UPI Lite: ಗೂಗಲ್ ಪೇಗೂ ಬಂತು ಯುಪಿಐ ಲೈಟ್; ಪಿನ್ ಇಲ್ಲದೇ ಹಣ ಜಿಪೇ ಮಾಡಿ

Google Pay Launches UPI Lite: 200 ರೂ ಒಳಗಿನ ಹಣ ವಹಿವಾಟಿಗೆಂದು ರೂಪಿಸಲಾದ ಯುಪಿಐ ಲೈಟ್ ಫೀಚರ್ ಅನ್ನು ಗೂಗಲ್ ಪೇ ಅಳವಡಿಸಿದೆ. ಪೇಟಿಎಂ, ಭೀಮ್ ಮತ್ತು ಫೋನ್ ಪೇ ಆ್ಯಪ್​ಗಳು ಈ ಹಿಂದೆಯೆ ಈ ಫೀಚರ್ ಅಳವಡಿಸಿವೆ.

UPI Lite: ಗೂಗಲ್ ಪೇಗೂ ಬಂತು ಯುಪಿಐ ಲೈಟ್; ಪಿನ್ ಇಲ್ಲದೇ ಹಣ ಜಿಪೇ ಮಾಡಿ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 13, 2023 | 5:07 PM

ಕೇಂದ್ರ ಸರ್ಕಾರದ ಎನ್​ಪಿಸಿಐ ರೂಪಿಸಿರುವ ಯುಪಿಐ ಲೈಟ್ (UPI Lite) ಫೀಚರ್ ಪೇಟಿಎಂ, ಫೋನ್ ಪೇ ಬಳಿಕ ಇದೀಗ ಗೂಗಲ್ ಪೇಗೂ ಬಂದಿದೆ. ಯುಪಿಐ ಪಿನ್ ನಮೂದಿಸುವ ಅವಶ್ಯಕತೆ ಇಲ್ಲದೆ ಸುಲಭವಾಗಿ ಸಣ್ಣ ಹಣದ ವಹಿವಾಟು ನಡೆಸಲು ಯುಪಿಐ ಲೈಟ್ ಅನುಕೂಲವಾಗಿದೆ. ಬ್ಯಾಂಕ್ ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲದೇ 200 ರೂ ಒಳಗಿನ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ.

ಯುಪಿಐ ಲೈಟ್​ನಲ್ಲಿ ಸಣ್ಣ ಮೊತ್ತದ ಹಣದ ವಹಿವಾಟು ಮಾತ್ರ ಸಾಧ್ಯ. ನೀವು 200 ರೂವರೆಗಿನ ವಹಿವಾಟು ಮಾಡಬಹುದು. ಗೂಗಲ್ ಪೇನಲ್ಲಿ ನೀವು 200 ರೂ ಒಳಗಿನ ಹಣದ ಪಾವತಿ ಮಾಡುವಾಗ ಡೀಫಾಲ್ಟ್ ಆಗಿ ಯುಪಿಐ ಲೈಟ್ ಆಯ್ಕೆ ಆಗಿರುತ್ತದೆ.

ಯುಪಿಐ ಲೈಟ್ ಒಂದು ರೀತಿಯಲ್ಲಿ ವ್ಯಾಲಟ್​ನಂತೆ ಕೆಲಸ ಮಾಡುತ್ತದೆ. ಪೇಟಿಎಂ ಮತ್ತು ಫೋನ್ ಪೇನಲ್ಲಿ ವ್ಯಾಲಟ್​ಗಳಿದ್ದು ಅಲ್ಲಿಗೆ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಯುಪಿಐ ಸ್ಕ್ಯಾನ್ ಮಾಡಿದಾಗ ಹಣದ ಪಾವತಿಗೆ ಇದೇ ವ್ಯಾಲಟ್ ಅನ್ನು ಬಳಸಬಹುದು. ಬ್ಯಾಂಕ್ ಸರ್ವರ್​ಗೆ ಹೋಗಬೇಕಿಲ್ಲ, ಪಿನ್ ನಮೂದಿಸಬೇಕಿಲ್ಲ. ಯುಪಿಐ ಲೈಟ್ ಕೂಡ ಅದೇ ರೀತಿ ಕೆಲಸ ಮಾಡುತ್ತದೆ.

ಇದನ್ನೂ ಓದಿHDFC: ಯುಪಿಐ ಕ್ಯೂಅರ್ ಕೋಡ್​ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್​ಡಿಎಫ್​ಸಿ

ವ್ಯಾಲಟ್​ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ತುಂಬಿಸಬಹುದು. ಆದರೆ, ಯುಪಿಐ ಲೈಟ್​ನ ಅಕೌಂಟ್​ನಲ್ಲಿ 2,000 ರೂಗಿಂತ ಹೆಚ್ಚು ಹಣ ಇಡುವುದಕ್ಕೆ ಅವಕಾಶ ಇಲ್ಲ. ಬಹಳ ಸಣ್ಣ ಮೊತ್ತದ ಹಣದ ವಹಿವಾಟಿಗೆಂದು ಲೈಟ್ ಅನ್ನು ರೂಪಿಸಲಾಗಿದೆ.

ಗೂಗಲ್ ಪೇನಲ್ಲಿ ಯುಪಿಐ ಲೈಟ್ ಆ್ಯಕ್ಟಿವೇಟ್​ಗೊಳಿಸುವುದು ಹೇಗೆ?

  • ಗೂಗಲ್ ಪೇ ಆ್ಯಪ್ ಇದ್ದರೆ ಅದನ್ನು ಅಪ್​ಡೇಟ್ ಮಾಡಿ, ಬಳಿಕ ಆ್ಯಪ್ ಓಪನ್ ಮಾಡಿ.
  • ಮೇಲ್ಗಡೆ ಇರುವ ಪ್ರೊಫೈಲ್ ಚಿತ್ರ ಒತ್ತಿರಿ
  • ಸೆಟಪ್ ಪೇಮೆಂಟ್ ಮೆಥಡ್ಸ್ ಮೇಲೆ ಕ್ಲಿಕ್ ಮಾಡಿ.
  • ಆ್ಯಕ್ಟಿವೇಟ್ ಯುಪಿಐ ಲೈಟ್ ಅನ್ನು ಒತ್ತಿರಿ
  • ಕಂಟಿನ್ಯೂ ಮೇಲೆ ಒತ್ತಿರಿ.

ಇದನ್ನೂ ಓದಿOnline Gaming: ಆನ್​ಲೈನ್ ಗೇಮಿಂಗ್​ಗೆ ಶೇ. 28ಜಿಎಸ್​ಟಿ; 2023-24ರಲ್ಲಿ 20,000 ಕೋಟಿ ರೂ ತೆರಿಗೆ ಸಂಗ್ರಹ ನಿರೀಕ್ಷೆ

ಯುಪಿಐ ಲೈಟ್​ನ ಖಾತೆಯಲ್ಲಿ ಗರಿಷ್ಠ 2,000 ರೂವರೆಗೆ ಮಾತ್ರ ಹಣ ಜಮೆ ಮಾಡಲು ಸಾಧ್ಯ. ದಿನಕ್ಕೆ ಎರಡು ಬಾರಿ 2,000 ರೂ ಹಣವನ್ನು ತುಂಬಿಸಬಹುದಾದರೂ ಏಕಸಮಯದಲ್ಲಿ ಯುಪಿಐ ಲೈಟ್ ಖಾತೆಯಲ್ಲಿ 2,000 ರೂಗಿಂತ ಹೆಚ್ಚು ಹಣ ಇರುವಂತಿಲ್ಲ. ಒಟ್ಟಾರೆ ದಿನಕ್ಕೆ ಯುಪಿಐ ಲೈಟ್ ಮೂಲಕ ಗರಿಷ್ಠ 4,000 ರೂವರೆಗೆ ಹಣ ವಹಿವಾಟು ನಡೆಸಬಹುದು. ಒಂದು ವಹಿವಾಟಿನಲ್ಲಿ 200 ರೂಗಿಂತ ಹೆಚ್ಚಿನ ಹಣದ ವರ್ಗಾವಣೆ ಸಾಧ್ಯವಿಲ್ಲ.

ಭೀಮ್, ಪೇಟಿಎಂ ಮತ್ತು ಫೋನ್ ಪೇನಲ್ಲಿ ಯುಪಿಐ ಲೈಟ್​ನ ಅಳವಡಿಕೆ ಆಗಿದೆ. ಗೂಗಲ್ ಪೇ ಸರದಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Thu, 13 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ