AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮಿರಮಿರ ಮಿಂಚುತ್ತಿವೆ ಸರ್ಕಾರಿ ಬ್ಯಾಂಕುಗಳು; ಕೆನರಾ ಬ್ಯಾಂಕ್​ನಿಂದ ಹಿಡಿದು ಬಿಒಬಿವರೆಗೆ ಅದು ಸಕ್ಸಸ್​ಫುಲ್ ಸ್ಟೋರಿ

PSU banks growth story: ಸರ್ಕಾರಿ ಬ್ಯಾಂಕುಗಳು ವಂಚಕರಿಗೆ ಹಣ ಕೊಟ್ಟು ನಷ್ಟ ಮಾಡಿಕೊಳ್ಳುವ ಸರ್ಕಾರಿ ಯೋಜನೆ ಎಂದು ಹೇಳಲಾಗುತ್ತಿತ್ತು. ಈಗ ಸರ್ಕಾರಿ ಬ್ಯಾಂಕುಗಳು ಲಾಭ ಮಾಡುವ ಸಂಸ್ಥೆಗಳಾಗಿವೆ. ರಿಲಾಯನ್ಸ್ ಇಂಡಸ್ಟ್ರೀಸ್​ನಂಥ ಬೃಹತ್ ಸಂಸ್ಥೆಗಿಂತಲೂ ಎಸ್​ಬಿಐ ಹೆಚ್ಚು ಲಾಭ ಹೊಂದುವ ಮಟ್ಟಕ್ಕೆ ಹೋಗಿದೆ. ಎಲ್ಲಾ 12 ಸರ್ಕಾರಿ ಬ್ಯಾಂಕುಗಳೂ 2023-24ರಲ್ಲಿ ಲಾಭ ತೋರಿವೆ. ಒಟ್ಟು 1.41 ಲಕ್ಷ ಕೋಟಿ ರೂನಷ್ಟು ಲಾಭ ಮಾಡಿವೆ.

ಭಾರತದಲ್ಲಿ ಮಿರಮಿರ ಮಿಂಚುತ್ತಿವೆ ಸರ್ಕಾರಿ ಬ್ಯಾಂಕುಗಳು; ಕೆನರಾ ಬ್ಯಾಂಕ್​ನಿಂದ ಹಿಡಿದು ಬಿಒಬಿವರೆಗೆ ಅದು ಸಕ್ಸಸ್​ಫುಲ್ ಸ್ಟೋರಿ
ಕೆನರಾ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2024 | 6:21 PM

Share

ನವದೆಹಲಿ, ಮೇ 14: ಭಾರತದಲ್ಲಿ ಸರ್ಕಾರಿ ಬ್ಯಾಂಕುಗಳೆಂದರೆ ಸಾಲ ಮಾಡಿ ಹಣ ಸೂರೆ ಮಾಡಲು ಎಂಬ ಭಾವನೆ ಒಂದು ಕಾಲದಲ್ಲಿತ್ತು. ವಿಜಯ್ ಮಲ್ಯನಿಂದ ಹಿಡಿದು ನೀರವ್ ಮೋದಿವರೆಗೆ ದೇಶ ಬಿಟ್ಟು ಹೋದ ಹಣಕಾಸು ಅಪರಾಧಿಗಳು ಸರ್ಕಾರಿ ಬ್ಯಾಂಕುಗಳಿಂದಲೇ (PSU banks) ಅಕ್ರಮವಾಗಿ ಸಾಲ ಪಡೆದು ವಾಪಸ್ ಮಾಡದೇ ಹೋಗಿದ್ದಾರೆ. ಅಂಥ ಪರಿಸ್ಥಿತಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇವತ್ತು ಲಾಭದಿಂದ ನಳನಳಿಸುತ್ತಿವೆ. ವರದಿ ಪ್ರಕಾರ ದೇಶದ 12 ಸರ್ಕಾರಿ ಬ್ಯಾಂಕುಗಳು 2023-24ರ ಹಣಕಾಸು ವರ್ಷದಲ್ಲಿ 1,41,203 ಕೋಟಿ ರೂ ನಿವ್ವಳ ಲಾಭ ಮಾಡಿವೆ. ಕಳೆದ 3 ವರ್ಷದಲ್ಲಿ ಈ ಬ್ಯಾಂಕುಗಳ ನಿವ್ವಳ ಲಾಭ 4.5 ಪಟ್ಟು ಹೆಚ್ಚಾಗಿದೆ. ಇದು ಸಾಧಾರಣ ಸಂಗತಿ ಅಲ್ಲ.

2022-23ರಲ್ಲಿ ಈ 12 ಸರ್ಕಾರಿ ಬ್ಯಾಂಕುಗಳು ಗಳಿಸಿದ ನಿವ್ವಳ ಲಾಭ 1.04 ಲಕ್ಷ ಕೋಟಿ ರೂ ಇತ್ತು. ಈಗ ಅದು 1.41 ಲಕ್ಷ ಕೋಟಿಗೆ ಏರಿದೆ. ಈ ಹೆಚ್ಚಳದಲ್ಲಿ ಹೆಚ್ಚಿನ ಪಾಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ್ದಿದೆ. ಎಸ್​ಬಿಐ 2023-24ರಲ್ಲಿ ಗಳಿಸಿದ ಲಾಭ ಬರೋಬ್ಬರಿ 61,077ರಷ್ಟಿದೆ. ಈ ಎಲ್ಲಾ 12 ಬ್ಯಾಂಕುಗಳ ನಿವ್ವಳ ಲಾಭದಲ್ಲಿ ಎಸ್​ಬಿಐ ಪಾಲು ಶೇ. 40ರಷ್ಟಿದೆ.

ಎಸ್​ಬಿಐ ಜೊತೆ ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಒಟ್ಟು ನಾಲ್ಕು ಬ್ಯಾಂಕುಗಳ ನಿವ್ವಳ ಆದಾಯ 10,000 ಕೋಟಿ ರೂಗಿಂತ ಹೆಚ್ಚಿದೆ.

ಇದನ್ನೂ ಓದಿ: ಎಷ್ಟು ಅಂತ ಸಬ್ಸಿಡಿ ಕೊಡ್ತೀರಿ..! ಹಳೆಯ 28ಎನ್​ಎಂ ಚಿಪ್ ತಯಾರಿಸಿಕೊಂಡು ಏನ್ ಮಾಡ್ತೀರಿ?: ರಘುರಾಮ್ ರಾಜನ್

2020-21ರಲ್ಲಿ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳು ನಷ್ಟದ ಸ್ಥಿತಿಯಲ್ಲಿದ್ದವು. ಸಿಬಿಐ ಗಳಿಸಿದ ನಿವ್ವಳ ಲಾಭ 2,549 ಕೋಟಿ ರೂ ಆಗಿದೆ. ಮೂರು ವರ್ಷದ ಹಿಂದೆ ಕೇವಲ 829 ಕೋಟಿ ರೂ ಇದ್ದ ಬ್ಯಾಂಕ್ ಆಫ್ ಬರೋಡಾದ ನಿವ್ವಳ ಲಾಭ ಈಗ 17,788 ಕೋಟಿ ರೂಗೆ ಏರಿದೆ.

ರಿಲಾಯನ್ಸ್ ಅನ್ನೂ ಮೀರಿಸಿದ ಎಸ್​ಬಿಐ

2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಎಸ್​ಬಿಐ ಗಳಿಸಿದ ಲಾಭ 20,698 ಕೋಟಿ ರೂ. ಇದು ರಿಲಾಯನ್ಸ್​ನ 18,951 ಕೋಟಿ ರೂಗಿಂತಲೂ ಹೆಚ್ಚು. ಭಾರತದ ಯಾವುದೇ ಕಂಪನಿ ಕೂಡ ಎಸ್​ಬಿಐನಷ್ಟು ಆ ಕ್ವಾರ್ಟರ್​ನಲ್ಲಿ ಲಾಭ ಮಾಡಿಲ್ಲ.

ಸರ್ಕಾರಿ ಬ್ಯಾಂಕುಗಳು ಪುಟಿದೇಳಲು ಏನು ಕಾರಣ?

ನಷ್ಟದ ಹೊರೆಯಲ್ಲಿದ್ದ ಸರ್ಕಾರಿ ಬ್ಯಾಂಕುಗಳು ಲಾಭದ ಹಳಿಗೆ ಬರುವಂತಾಲು ಮೂರು ಪ್ರಮುಖ ಕಾರಣಗಳನ್ನು ಹೇಳಲಾಗುತ್ತಿದೆ.

  • ಅನುತ್ಪಾದಕ ಆಸ್ತಿ ಅಥವಾ ಎನ್​ಪಿಎ ಅನ್ನು ಲೆಕ್ಕದ ಕಡತದಿಂದ ತೆಗೆದುಹಾಕಿದ್ದು
  • ದಿವಾಳಿ ತಡೆ ಕಾನೂನು ಜಾರಿಗೆ ತಂದಿದ್ದು
  • ಹಲವು ಸರ್ಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸಿದ್ದು

ಇದನ್ನೂ ಓದಿ: ಸಖತ್ ಲಾಭ ಬಂದರೂ ಜೊಮಾಟೋ ಷೇರುಬೆಲೆ ಕುಸಿತವಾಗಲು ಏನು ಕಾರಣ? ಪೇಮೆಂಟ್ ಅಗ್ರಿಗೇಟರ್ ಲೈಸನ್ಸ್ ಮರಳಿಸುತ್ತಿರುವುದು ಯಾಕೆ? ಇಲ್ಲಿದೆ ವರದಿ

ಇಲ್ಲಿ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ ಕೋಡ್ ಕಾನೂನು ಜಾರಿಗೆ ಬಂದ ಬಳಿಕ ಸಾಲ ವಸೂಲಾತಿ ಪ್ರಕ್ರಿಯೆ ನಡೆಸಲು ಬ್ಯಾಂಕುಗಳಿಗೆ ಹೆಚ್ಚು ಸಹಾಯ ಸಿಕ್ಕಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ