ಬೆಂಗಳೂರು, ಮಾರ್ಚ್ 12: ನಿನ್ನೆ ಕುಸಿತ ಕಂಡಿದ್ದ ಚಿನ್ನದ ಬೆಲೆ (Gold rate today) ಇವತ್ತು ಏರಿಕೆಯಾಗಿದೆ. ಬೆಳ್ಳಿ ಬೆಲೆ ಒಮ್ಮೆಲೇ ಗ್ರಾಮ್ಗೆ ಎರಡು ರೂನಷ್ಟು ಜಿಗಿದಿದೆ. ಇವತ್ತು ಬುಧವಾರ ಚಿನ್ನದ ಬೆಲೆ ಗ್ರಾಮ್ಗೆ 45 ರೂನಷ್ಟು ಹೆಚ್ಚಳವಾದರೆ, ಅಪರಂಜಿ ಚಿನ್ನದ ಬೆಲೆ 49 ರೂನಷ್ಟು ದುಬಾರಿಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಹಲವು ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಳಗೊಂಡಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎರಡು ರೂ ಹೆಚ್ಚಳ ಆಗಿದೆ. 98 ರೂ ಇದ್ದ ಅದರ ಬೆಲೆ 100 ರೂ ಮುಟ್ಟಿದೆ. ಮುಂಬೈ ಹಾಗೂ ಇನ್ನೂ ಹಲವೆಡೆಯೂ 100 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 107 ರೂನಿಂದ 109 ರೂ ತಲುಪಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: Dividend Funds: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್ಗಳು
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Wed, 12 March 25