AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Pixel 7a: ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ: ಈ ಬಾರಿ ಕ್ಯಾಮೆರಾ ಹೇಗಿದೆ ನೋಡಿ

ಗೂಗಲ್ ಪಿಕ್ಸೆಲ್ 7ಎ (Google Pixel 7a) ಸ್ಮಾರ್ಟ್​ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಸದ್ಯಕ್ಕೆ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಗೂಗಲ್ ಪಿಕ್ಸೆಲ್ 7ಎ (Google Pixel 7a) ಸ್ಮಾರ್ಟ್​ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಸದ್ಯಕ್ಕೆ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ. ಗಳನ್ನು ನಿಗದಿ ಮಾಡಲಾಗಿದೆ.

Google Pixel 7a: ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ: ಈ ಬಾರಿ ಕ್ಯಾಮೆರಾ ಹೇಗಿದೆ ನೋಡಿ
Google Pixel 7a
Vinay Bhat
| Edited By: |

Updated on:Oct 14, 2026 | 4:57 PM

Share

ಮುಖ್ಯಾಂಶಗಳು

  • ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸಲ್‌ 7a
  • ಗೂಗಲ್ ಪಿಕ್ಸಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ
  • 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ.

ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7ಎ (Google Pixel 7a) ಸ್ಮಾರ್ಟ್​ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಗೂಗಲ್​ನ (Google) ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023 ಯಲ್ಲಿ ಪಿಕ್ಸೆಲ್ 7a ಫೋನ್ ಲಾಂಚ್ ಆಗಿದೆ. ಅದ್ಭುತ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ 5G ಫೋನ್‌ ಇದಾಗಿದೆ. ಅಚ್ಚರಿ ಎಂದರೆ ಕಳೆದ ವರ್ಷ ಬಿಡುಗಡೆ ಆದ ಪಿಕ್ಸೆಲ್ 6a ಬೆಲೆಯಲ್ಲೇ ಈ ಫೋನ್ ಫೋನ್ ಕೂಡ ಗ್ರಾಹಕರಿಗೆ ಖರೀದಿಗೆ ಸಿಗುತ್ತಿದೆ. ಪಿಕ್ಸೆಲ್ 7a ಗೂಗಲ್‌ನ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಬಲಿಷ್ಠ ಸ್ಮಾರ್ಟ್​ಫೋನ್​ನ (Smartphone) ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಪಿಕ್ಸೆಲ್‌ 7a ಸ್ಮಾರ್ಟ್​ಫೊನ್ ಭಾರತದಲ್ಲಿ ಸದ್ಯಕ್ಕೆ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಫೋನ್‌ ಖರೀದಿಗೆ ವಿಶೇಷ ಆಫರ್‌ ಘೋಷಣೆ ಮಾಡಲಾಗಿದ್ದು, ಹೆಚ್‌ಡಿಎಫ್‌ಸಿ ಕಾರ್ಡ್‌ ಬಳಕೆ ಮಾಡಿಕೊಂಡು ಪಡೆದುಕೊಂಡರೆ ಹೆಚ್ಚುವರಿ 4,000 ರೂ. ಗಳ ರಿಯಾಯಿತಿ ಸಿಗಲಿದೆ. ಇಂದಿನಿಂದಲೇ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ 39,999 ರೂ. ಗೆ ಸೇಲ್ ಕಾಣುತ್ತಿದೆ.

ಫೀಚರ್ಸ್ ಏನಿದೆ?:

ಪಿಕ್ಸೆಲ್‌ 7a ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ ಬೆಂಬಲ ಪಡೆದುಕೊಂಡಿದೆ. 90Hzರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಪಿಕ್ಸಲ್‌ 6aಗೆ ಹೋಲಿಸಿದರೆ ಇದು ಸಾಕಷ್ಟು ಅಪ್‌ಗ್ರೇಡ್ ಹೊಂದಿದೆ. ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್‌ 13 ಓಸ್‌ನೊಂದಿಗೆ ರನ್ ಆಗುತ್ತದೆ. ಆಗಸ್ಟ್‌ ಬಳಿಕ ಈ ಫೋನ್ ಹೊಸದಾಗಿ ಬಿಡುಗಡೆ ಆಗಲಿರುವ ಆಂಡ್ರಾಯ್ಡ್ 14 ಓಎಸ್​ನಲ್ಲಿ ಕೆಲಸ ಮಾಡುತ್ತದೆ.

ಕ್ಯಾಮೆರಾ ಪ್ರಿಯ ನಿದ್ದೆ ಕದ್ದಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸಲ್​ನಿಂದ ಕೂಡಿದೆ. 13 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮುಂಭಾಗದಲ್ಲಿ ಸಾಮಾನ್ಯ ಪನ್-ಹೋಲ್ ವಿನ್ಯಾಸದ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಪಿಕ್ಸಲ್ 7a ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಅನೇಕ ಪ್ರಮುಖ ಫೀಚರ್ಸ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ 4,410mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. 18W ವೇಗದ ಚಾರ್ಜಿಂಗ್ ತಂತ್ರಜ್ಞಾನ ನೀಡಲಿದೆ. ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್‌ ಆಯ್ಕೆ ಸಹ ಇದೆ. IP67 ರೇಟಿಂಗ್‌ ಹೊಂದಿದ್ದು, ಈ ಮೂಲಕ ನೀರಿಗೆ ಬಿದ್ದರೂ ಯಾವುದೇ ಸಮಸ್ಯೆ ಆಗುವುದಿಲ್ಲ.

Published On - 11:25 am, Thu, 11 May 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ