PMJJBY Insurance Premium: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಬಿಮಾ ಯೋಜನೆ ವಿಮಾ ಕಂತುಗಳನ್ನು ಹೆಚ್ಚಿಸಿದ ಸರ್ಕಾರ

ಕೇಂದ್ರ ಸರ್ಕಾರವು ಪಿಎಮಜೆಜೆಬಿವೈ ಮತ್ತ ಪಿಎಂಎಸ್​ಬಿವೈ ವಿಮಾ ಕಂತು ದರವನ್ನು ಹೆಚ್ಚಳ ಮಾಡಿದೆ, ಆ ಬಗ್ಗೆ ವಿವರ ಇಲ್ಲಿದೆ.

PMJJBY Insurance Premium: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಬಿಮಾ ಯೋಜನೆ ವಿಮಾ ಕಂತುಗಳನ್ನು ಹೆಚ್ಚಿಸಿದ ಸರ್ಕಾರ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jun 02, 2022 | 8:18 AM

ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)ಗಾಗಿ ಸರ್ಕಾರವು ವಿಮಾ ಪ್ರೀಮಿಯಂ ದರಗಳನ್ನು ಹೆಚ್ಚಿಸಿದೆ. ಹೊಸ ದರಗಳು ಜೂನ್ 1, 2022ರಿಂದ ಜಾರಿಗೆ ಬಂದಿವೆ ಎಂದು ಪಿಐಬಿ ಪತ್ರಿಕಾ ಪ್ರಕಟಣೆ ತಿಳಿಸಿದೆ. ಅದರ ಪ್ರಕಾರ, ಏಳು ವರ್ಷಗಳ ಹಿಂದೆ 2015ರಲ್ಲಿ ಯೋಜನೆಗಳನ್ನು ಪ್ರಾರಂಭಿಸಿದಾಗಿನಿಂದ ಇದು ಮೊದಲ ಬಾರಿಗೆ ಪ್ರೀಮಿಯಂ ದರಗಳನ್ನು ಹೆಚ್ಚಿಸಲಾಗಿದೆ. ಎರಡೂ ಯೋಜನೆಗಳ ಪ್ರೀಮಿಯಂ ದರಗಳನ್ನು ಪರಿಷ್ಕರಿಸಲಾಗಿದೆ, ಜತೆಗೆ PMJJBY ಅನ್ನು ರೂ. 330 ರಿಂದ ರೂ. 436 ಮತ್ತು PMSBY ಅನ್ನು ರೂ. 12ರಿಂದ ರೂ. 20ಕ್ಕೆ ಹೆಚ್ಚಿಸಲಾಗುತ್ತಿದೆ.

ಪಿಎಂಜೆಜೆಬಿವೈ (PMJJBY) ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಒಂದು ವರ್ಷದ, ನವೀಕರಿಸಬಹುದಾದ ಜೀವ ವಿಮಾ ಯೋಜನೆಯಾಗಿದ್ದು, ಅದು ಮರಣ ರಕ್ಷಣೆಯನ್ನು ಒದಗಿಸುತ್ತದೆ. PMJJBY ಕವರೇಜ್ ಸಾವಿಗೆ ಮಾತ್ರ. ಆದ್ದರಿಂದ ಲಾಭವು ನಾಮಿನಿಗೆ ಮಾತ್ರ ಹೋಗುತ್ತದೆ. PMJJBY ಒಂದು ಶುದ್ಧ ಟರ್ಮ್ ವಿಮಾ ಪಾಲಿಸಿಯಾಗಿದ್ದು, ಯಾವುದೇ ಹೂಡಿಕೆ ಘಟಕವನ್ನು ಹೊಂದಿರುವುದಿಲ್ಲ. ಅದು ಕೇವಲ ಮರಣದ ಅಪಾಯವನ್ನು ಮಾತ್ರ ಒಳಗೊಂಡಿರುತ್ತದೆ.

ಪಿಎಂಎಸ್​ಬಿವೈ (PMSBY) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಒಂದು ರೀತಿಯ ವೈಯಕ್ತಿಕ ಅಪಘಾತ ವಿಮೆಯಾಗಿದ್ದು, ಅಪಘಾತದ ಪರಿಣಾಮವಾಗಿ ಸಾವು ಅಥವಾ ಅಂಗವೈಕಲ್ಯದಿಂದ ನಿಮ್ಮನ್ನು ರಕ್ಷಿಸುತ್ತದೆ. ವಿಮಾ ರಕ್ಷಣೆಯು ಒಂದು ವರ್ಷಕ್ಕೆ, ಜೂನ್ 1ರಂದು ಪ್ರಾರಂಭವಾಗಿ ಮೇ 31ರಂದು ಕೊನೆಗೊಳ್ಳುತ್ತದೆ. ಈ ಯೋಜನೆಯು ಒಟ್ಟು ರೂ. 2 ಲಕ್ಷ ವಿಮಾ ಮೊತ್ತವನ್ನು ಒಳಗೊಂಡಿದೆ.

ಕೊವಿಡ್ ಸಮಯದಲ್ಲಿ ಈ ಯೋಜನೆಗಳ ಮೂಲಕ ಪ್ರಯೋಜನಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಯಿತು. ಮತ್ತು ಕಾರ್ಯವಿಧಾನಗಳನ್ನು ಸರಳೀಕರಿಸಲು ಹಾಗೂ ಕ್ಲೇಮ್‌ಗಳನ್ನು ಶೀಘ್ರಗೊಳಿಸಲು ಕೊವಿಡ್ ಸಮಯದಲ್ಲಿ ಮರಣ ಹೊಂದಿದ ಜನರಿಗೆ ಫಲಾನುಭವಿಗಳನ್ನು ತಲುಪಲು ಬ್ಯಾಂಕ್‌ಗಳಿಂದ ಸಂದೇಶಗಳು ಮತ್ತು ಔಟ್​ರೀಚ್ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕ್ರಮಗಳನ್ನು ಜಾರಿಗೆ ತರಲಾಯಿತು.

ಪಿಐಬಿ ಬಿಡುಗಡೆಯ ಪ್ರಕಾರ, “31.3.2022ರಂತೆ, PMJJBY ಮತ್ತು PMSBYನಲ್ಲಿ ಕ್ರಮವಾಗಿ 6.4 ಕೋಟಿ ಮತ್ತು 22 ಕೋಟಿ ಸಕ್ರಿಯ ಸದಸ್ಯರು ದಾಖಲಾಗಿದ್ದಾರೆ. 31.3.2022ರಂತೆ, ಅನುಷ್ಠಾನಗೊಳಿಸುವ ವಿಮಾದಾರರು 1,134 ಕೋಟಿ ರೂಪಾಯಿಗಳನ್ನು ಪ್ರೀಮಿಯಂನಲ್ಲಿ ಸಂಗ್ರಹಿಸಿದ್ದಾರೆ ಮತ್ತು PMSBY ಅಡಿಯಲ್ಲಿ 2,513 ಕೋಟಿ ಕ್ಲೇಮ್‌ಗಳನ್ನು ಪಾವತಿಸಿದ್ದಾರೆ. ಅಲ್ಲದೆ, 31.3.2022ರಂತೆ, ಅನುಷ್ಠಾನಗೊಳಿಸುವ ವಿಮಾದಾರರು ರೂ. 9,737 ಕೋಟಿ ಪ್ರೀಮಿಯಂನಲ್ಲಿ ಸಂಗ್ರಹಿಸಿದ್ದು, PMJJBY ಅಡಿಯಲ್ಲಿ ಕ್ಲೇಮ್‌ಗಳಲ್ಲಿ 14,144 ಕೋಟಿ ರೂ. ಪಾವತಿಸಲಾಗಿದೆ. ಎರಡೂ ಯೋಜನೆಗಳ ಅಡಿಯಲ್ಲಿ ಕ್ಲೇಮ್‌ಗಳನ್ನು ಸ್ವೀಕರಿಸುವವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು DBT (ಡೈರಕ್ಟ್ ಬೆನಿಫಿಟ್ ಟ್ರಾನ್ಸ್​ಫರ್) ಚಾನಲ್ ಅನ್ನು ಬಳಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ,  ಪ್ರಮಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Complaints About Insurance: ಇನ್ಷೂರೆನ್ಸ್​ ಬಗೆಗಿನ ಯಾವುದೇ ದೂರುಗಳಿದ್ದಲ್ಲಿ ಸಲ್ಲಿಸುವುದಕ್ಕೆ ಇಲ್ಲಿದೆ ವಿವಿಧ ವಿಧಾನ