AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರ್ಲಾ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜು

Aditya Birla Group's Novelis to enter US stock market: ಆದಿತ್ಯ ಬಿರ್ಲಾ ಗ್ರೂಪ್​ಗೆ ಸೇರಿದ ಹಿಂಡಾಲ್ಕೊ ಇಂಡಸ್ಟ್ರೀಸ್ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರುಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಐಪಿಒಗಾಗಿ ಅಲ್ಲಿನ ಎಸ್​ಇಸಿ ಬಳಿ ಅರ್ಜಿ ಸಲ್ಲಿಸಿದೆ. ಯಾವಾಗ, ಎಷ್ಟು ಷೇರು, ಎಷ್ಟು ಬೆಲೆ ಇತ್ಯಾದಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಐಪಿಒಗೆ ಎಸ್​ಇಸಿ ಸಮ್ಮತಿಸಿದ ಬಳಿಕ ನಾವೆಸಿಸ್ ತನ್ನ ಐಪಿಒದ ವಿವಿಧ ಅಂಶಗಳ ರೂಪುರೇಖೆ ಅಂತಿಮಗೊಳಿಸುವ ಸಾಧ್ಯತೆ ಇದೆ. ನಾವೆಲಿಸ್ ಸಂಸ್ಥೆ ಫ್ಲ್ಯಾಟ್ ರೋಲ್ಡ್ ಅಲೂಮಿನಿಯಮ್​ನ ಉತ್ಪನ್ನಗಳನ್ನು ತಯಾರಿಸುವ ವಿಶ್ವದ ಅತಿದೊಡ್ಡ ಕಂಪನಿಯಾಗಿದೆ.

ಬಿರ್ಲಾ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜು
ನಾವೆಲಿಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2024 | 10:58 AM

Share

ನ್ಯೂಯಾರ್ಕ್, ಮೇ 14: ಆದಿತ್ಯ ಬಿರ್ಲಾ ಗ್ರೂಪ್​ನ ಹಿಂಡಾಲ್ಕೋ ಇಂಡಸ್ಟ್ರೀಸ್ ಒಡೆತನದ ನಾವೆಲಿಸ್ (Novelis) ಕಂಪನಿ ಅಮೆರಿಕದಲ್ಲಿ ಐಪಿಒಗಾಗಿ ಅರ್ಜಿ ಸಲ್ಲಿಸಿದೆ. ಅಮೆರಿಕದ ಷೇರು ನಿಯಂತ್ರಣ ಪ್ರಾಧಿಕಾರವಾದ ಎಸ್​ಇಸಿ (SEC- Securities and Exchange Commission) ಬಳಿ ಫಾರ್ಮ್ ಎಫ್-1ನಲ್ಲಿ ರಿಜಿಸ್ಟ್ರೇಶನ್ ಸ್ಟೇಟ್ಮೆಂಟ್ ಅನ್ನು ಫೈಲ್ ಮಾಡಿದೆ. ತನ್ನ ಕಾಮನ್ ಶೇರ್​ಗಳನ್ನು ಐಪಿಒದಲ್ಲಿ ಬಿಕರಿ ಮಾಡುವ ಪ್ರಸ್ತಾಪವನ್ನು ನಾವೆಲಿಸ್ ಸಲ್ಲಿಸಿದೆ. ನಾವೆಲಿಸ್​ನ ಪೂರ್ಣ ಷೇರುಪಾಲು ಇರುವುದು ಹಿಂಡಅಲ್ಕೋ ಇಂಡಸ್ಟ್ರೀಸ್ ಸಂಸ್ಥೆ ಬಳಿ. ಈ ಷೇರು ಮಾರಾಟದಿಂದ ಬಂದ ಹಣ ಪೂರ್ಣವಾಗಿ ಹಿಂಡಾಲ್ಕೋ ಇಂಡಸ್ಟ್ರೀಸ್​ಗೆ ಸೇರಲಿದೆ. ಇಲ್ಲಿ ಕಾಮನ್ ಶೇರ್​ಗಳೆಂದರೆ ಷೇರು ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಾಟಕ್ಕಿರುವ ಷೇರುಗಳಾಗಿದ್ದು, ಇವುಗಳನ್ನು ಹೊಂದಿರುವವರಿಗೆ ಷೇರುದಾರಿಕೆ ಜೊತೆ ಕಂಪನಿಯಲ್ಲಿ ವೋಟಿಂಗ್ ರೈಟ್ಸ್ ಹೊಂದಿರುತ್ತಾರೆ. ಡಿವಿಡೆಂಡ್ ಪಡೆಯಲೂ ಅರ್ಹರಿರುತ್ತಾರೆ.

ವರದಿ ಪ್ರಕಾರ ನಾವೆಲಿಸ್ ಸಂಸ್ಥೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟಿಂಗ್ ಪಡೆಯಲು ಪ್ರಯತ್ನಿಸುತ್ತಿದೆ. ಎಷ್ಟು ಬೆಲೆಗೆ ಎಷ್ಟು ಷೇರುಗಳನ್ನು ಐಪಿಒದಲ್ಲಿ ಮಾರಾಟಕ್ಕಿಡಲು ನಿರ್ಧರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಐಪಿಒ ಮೂಲಕ ಸಾರ್ವಜನಿಕವಾಗಿ ಎಷ್ಟು ಬಂಡವಾಳ ಪಡೆಯಬೇಕು, ಎಷ್ಟು ದಿನದೊಳಗೆ ಐಪಿಒ ಆಗಬೇಕು ಇತ್ಯಾದಿಯನ್ನು ಕಂಪನಿ ಇನ್ನೂ ಅಂತಿಮಗೊಳಿಸಿಲ್ಲ. ತನ್ನ ಐಪಿಒ ಅರ್ಜಿಗೆ ಎಸ್​ಇಸಿ ಸಮ್ಮತಿ ಸಲ್ಲಿಸಿದ ಬಳಿಕ ನಾವೆಲಿಸ್ ತನ್ನ ಐಪಿಒ ಯೋಜನೆಯ ರೂಪುರೇಖೆ ಮಾಡಲಿದೆ.

ನಾವೆಲಿಸ್​ನ ಐಪಿಒ ಯೋಜನೆಗೆ ಮಧ್ಯವರ್ತಿಗಳಾಗಿ ವಿವಿಧ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಗನ್ ಸ್ಟಾನ್ಲೀ, ಬಿಒಎಫ್​ಎ ಸೆಕ್ಯೂರಿಟೀಸ್ ಮತ್ತು ಸಿಟಿಗ್ರೂಪ್ ಸಂಸ್ಥೆಗಳು ಬುಕ್ ರನಿಂಗ್ ಮ್ಯಾನೇಜರ್​ಗಳಾಗಿ ಮುನ್ನಡೆಸಲಿವೆ. ವೆಲ್ಸ್ ಫಾರ್ಗೋ ಸೆಕ್ಯೂರಿಟೀಸ್, ಡಾಯ್ಚೂ ಬ್ಯಾಂಕ್ ಸೆಕ್ಯೂರಿಟೀಸ್ ಮತ್ತು ಬಿಎಂಒ ಕ್ಯಾಪಿಟಲ್ ಮಾರ್ಕೆಟ್ಸ್ ಸಂಸ್ಥೆಗಳು ಈ ಕಾರ್ಯದಲ್ಲಿ ಹೆಚ್ಚುವರಿ ಮ್ಯಾನೇಜರ್ಸ್ ಆಗಿ ಕೆಲಸ ನಿಭಾಯಿಸಲಿವೆ. ಬಿಎನ್​ಪಿ ಪರಿಬಾಸ್, ಅಕಾಡೆಮಿ ಸೆಕ್ಯೂರಿಟೀಸ್, ಕ್ರೆಡಿಟ್ ಆಗ್ರಿಕೋಲ್ ಸಿಐಬಿ, ಪಿಎನ್​ಸಿ ಕ್ಯಾಪಿಟಲ್ ಮಾರ್ಕೆಟ್ಸ್ ಎಲ್​ಎಲ್​ಸಿ, ಎಸ್​ಎಂಬಿಸಿ ನಿಕ್ಕೋ ಅವರು ಸಹಾಯಕ ನಿರ್ವಾಹಕರಾಗಿ ನಾವೆಲಿಸ್ ಐಪಿಒ ಜಾರಿಗೆ ಸಹಾಯವಾಗಲಿವೆ.

ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ

ಅಮೆರಿಕದಲ್ಲಿ ಎರಡು ವರ್ಷದ ಬಳಿಕ ಐಪಿಒ ಮಾರುಕಟ್ಟೆ ಕಳೆಗಟ್ಟಿದೆ. ಆರ್ಥಿಕ ಹಿಂಜರಿತ, ಉದ್ಯೋಗನಷ್ಟ ಇಲ್ಲದೇ ಹಣದುಬ್ಬರ ಕಡಿಮೆ ಆಗುತ್ತಿದ್ದು ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಂತಿದೆ. ಈ ಹಂತದಲ್ಲಿ ಸರಿಯಾದ ಸಂದರ್ಭದಲ್ಲಿ ನಾವೆಲಿಸ್ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಲು ಹೊರಟಿದೆ. ಅಂದಹಾಗೆ, ಆದಿತ್ಯ ಬಿರ್ಲಾ ಗ್ರೂಪ್​ಗೆ ಸೇರಿದ ನಾವೆಲಿಸ್ ಸಂಸ್ಥೆ ಫ್ಲ್ಯಾಟ್ ರೋಲ್ಡ್ ಅಲೂಮಿನಿಯಮ್ ಉತ್ಪನ್ನಗಳನ್ನು ತಯಾರಿಸುವ ವಿಶ್ವದ ಅತಿದೊಡ್ಡ ಕಂಪನಿ. ಇದರ ಉತ್ಪನ್ನಗಳು ಕಾರುಗಳಿಂದ ಹಿಡಿದು ಸೋಡಾ ಕ್ಯಾನ್​ವರೆಗೆ ಹಲವು ಸರಕುಗಳಲ್ಲಿ ಬಳಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್