Gold Silver Price on 14th October: ಇಂದು ಸೋಮವಾರ ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ಬೆಲೆ ವ್ಯತ್ಯಯ ಇಲ್ಲ

Bullion Market 2024 October 14th: ಚಿನ್ನದ ಬೆಲೆ ಇಂದು ಸೋಮವಾರ ತುಸು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 7,120 ರೂ ಇದ್ದದ್ದು 7,115 ರೂಗೆ ಇಳಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 7,762 ರೂಗೆ ಇಳಿದೆ. ಬೆಳ್ಳಿ ಬೆಲೆ 97 ರೂನಲ್ಲಿ ಮುಂದುವರಿದಿದೆ.

Gold Silver Price on 14th October: ಇಂದು ಸೋಮವಾರ ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ಬೆಲೆ ವ್ಯತ್ಯಯ ಇಲ್ಲ
ಚಿನ್ನ

Updated on: Oct 14, 2024 | 10:31 AM

ಬೆಂಗಳೂರು, ಅಕ್ಟೋಬರ್ 14: ಕಳೆದ ವಾರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಈ ವಾರ ಇಳಿಕೆಯೊಂದಿಗೆ ಆರಂಭ ಕಂಡಿದೆ. ಇಂದು ಸೋಮವಾರ ಚಿನ್ನದ ಬೆಲೆ ಗ್ರಾಮ್​ಗೆ 5 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನ ಮತ್ತು ಅಪರಂಜಿ ಚಿನ್ನ ಎರಡೂ ಅಷ್ಟೇ ಪ್ರಮಾಣದಲ್ಲಿ ಕಡಿಮೆ ಆಗಿವೆ. 18 ಕ್ಯಾರಟ್​ನ ಚಿನ್ನದ ಬೆಲೆಯಲ್ಲಿ 4 ರೂ ಕಡಿಮೆ ಆಗಿದೆ. ವಿದೇಶಗಳಲ್ಲೂ ಕೆಲವೆಡೆ ಈ ಹಳದಿ ಲೋಹದ ಬೆಲೆ ತುಸು ತಗ್ಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಯಾವ ವ್ಯತ್ಯಯ ಆಗಿಲ್ಲ. ವಾರಾಂತ್ಯದಲ್ಲಿದ್ದ ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,350 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,620 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,220 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,620 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 935 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,150 ರೂ
  • ಚೆನ್ನೈ: 71,150 ರೂ
  • ಮುಂಬೈ: 71,150 ರೂ
  • ದೆಹಲಿ: 71,300 ರೂ
  • ಕೋಲ್ಕತಾ: 71,150 ರೂ
  • ಕೇರಳ: 71,150 ರೂ
  • ಅಹ್ಮದಾಬಾದ್: 71,200 ರೂ
  • ಜೈಪುರ್: 71,300 ರೂ
  • ಲಕ್ನೋ: 71,300 ರೂ
  • ಭುವನೇಶ್ವರ್: 71,150 ರೂ

ಇದನ್ನೂ ಓದಿ: Petrol Diesel Price on October 14: ಇಂದು ಭಾರತದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,540 ರಿಂಗಿಟ್ (69,330 ರುಪಾಯಿ)
  • ದುಬೈ: 2,947.50 ಡಿರಾಮ್ (67,470 ರುಪಾಯಿ)
  • ಅಮೆರಿಕ: 805 ಡಾಲರ್ (67,680 ರುಪಾಯಿ)
  • ಸಿಂಗಾಪುರ: 1,074 ಸಿಂಗಾಪುರ್ ಡಾಲರ್ (69,150 ರುಪಾಯಿ)
  • ಕತಾರ್: 2,980 ಕತಾರಿ ರಿಯಾಲ್ (68,740 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,060 ರುಪಾಯಿ)
  • ಓಮನ್: 317 ಒಮಾನಿ ರಿಯಾಲ್ (69,240 ರುಪಾಯಿ)
  • ಕುವೇತ್: 242.40 ಕುವೇತಿ ದಿನಾರ್ (66,470 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,350 ರೂ
  • ಚೆನ್ನೈ: 10,300 ರೂ
  • ಮುಂಬೈ: 9,700 ರೂ
  • ದೆಹಲಿ: 9,700 ರೂ
  • ಕೋಲ್ಕತಾ: 9,700 ರೂ
  • ಕೇರಳ: 10,300 ರೂ
  • ಅಹ್ಮದಾಬಾದ್: 9,700 ರೂ
  • ಜೈಪುರ್: 9,700 ರೂ
  • ಲಕ್ನೋ: 9,700 ರೂ
  • ಭುವನೇಶ್ವರ್: 10,300 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us