ
  • ಭುವನೇಶ್ವರ್: 90,900 ರೂ

ಇದನ್ನೂ ಓದಿ: ಎಂಆರ್​​ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್

ಇದನ್ನೂ ಓದಿ
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,520 ರಿಂಗಿಟ್ (91,290 ರುಪಾಯಿ)
  • ದುಬೈ: 3,725 ಡಿರಾಮ್ (87,070 ರುಪಾಯಿ)
  • ಅಮೆರಿಕ: 1,015 ಡಾಲರ್ (87,140 ರುಪಾಯಿ)
  • ಸಿಂಗಾಪುರ: 1,364 ಸಿಂಗಾಪುರ್ ಡಾಲರ್ (90,740 ರುಪಾಯಿ)
  • ಕತಾರ್: 3,755 ಕತಾರಿ ರಿಯಾಲ್ (88,440 ರೂ)
  • ಸೌದಿ ಅರೇಬಿಯಾ: 3,830 ಸೌದಿ ರಿಯಾಲ್ (87,670 ರುಪಾಯಿ)
  • ಓಮನ್: 396.50 ಒಮಾನಿ ರಿಯಾಲ್ (88,410 ರುಪಾಯಿ)
  • ಕುವೇತ್: 305.50 ಕುವೇತಿ ದಿನಾರ್ (85,510 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,200 ರೂ
  • ಚೆನ್ನೈ: 11,300 ರೂ
  • ಮುಂಬೈ: 10,200 ರೂ
  • ದೆಹಲಿ: 10,200 ರೂ
  • ಕೋಲ್ಕತಾ: 10,200 ರೂ
  • ಕೇರಳ: 11,300 ರೂ
  • ಅಹ್ಮದಾಬಾದ್: 10,200 ರೂ
  • ಜೈಪುರ್: 10,200 ರೂ
  • ಲಕ್ನೋ: 10,200 ರೂ
  • ಭುವನೇಶ್ವರ್: 11,300 ರೂ
  • ಪುಣೆ: 10,200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ