Hallmark Gold: ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನಕ್ಕೆ ನಿಷೇಧ; ಹಳೆಯ ಒಡವೆ ಹೊಂದಿದವರು ಏನು ಮಾಡಬೇಕು?

No Sale of Gold Without Hallmark: ಹಾಲ್​ಮಾರ್ಕ್ ಇಲ್ಲದ ಚಿನ್ನವನ್ನು ಮಾರುವಂತಿಲ್ಲ ಎಂದು 2021ರಲ್ಲಿ ಸರ್ಕಾರ ಕಡ್ಡಾಯಪಡಿಸಿತ್ತು. ಅದರಂತೆ ಏಪ್ರಿಲ್ 1ರಿಂದ ಇಂಥ ಒಡವೆಯ ಮಾರಾಟಕ್ಕೆ ನಿಷೇಧ ಹಾಕಲಾಗಿದೆ. ಇದು ಒಡವೆ ಅಂಗಡಿಯವರಿಗೆ ಹೊರಡಿಸಿರುವ ಆದೇಶ. ಹಾಗಾದರೆ, ಕೆಡಿಎಂ ಇತ್ಯಾದಿ ಗುರುತಿನ ಚಿನ್ನ ಇಟ್ಟುಕೊಂಡಿರುವ ಸಾಮಾನ್ಯರು ಏನು ಮಾಡಬೇಕು? ಇದರ ವಿವರ ಇಲ್ಲಿದೆ....

Hallmark Gold: ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನಕ್ಕೆ ನಿಷೇಧ; ಹಳೆಯ ಒಡವೆ ಹೊಂದಿದವರು ಏನು ಮಾಡಬೇಕು?
ಹಾಲ್ ಮಾರ್ಕ್ ಚಿನ್ನ
Follow us
|

Updated on:Mar 09, 2023 | 6:49 PM

ಬೆಂಗಳೂರು: ಭಾರತದಲ್ಲಿರುವ ಯಾವುದೇ ಒಡವೆ ಅಂಗಡಿಗಳು, ಚಿನ್ನದ ವ್ಯಾಪಾರಿಗಳು ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನವನ್ನು (Gold without Hallmark) ಮಾರುವಂತಿಲ್ಲ. ಚಿನ್ನದ ಗುಣಮಟ್ಟ ಕಾಪಾಡಲು, ಅಕ್ರಮ ಮಾರಾಟ ತಡೆಯಲು ಮತ್ತು ಪ್ರತೀ ಒಡವೆಯನ್ನೂ ಟ್ರೇಸ್ ಮಾಡಲು ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. 2023, ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಒಡವೆಯ ಮಾರಾಟ ನಿಷೇಧಿಸಲಾಗಿದೆ. ಹಾಲ್​ಮಾರ್ಕ್ ಇರುವ ಒಡವೆಯ ಶುದ್ಧತೆಯ ಮಟ್ಟ ಇತ್ಯಾದಿಯನ್ನು ಯಾರು ಬೇಕಾದರೂ ಪರಿಶೀಲಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಒಡವೆಗೂ ನೀಡಲಾಗುವ ಹೆಚ್​ಯುಐಡಿ (HUID) ಇರುವ ಹಾಲ್​ಮಾರ್ಕ್ ವಿಶೇಷವಾಗಿರುತ್ತದೆ. ಒಂದೊಂದು ಒಡವೆಯ ಐಡಿ ಗುರುತು ಭಿನ್ನವಾಗಿರುತ್ತದೆ.

ಒಡವೆಯ ಗುಣಮಟ್ಟಕ್ಕೆ ಗುರುತು ಕೊಡುವ ಕಾರ್ಯ ಹಳೆಯದ್ದೇ. ಹಿಂದೆ ಕೆಡಿಎಂ (KDM Gold) ಮಾರ್ಕ್ ಹಾಕಲಾಗುತ್ತಿತ್ತು. ಆ ಬಳಿಕ ಹಾಲ್​ಮಾರ್ಕ್ ವ್ಯವಸ್ಥೆ ಬಂದಿತು. ಸರ್ಕಾರ 2021ರ ಜೂನ್ ತಿಂಗಳಲ್ಲೇ ಚಿನ್ನಕ್ಕೆ ಹಾಲ್​ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಿತು. ಹಾಲ್​ಮಾರ್ಕ್ ಇಲ್ಲದ ಒಡವೆಗಳು ಈಗಾಗಲೇ ಇದ್ದಲ್ಲಿ ಅದನ್ನು ಪೂರ್ಣವಾಗಿ ಮಾರಲು ಒಂದು ವರ್ಷ 9 ತಿಂಗಳ ಕಾಲಾವಕಾಶ ಕೊಟ್ಟಿತು. ಆ ಗಡುವು ಮುಗಿಯುತ್ತಿದ್ದು, ಏಪ್ರಿಲ್ 1ರಿಂದ ಹಾಲ್​ಮಾರ್ಕ್ ಇಲ್ಲದ ಚಿನ್ನದ ಮಾರಾಟವನ್ನು ನಿಷೇಧಿಸಲಾಗುತ್ತಿದೆ.

ಇದನ್ನೂ ಓದಿBIG FD Rates: ಬೆಂಗಳೂರಿನ ರಿಯಲ್ ಎಸ್ಟೇಟ್ ಅನ್ನೂ ಮೀರಿಸುತ್ತದೆ ಈ ಜನ ಬ್ಯಾಂಕ್​ನ ಎಫ್​ಡಿ ರಿಟರ್ನ್ಸ್

ಆರು ಡಿಜಿಟ್ ಸಂಖ್ಯೆಯ ಹಾಲ್​ಮಾರ್ಕ್

ಚಿನ್ನ ಬಹಳ ಮೃದುವಾಗಿರುವ ಲೋಹ. ಅದನ್ನು ಯಥಾವತ್ತಾಗಿ ಒಡವೆಗೆ ಬಳಸಲು ಆಗುವುದಿಲ್ಲ. ಅದಕ್ಕೆ ಇತರ ಕೆಲ ನಿರ್ದಿಷ್ಟ ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. 24 ಕ್ಯಾರಟ್​ನದ್ದು ಅಪರಂಜಿ ಚಿನ್ನ, ಅಂದರೆ ಶುದ್ಧಚಿನ್ನ. 22 ಕ್ಯಾರಟ್ ಚಿನ್ನ ಎಂದರೆ ಸ್ವಲ್ಪವಾಗಿ ಇತರ ಲೋಹ ಮಿಶ್ರವಾಗಿರುವ ಚಿನ್ನ. ಸಾಮಾನ್ಯವಾಗಿ ಒಡವೆಗಳಿಗೆ 22 ಕ್ಯಾರಟ್ ಚಿನ್ನವನ್ನೇ ಬಳಲಾಗುತ್ತದೆ. ಕೆಲ ಒಡವೆಗಳಿಗೆ 18ಕ್ಯಾರಟ್ ಮತ್ತು 14 ಕ್ಯಾರಟ್ ಚಿನ್ನವನ್ನೂ ಬಳಸುವುದುಂಟು. ಚಿನ್ನದ ಪ್ರಮಾಣ ಕಡಿಮೆ ಆದಷ್ಟೂ ಆ ಒಡವೆಯ ಮೌಲ್ಯವೂ ಕಡಿಮೆ ಆಗುತ್ತದೆ. ಹೀಗಾಗಿ, 24 ಕ್ಯಾರಟ್ ಚಿನ್ನಕ್ಕೆ ಗರಿಷ್ಠ ಬೆಲೆ ಇದ್ದರೆ, 22 ಕ್ಯಾರಟ್ ಚಿನ್ನಕ್ಕೆ ತುಸು ಕಡಿಮೆ ಬೆಲೆ ಇರುತ್ತದೆ. 22 ಕ್ಯಾರಟ್ ಮಟ್ಟದಲ್ಲಿ ಶೇ. 91.6ರಷ್ಟು ಚಿನ್ನ ಇರುತ್ತದೆ. 14 ಕ್ಯಾರಟ್ ಚಿನ್ನದಲ್ಲಿ ಶೇ. 58.5ರಷ್ಟು ಮಾತ್ರವೇ ಚಿನ್ನ ಇರುತ್ತದೆ.

ಈಗ ಹಾಲ್​ಮಾರ್ಕ್ ವಿಚಾರಕ್ಕೆ ಬರುವುದಾದರೆ ಇದು ಚಿನ್ನದ ಶುದ್ಧತೆ ಇತ್ಯಾದಿಯನ್ನು ತಿಳಿಸುವ ಐಡಿಯಾಗಿದೆ. ಪ್ರತಿಯೊಂದು ಒಡವೆಯಲ್ಲೂ ಈ ಗುರುತನ್ನು ಹಾಕಲಾಗುತ್ತದೆ. ಅದರಲ್ಲಿ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ಹಾಲ್​ಮಾರ್ಕ್ ಲೋಗೊ ಇರುತ್ತದೆ. ಶುದ್ಧತೆಯ ಮಟ್ಟ ತಿಳಿಸುವ ನಂಬರ್, ಹಾಗೂ ಎಚ್​ಯುಐಡಿ ನಂಬರ್ ಇವುಗಳನ್ನು ಒಡವೆಯ ಒಳಭಾಗದಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿGrow Money: ಎಫ್​ಡಿ, ಇನ್ಷೂರೆನ್ಸ್​ಗಿಂತ ಇವು ಎಷ್ಟೋ ಬೆಟರ್; ಹೆಚ್ಚು ರಿಸ್ಕ್ ಇಲ್ಲದ ಉತ್ತಮ ಹೂಡಿಕೆಗಳಿವು

ಹೆಚ್​ಯುಐಡಿ ಪ್ರತಿಯೊಂದು ಒಡವೆಗೂ ಭಿನ್ನವಾಗಿರುತ್ತದೆ. ಈ ಐಡಿ ಮೂಲಕ ಒಡವೆಯ ಲೈಸೆನ್ಸ್ ವಿವರ ಸೇರಿದಂತೆ ಅದರ ಅಧಿಕೃತತೆಯನ್ನು ಪತ್ತೆ ಮಾಡಬಹುದು. ಅದಕ್ಕಾಗಿ ಗೂಗಲ್ ಪ್ಲೇಸ್ಟೋರ್​ನಲ್ಲಿ ಬಿಐಎಸ್ ಕೇರ್ ಹೆಸರಿನಲ್ಲಿ ಒಂದು ಆ್ಯಪ್ ಕೂಡ ಇದೆ.

ಬಿಐಎಸ್ ಮಾನ್ಯತೆ ನೀಡಿದ ಅಸ್ಸೇಯಿಂಗ್ ಅಂಡ್ ಹಾಲ್ಮಾರ್ಕಿಂಗ್ ಸೆಂಟರ್​ಗಳು ಬಹುತೇಕ ಎಲ್ಲಾ ನಗರಗಳಲ್ಲೂ ಇರುತ್ತವೆ. ಅಲ್ಲಿಗೆ ಹೋಗಿ ಸಣ್ಣ ಮೊತ್ತದ ಶುಲ್ಕ ಪಾವತಿಸಿ ಒಡವೆಯನ್ನು ಪರೀಕ್ಷಿಸಬಹುದು.

ಇದನ್ನೂ ಓದಿCryptos Under Law: ಕ್ರಿಪ್ಟೋ ವಹಿವಾಟಿಗೆ ಪಿಎಂಎಲ್​ಎ ಕಾನೂನು ಅನ್ವಯ; ಗುಪ್ತ ವ್ಯವಹಾರ ರಹಸ್ಯವಾಗಿ ಉಳಿಯಲ್ಲ

ಹಳೆಯ ಒಡವೆ ಹೊಂದಿರುವವರು ಏನು ಮಾಡಬೇಕು?

ಹಳೆಯ ಒಡವೆ ಮಾರಬೇಕೆನ್ನುವ ಜನಸಾಮಾನ್ಯರಿಗೆ ಯಾವ ತೊಡಕೂ ಇರುವುದಿಲ್ಲ. ಹಳೆಯ ಒಡವೆಗಳಿಗೆ ಹಾಲ್​ಮಾರ್ಕ್ ಇರುವುದು ಕಡಿಮೆ. ಆದರೆ, ಹಾಲ್ಮಾರ್ಕ್ ಸೆಂಟರ್​ಗಳಿಗೆ ಹೋಗಿ ಒಡವೆಯ ಶುದ್ಧತೆಯ ಪರೀಕ್ಷೆ ಮಾಡಿಸಿಕೊಂಡು ಆ ನಂತರ ಅದನ್ನು ಮಾರಬಹುದು. ಈ ಹಳೆಯ ಒಡವೆಯನ್ನು ಕೊಳ್ಳುವ ಒಡವೆ ಅಂಗಡಿಯವರು ಈ ಚಿನ್ನವನ್ನು ಕರಗಿಸಿ ಹೊಸ ಒಡವೆ ಮಾಡಿ ಅದಕ್ಕೆ ಹಾಲ್​ಮಾರ್ಕ್ ಸರ್ಟಿಫಿಕೇಶನ್ ಮಾಡಿಸಬೇಕಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Thu, 9 March 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ