Gold Silver Price on 28 November: ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಏರಿಕೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

Bullion Market 2023, November 28th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,560 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 78.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 57,350 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,625 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 28 November: ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಏರಿಕೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ
Edited By:

Updated on: Nov 28, 2023 | 5:00 AM

ಬೆಂಗಳೂರು, ನವೆಂಬರ್ 28: ಭಾರತ ಹಾಗೂ ವಿವಿಧ ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ತೀವ್ರ ಏರಿಕೆ ಕಾಣತೊಡಗಿದೆ. ಅಮೆರಿಕದ ಆರ್ಥಿಕತೆಯ ವಿವಿಧ ಅಂಶಗಳು ಸದ್ಯದಲ್ಲೇ ಬಹಿರಂಗಗೊಳ್ಳಲಿದ್ದು, ಮುನ್ನೆಚ್ಚರಿಕೆಯಾಗಿ ಹೂಡಿಕೆದಾರರು ಚಿನ್ನದ ಮೇಲೆ ಹಣ ಇರಿಸಿದ್ದಾರೆ. ಒಂದು ವೇಳೆ ಅಮೆರಿಕದ ಹಣದುಬ್ಬರ ಗಣನೀಯವಾಗಿ ಇಳಿಕೆಯಾದರೆ ಅಲ್ಲಿ ಬಡ್ಡಿದರವನ್ನೂ ಇಳಿಸಬಹುದು. ಆಗ ಚಿನ್ನದ ಬೆಲೆ ಹೆಚ್ಚತೊಡಗಬಹುದು ಎಂಬ ನಿರೀಕ್ಷೆಯಲ್ಲಿ ಬಹಳ ಮಂದಿ ಈಗಿಂದಲೇ ಚಿನ್ನ ಖರೀದಿಸತೊಡಗಿದ್ದಾರೆ. ಇದರ ಪರಿಣಾಮ ಭಾರತೀಯ ಚಿನಿವಾರಪೇಟೆಯ ಮೇಲೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,560 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,625 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 28ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 785 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 762.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 57,350 ರೂ
  • ಚೆನ್ನೈ: 57,800 ರೂ
  • ಮುಂಬೈ: 57,350 ರೂ
  • ದೆಹಲಿ: 57,500 ರೂ
  • ಕೋಲ್ಕತಾ: 57,350 ರೂ
  • ಕೇರಳ: 57,350 ರೂ
  • ಅಹ್ಮದಾಬಾದ್: 57,400 ರೂ
  • ಜೈಪುರ್: 57,500 ರೂ
  • ಲಕ್ನೋ: 57,500 ರೂ
  • ಭುವನೇಶ್ವರ್: 57,350 ರೂ

ಇದನ್ನೂ ಓದಿ: ತನ್ನ ಪೂರ್ತಿ ಪೇಟಿಎಂ ಪಾಲು ಮಾರಿಬಿಟ್ಟ ವಾರನ್ ಬಫೆಟ್; ಹೂಡಿಕೆತಜ್ಞನಿಗೆ ಆದ ನಷ್ಟ ಬರೋಬ್ಬರಿ 507 ಕೋಟಿ ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (53,065 ರುಪಾಯಿ)
  • ದುಬೈ: 2,260 ಡಿರಾಮ್ (51,292 ರುಪಾಯಿ)
  • ಅಮೆರಿಕ: 615 ಡಾಲರ್ (51,262 ರುಪಾಯಿ)
  • ಸಿಂಗಾಪುರ: 837 ಸಿಂಗಾಪುರ್ ಡಾಲರ್ (52,168 ರುಪಾಯಿ)
  • ಕತಾರ್: 2,315 ಕತಾರಿ ರಿಯಾಲ್ (52,917 ರೂ)
  • ಸೌದಿ ಅರೇಬಿಯಾ: 2,320 ಸೌದಿ ರಿಯಾಲ್ (51,560 ರುಪಾಯಿ)
  • ಓಮನ್: 245.50 ಒಮಾನಿ ರಿಯಾಲ್ (53,152 ರುಪಾಯಿ)
  • ಕುವೇತ್: 193 ಕುವೇತಿ ದಿನಾರ್ (52,157 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,625 ರೂ
  • ಚೆನ್ನೈ: 8,150 ರೂ
  • ಮುಂಬೈ: 7,850 ರೂ
  • ದೆಹಲಿ: 7,850 ರೂ
  • ಕೋಲ್ಕತಾ: 7,850 ರೂ
  • ಕೇರಳ: 8,150 ರೂ
  • ಅಹ್ಮದಾಬಾದ್: 7,850 ರೂ
  • ಜೈಪುರ್: 7,850 ರೂ
  • ಲಕ್ನೋ: 7,850 ರೂ
  • ಭುವನೇಶ್ವರ್: 8,150 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us