Gold Silver Price on 8th October: ಚಿನ್ನ, ಬೆಳ್ಳಿ ಬೆಲೆ ಮಂಗಳವಾರವೂ ಇಳಿಕೆ

Bullion Market 2024 October 8th: ಸೋಮವಾರ ಗ್ರಾಮ್​ಗೆ 20 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇಂದು ಮಂಗಳವಾರ ಒಂದು ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 7,745 ರೂನಿಂದ 7,744 ರೂಗೆ ಇಳಿದಿದೆ.

Gold Silver Price on 8th October: ಚಿನ್ನ, ಬೆಳ್ಳಿ ಬೆಲೆ ಮಂಗಳವಾರವೂ ಇಳಿಕೆ
ಚಿನ್ನ

Updated on: Oct 08, 2024 | 10:33 AM

ಬೆಂಗಳೂರು, ಅಕ್ಟೋಬರ್ 8: ಚಿನ್ನ, ಬೆಳ್ಳಿಗಳ ಬೆಲೆ ಇಂದೂ ಕೂಡ ಇಳಿಮುಖವಾಗಿದೆ. ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಗ್ರಾಮ್​ಗೆ 1 ರೂನಷ್ಟು ಮಾತ್ರ ಕಡಿಮೆ ಆಗಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿತ್ತು. ನಿನ್ನೆ ಚಿನ್ನದ ಬೆಲೆ 20 ರೂನಷ್ಟು ಕಡಿಮೆಗೊಂಡಿತ್ತು. ಇನ್ನು, ಬೆಳ್ಳಿ ಬೆಲೆಯೂ ಮಂಗಳವಾರ ಕಡಿಮೆ ಆಗಿದೆ. ಗ್ರಾಮ್​ಗೆ 1ರಿಂದ 2 ರೂನಷ್ಟು ಅಗ್ಗಗೊಂಡಿದೆ. ಬೆಂಗಳೂರಿನಲ್ಲಿ 92 ರೂ ಇದ್ದದ್ದು 90 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,990 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 70,990 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 8ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,990 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,440 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 960 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,990 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,440 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 900 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 70,990 ರೂ
  • ಚೆನ್ನೈ: 70,990 ರೂ
  • ಮುಂಬೈ: 70,990 ರೂ
  • ದೆಹಲಿ: 71,140 ರೂ
  • ಕೋಲ್ಕತಾ: 70,990 ರೂ
  • ಕೇರಳ: 70,990 ರೂ
  • ಅಹ್ಮದಾಬಾದ್: 71,040 ರೂ
  • ಜೈಪುರ್: 71,140 ರೂ
  • ಲಕ್ನೋ: 71,140 ರೂ
  • ಭುವನೇಶ್ವರ್: 70,990 ರೂ

ಇದನ್ನೂ ಓದಿ: Petrol Diesel Price on October O8: ಗುಜರಾತ್, ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್, ಡೀಸೆಲ್ ದರ ದುಬಾರಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,530 ರಿಂಗಿಟ್ (69,110 ರುಪಾಯಿ)
  • ದುಬೈ: 2,962.50 ಡಿರಾಮ್ (67,700 ರುಪಾಯಿ)
  • ಅಮೆರಿಕ: 805 ಡಾಲರ್ (67,570 ರುಪಾಯಿ)
  • ಸಿಂಗಾಪುರ: 1,079 ಸಿಂಗಾಪುರ್ ಡಾಲರ್ (69,490 ರುಪಾಯಿ)
  • ಕತಾರ್: 3,000 ಕತಾರಿ ರಿಯಾಲ್ (69,070 ರೂ)
  • ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,160 ರುಪಾಯಿ)
  • ಓಮನ್: 317 ಒಮಾನಿ ರಿಯಾಲ್ (69,100 ರುಪಾಯಿ)
  • ಕುವೇತ್: 242.70 ಕುವೇತಿ ದಿನಾರ್ (66,500 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,000 ರೂ
  • ಚೆನ್ನೈ: 10,200 ರೂ
  • ಮುಂಬೈ: 9,600 ರೂ
  • ದೆಹಲಿ: 9,600 ರೂ
  • ಕೋಲ್ಕತಾ: 9,600 ರೂ
  • ಕೇರಳ: 10,200 ರೂ
  • ಅಹ್ಮದಾಬಾದ್: 9,600 ರೂ
  • ಜೈಪುರ್: 9,600 ರೂ
  • ಲಕ್ನೋ: 9,600 ರೂ
  • ಭುವನೇಶ್ವರ್: 10,200 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us