Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಖತ್ ಲಾಭ ಬಂದರೂ ಜೊಮಾಟೋ ಷೇರುಬೆಲೆ ಕುಸಿತವಾಗಲು ಏನು ಕಾರಣ? ಪೇಮೆಂಟ್ ಅಗ್ರಿಗೇಟರ್ ಲೈಸನ್ಸ್ ಮರಳಿಸುತ್ತಿರುವುದು ಯಾಕೆ? ಇಲ್ಲಿದೆ ವರದಿ

Zomato profit and share price: ಭಾರತದ ನಂಬರ್ ಒನ್ ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್ ಎನಿಸಿದ ಜೊಮಾಟೊ 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಒಳ್ಳೆಯ ಲಾಭ ತೋರಿದೆ. ಅದರ ಪ್ರತಿಸ್ಪರ್ಧಿ ಸ್ವಿಗ್ಗಿ ಇತ್ಯಾದಿ ಸ್ಟಾರ್ಟಪ್​ಗಳು ನಷ್ಟದ ಪೊರೆಯಿಂದ ಹೊರಬರಲು ಪರದಾಡುತ್ತಿರುವಾಗ ಜೊಮಾಟೊ ಲಾಭ ತೋರುತ್ತಿರುವುದು ಸಾಕಷ್ಟು ಗಮನ ಸೆಳೆದಿದೆ. ಆದರೂ ಕೂಡ ಅದರ ಷೇರುಬೆಲೆ ಇಂದು ಮೇ 14ರಂದು ಕುಸಿತ ಕಂಡು ಅಚ್ಚರಿ ಹುಟ್ಟಿಸಿದೆ.

ಸಖತ್ ಲಾಭ ಬಂದರೂ ಜೊಮಾಟೋ ಷೇರುಬೆಲೆ ಕುಸಿತವಾಗಲು ಏನು ಕಾರಣ? ಪೇಮೆಂಟ್ ಅಗ್ರಿಗೇಟರ್ ಲೈಸನ್ಸ್ ಮರಳಿಸುತ್ತಿರುವುದು ಯಾಕೆ? ಇಲ್ಲಿದೆ ವರದಿ
ಜೊಮಾಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2024 | 3:27 PM

ನವದೆಹಲಿ, ಮೇ 14: ಕಳೆದ ಹಣಕಾಸು ವರ್ಷದ ನಾಲ್ಕನೇ ಕ್ವಾರ್ಟರ್​ನಲ್ಲಿ ಉತ್ತಮ ಲಾಭ ತೋರಿದ್ದರೂ ಜೊಮಾಟೋದ ಷೇರುಬೆಲೆ (Zomato share price) ಇಂದು ಮಂಗಳವಾರ ಕುಸಿತ ಕಂಡಿದೆ. 180ರಿಂದ 185 ರೂ ಬೆಲೆ ಇರುವ ಜೊಮಾಟೋದ ಷೇರಿಗೆ ವಿವಿಧ ಬ್ರೋಕರೇಜ್ ಸಂಸ್ಥೆಗಳು ಟಾರ್ಗೆಟ್ ಪ್ರೈಸ್ ಆಗಿ 280 ರೂವರೆಗೂ ನೀಡಿವೆ. ಆದರೂ ಕೂಡ ಜೊಮಾಟೋ ಷೇರುಬೆಲೆ ಇಂದು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಅದರ ಇಪಿಎಸ್ ಕಡಿಮೆಗೊಂಡಿರುವುದು. ಜೊಮಾಟೋ ಮಾಲಕತ್ವದ ಬ್ಲಿಂಕಿಟ್​ನ ಆದಾಯ ಕಡಿಮೆಯಾಗಿರಬಹುದು ಎನ್ನುವ ಅಂದಾಜು ಕೂಡ ಷೇರುಬೆಲೆಯ ಮೇಲೆ ಪರಿಣಾಮ ಬೀರಿದೆ. ಇಎಸ್​ಒಪಿ ಅಥವಾ ಉದ್ಯೋಗಿ ಷೇರು ಮಾಲಕತ್ವ ಯೋಜನೆ ವೆಚ್ಚ ಹೆಚ್ಚಿರುವುದೂ ಇನ್ನೊಂದು ಕಾರಣ ಎಂದು ಕೋಟಕ್ ವಿಶ್ಲೇಷಿಸಿದೆ. ಇವೆಲ್ಲವೂ ಕೂಡ ಜೊಮಾಟೊ ಷೇರುಬೆಲೆ ಮೇಲೆ ಪರಿಣಾಮ ಬೀರಿದೆ.

ಹಿಂದಿನ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ 189 ಕೋಟಿ ರೂ ನಷ್ಟ ತೋರಿದ್ದ ಜೊಮಾಟೋ ಈ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 175 ಕೋಟಿ ರೂ ಲಾಭ ಮಾಡಿದೆ. ಅದರ ಆದಾಯ ಶೇ. 73ರಷ್ಟು ಏರಿದೆ. ಅದರ ಫೂಡ್ ಡೆಲಿವರಿ ಬ್ಯುಸಿನೆಸ್ ಕೂಡ ಲಾಭ ಹೆಚ್ಚಳ ಕಂಡಿದೆ.

ಜೊಮಾಟೋದ ಇಕಾಮರ್ಸ್ ವಿಭಾಗವಾದ ಬ್ಲಿಂಕಿಟ್ ಕೂಡ ಉತ್ತಮ ಪ್ರಗತಿ ತೋರಿದೆ. 2024ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಅದರ ಎಬಿಟ್ ಅಥವಾ ಲಾಭ 2 ಕೋಟಿ ಮಾತ್ರವೇ ಇದೆ. ಆದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬರೋಬ್ಬರಿ 179 ಕೋಟಿ ರೂ ನಷ್ಟವಾಗಿರುವುದನ್ನು ಗಮನಿಸಿದರೆ ಈ ಬಾರಿ ಅದರ ಸಾಧನೆ ಗಮನಾರ್ಹ ಎನಿಸಿದೆ.

ಇದನ್ನೂ ಓದಿ: ಬಿರ್ಲಾ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜು

ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಮರಳಿಸಲಿರುವ ಜೊಮಾಟೋ

ಆರ್​ಬಿಐನಿಂದ ಆನ್ಲೈನ್ ಪೆಮೆಂಟ್ ಅಗ್ರಿಗೇಟರ್ ಪರವಾನಿಗೆ ಪಡೆದಿದ್ದ ಜೊಮಾಟೋ ಇದೀಗ ಅದನ್ನು ಮರಳಿಸಲು ನಿರ್ಧರಿಸಿದೆ. ಈಗ ಚಾಲ್ತಿಯಲ್ಲಿರುವ ಪೇಮೆಂಟ್ ಅಗ್ರಿಗೇಟರ್​ಗಳ ಜೊತೆ ಪೈಪೋಟಿ ನಡೆಸಲು ಕಷ್ಟವಾಗುವ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಆ ಕ್ಷೇತ್ರಕ್ಕೆ ಹೆಜ್ಜೆ ಹಾಕುವುದು ಸಮಂಜಸ ಎನಿಸುವುದಿಲ್ಲ ಎಂಬುದು ಜೊಮಾಟೋದ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್