Gold Rate Today Bangalore: ಆಪರೇಷನ್ ಸಿಂಧೂರ, ಎಂಸಿಎಕ್ಸ್​​​ನಲ್ಲಿ ಚಿನ್ನದ ಬೆಲೆ ಕುಸಿತ

Bullion Market 2025 May 7th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತು ಬುಧವಾರ ಭಾರತ ಹಾಗೂ ವಿಶ್ವಾದ್ಯಂತ ಏರಿಕೆ ಆಗಿವೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,075 ರೂ ಮುಟ್ಟಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,900 ರೂಗೆ ಏರಿದೆ. ಆದರೆ, ಮಲ್ಟಿ ಕಮಾಡಿಟಿ ಎಕ್ಸ್​​ಚೇಂಜ್​​​ನಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ಶೇ. 0.9ರಷ್ಟು ತಗ್ಗಿದೆ.

Gold Rate Today Bangalore: ಆಪರೇಷನ್ ಸಿಂಧೂರ, ಎಂಸಿಎಕ್ಸ್​​​ನಲ್ಲಿ ಚಿನ್ನದ ಬೆಲೆ ಕುಸಿತ
ಚಿನ್ನ

Updated on: May 07, 2025 | 2:27 PM

ಬೆಂಗಳೂರು, ಮೇ 7: ಚಿನ್ನದ ಬೆಲೆ (Gold rate) ಇವತ್ತು ಬುಧವಾರ ವಿಶ್ವಾದ್ಯಂತ ಏರಿಕೆ ಆಗಿದೆ. ಭಾರತದಲ್ಲೂ ಗ್ರಾಮ್​​ಗೆ 50 ರೂ ಬೆಲೆ ಹೆಚ್ಚಳವಾಗಿದೆ. ಆದರೆ, ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಗೋಲ್ಡ್ ಫ್ಯೂಚರ್ಸ್ ಶೇ. 0.9ರಷ್ಟು ಕಡಿಮೆ ಆಗಿ 9,662.50 ರೂ ಮುಟ್ಟಿದೆ. ಆಭರಣ ಮಾರುಕಟ್ಟೆಯಲ್ಲಿ ಗ್ರಾಮ್​​​ಗೆ 50 ರೂ ಏರಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,025 ರೂ ಇದ್ದದ್ದು 9,075 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 9,846 ರೂನಿಂದ 9,900 ರೂ ಮುಟ್ಟಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 97 ರೂನಿಂದ 99 ರೂಗೆ ಏರಿದೆ. ತಮಿಳುನಾಡು, ಕೇರಳ ಇತ್ಯಾದಿ ಕಡೆ ಬೆಲೆ 111 ರೂ ತಲುಪಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,900 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 7ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,000 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,250 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,750 ರೂ
  • ಚೆನ್ನೈ: 90,750 ರೂ
  • ಮುಂಬೈ: 90,750 ರೂ
  • ದೆಹಲಿ: 90,900 ರೂ
  • ಕೋಲ್ಕತಾ: 90,750 ರೂ
  • ಕೇರಳ: 90,750 ರೂ
  • ಅಹ್ಮದಾಬಾದ್: 90,800 ರೂ
  • ಜೈಪುರ್: 90,900 ರೂ
  • ಲಕ್ನೋ: 90,900 ರೂ
  • ಭುವನೇಶ್ವರ್: 90,750 ರೂ

ಇದನ್ನೂ ಓದಿ: ಯುಎನ್​​ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ 38 ಸ್ಥಾನ ಮೇಲಿರುವ ಭಾರತ

ಇದನ್ನೂ ಓದಿ
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,500 ರಿಂಗಿಟ್ (89,770 ರುಪಾಯಿ)
  • ದುಬೈ: 3,775 ಡಿರಾಮ್ (86,970 ರುಪಾಯಿ)
  • ಅಮೆರಿಕ: 1,030 ಡಾಲರ್ (87,200 ರುಪಾಯಿ)
  • ಸಿಂಗಾಪುರ: 1,360 ಸಿಂಗಾಪುರ್ ಡಾಲರ್ (89,140 ರುಪಾಯಿ)
  • ಕತಾರ್: 3,805 ಕತಾರಿ ರಿಯಾಲ್ (88,350 ರೂ)
  • ಸೌದಿ ಅರೇಬಿಯಾ: 3,870 ಸೌದಿ ರಿಯಾಲ್ (87,320 ರುಪಾಯಿ)
  • ಓಮನ್: 400 ಒಮಾನಿ ರಿಯಾಲ್ (87,940 ರುಪಾಯಿ)
  • ಕುವೇತ್: 310 ಕುವೇತಿ ದಿನಾರ್ (85,550 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,900 ರೂ
  • ಚೆನ್ನೈ: 11,100 ರೂ
  • ಮುಂಬೈ: 9,900 ರೂ
  • ದೆಹಲಿ: 9,900 ರೂ
  • ಕೋಲ್ಕತಾ: 9,900 ರೂ
  • ಕೇರಳ: 11,100 ರೂ
  • ಅಹ್ಮದಾಬಾದ್: 9,900 ರೂ
  • ಜೈಪುರ್: 9,900 ರೂ
  • ಲಕ್ನೋ: 9,900 ರೂ
  • ಭುವನೇಶ್ವರ್: 11,100 ರೂ
  • ಪುಣೆ: 9,900

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ