Gold Silver Price on 20th November: ಚಿನ್ನದ ಬೆಲೆ ಗ್ರಾಮ್​ಗೆ 60-80 ರೂನಷ್ಟು ಏರಿಕೆ; ಬೆಂಗಳೂರು ಮೊದಲಾದೆಡೆ ಇವತ್ತಿನ ದರಪಟ್ಟಿ

|

Updated on: Nov 20, 2024 | 10:10 AM

Bullion Market 2024 November 20th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಹೆಚ್ಚಳ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ ಸುಮಾರು 70 ರೂನಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 7,800 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ 10 ಪೈಸೆಯಷ್ಟು ಏರಿಕೆ ಆಗಿದೆ.

Gold Silver Price on 20th November: ಚಿನ್ನದ ಬೆಲೆ ಗ್ರಾಮ್​ಗೆ 60-80 ರೂನಷ್ಟು ಏರಿಕೆ; ಬೆಂಗಳೂರು ಮೊದಲಾದೆಡೆ ಇವತ್ತಿನ ದರಪಟ್ಟಿ
ಚಿನ್ನ
Follow us on

ಬೆಂಗಳೂರು, ನವೆಂಬರ್ 20: ಚಿನ್ನದ ಬೆಲೆ ಸತತ ಎರಡನೇ ದಿನವೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 10 ಪೈಸೆಯಷ್ಟು ಮಾತ್ರ ಅಲ್ಪ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 60-80 ರೂನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,135 ರೂ ತಲುಪಿದೆ. ಅಪರಂಜಿ ಚಿನ್ನದ ಬೆಲೆ 7,780 ರೂ ಆಗಿದೆ. ಕಳೆದ ಎರಡು ವಾರದಲ್ಲಿ ಹಳದಿ ಲೋಹದ ಬೆಲೆ ಹತ್ತಿರ ಹತ್ತಿರ ಶೇ. 10ರಷ್ಟು ಬೆಲೆ ಇಳಿದಿತ್ತು. ಈಗ ಇದಕ್ಕೆ ಮತ್ತೆ ಬೇಡಿಕೆ ಕುದುರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,160 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,160 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,800 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,400 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 91.60 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 91.60 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,350 ರೂ
  • ಚೆನ್ನೈ: 71,350 ರೂ
  • ಮುಂಬೈ: 71,350 ರೂ
  • ದೆಹಲಿ: 71,500 ರೂ
  • ಕೋಲ್ಕತಾ: 71,350 ರೂ
  • ಕೇರಳ: 71,350 ರೂ
  • ಅಹ್ಮದಾಬಾದ್: 71,400 ರೂ
  • ಜೈಪುರ್: 71,500 ರೂ
  • ಲಕ್ನೋ: 71,500 ರೂ
  • ಭುವನೇಶ್ವರ್: 71,350 ರೂ

ಇದನ್ನೂ ಓದಿ: Petrol Diesel Price on November 20: ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (68,570 ರುಪಾಯಿ)
  • ದುಬೈ: 2,955 ಡಿರಾಮ್ (67,890 ರುಪಾಯಿ)
  • ಅಮೆರಿಕ: 780 ಡಾಲರ್ (65,820 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,460 ರುಪಾಯಿ)
  • ಕತಾರ್: 2,990 ಕತಾರಿ ರಿಯಾಲ್ (69,220 ರೂ)
  • ಸೌದಿ ಅರೇಬಿಯಾ: 3,010 ಸೌದಿ ರಿಯಾಲ್ (67,660 ರುಪಾಯಿ)
  • ಓಮನ್: 314.50 ಒಮಾನಿ ರಿಯಾಲ್ (68,930 ರುಪಾಯಿ)
  • ಕುವೇತ್: 240.10 ಕುವೇತಿ ದಿನಾರ್ (65,900 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,160 ರೂ
  • ಚೆನ್ನೈ: 10,110 ರೂ
  • ಮುಂಬೈ: 9,160 ರೂ
  • ದೆಹಲಿ: 9,160 ರೂ
  • ಕೋಲ್ಕತಾ: 9,160 ರೂ
  • ಕೇರಳ: 10,110 ರೂ
  • ಅಹ್ಮದಾಬಾದ್: 9,160 ರೂ
  • ಜೈಪುರ್: 9,160 ರೂ
  • ಲಕ್ನೋ: 9,160 ರೂ
  • ಭುವನೇಶ್ವರ್: 10,110 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ