AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green FD: ಗ್ರೀನ್ ಫಿಕ್ಸೆಡ್ ಡೆಪಾಸಿಟ್; ಗ್ರಾಹಕರ ಹಣದಿಂದ ಯಾರಿಗೆ ಸಾಲ? ಬ್ಯಾಂಕುಗಳಿಂದ ಆರ್​ಬಿಐಗೆ ಮಾಹಿತಿ ಕಡ್ಡಾಯ; ಇದೇನಿದು ಗ್ರೀನ್ ಎಫ್​ಡಿ?

ಗ್ರೀನ್ ಬಾಂಡ್ ಬಗ್ಗೆ ನೀವು ಕೇಳಿರಬಹುದು. ಈಗ ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Green FD) ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಈ ಹಸಿರು ನಿಶ್ಚಿತ ಠೇವಣಿ ಯೋಜನೆ ಸಂಬಂಧ ಆರ್​ಬಿಐ ಹೊಸ ನಿಯಮ ಮಾಡಿದ್ದು, ಜೂನ್ 1ರಿಂದ ಇದು ಚಾಲ್ತಿಗೆ ಬಂದಿದೆ. ಈ ಬದಲಾದ ನಿಯಮದ ಪ್ರಕಾರ, ಗ್ರೀನ್ ಡೆಪಾಸಿಟ್ ಪ್ಲಾನ್​ನಲ್ಲಿ ಗ್ರಾಹಕ ಇರಿಸುವ ಠೇವಣಿ ಹಣವನ್ನು ಬ್ಯಾಂಕುಗಳು ಎಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಆರ್​ಬಿಐಗೆ ತಿಳಿಸುವುದು ಕಡ್ಡಾಯಪಡಿಸಲಾಗಿದೆ.

Green FD: ಗ್ರೀನ್ ಫಿಕ್ಸೆಡ್ ಡೆಪಾಸಿಟ್; ಗ್ರಾಹಕರ ಹಣದಿಂದ ಯಾರಿಗೆ ಸಾಲ? ಬ್ಯಾಂಕುಗಳಿಂದ ಆರ್​ಬಿಐಗೆ ಮಾಹಿತಿ ಕಡ್ಡಾಯ; ಇದೇನಿದು ಗ್ರೀನ್ ಎಫ್​ಡಿ?
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 07, 2026 | 7:43 PM

Share

ಗ್ರೀನ್ ಬಾಂಡ್ ಬಗ್ಗೆ ನೀವು ಕೇಳಿರಬಹುದು. ಈಗ ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Green FD) ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಈ ಹಸಿರು ನಿಶ್ಚಿತ ಠೇವಣಿ ಯೋಜನೆ ಸಂಬಂಧ ಆರ್​ಬಿಐ ಹೊಸ ನಿಯಮ ಮಾಡಿದ್ದು, ಜೂನ್ 1ರಿಂದ ಇದು ಚಾಲ್ತಿಗೆ ಬಂದಿದೆ. ಈ ಬದಲಾದ ನಿಯಮದ ಪ್ರಕಾರ, ಗ್ರೀನ್ ಡೆಪಾಸಿಟ್ ಪ್ಲಾನ್​ನಲ್ಲಿ ಗ್ರಾಹಕ ಇರಿಸುವ ಠೇವಣಿ ಹಣವನ್ನು ಬ್ಯಾಂಕುಗಳು ಎಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಆರ್​ಬಿಐಗೆ ತಿಳಿಸುವುದು ಕಡ್ಡಾಯಪಡಿಸಲಾಗಿದೆ. ಪರಿಸರ ಕಾಳಜಿಯಿಂದ ಠೇವಣಿ ಇಡುವ ಗ್ರಾಹಕರ ಹೂಡಿಕೆ ನೈಜ ಉದ್ದೇಶಕ್ಕೆ ಬಳಕೆ ಆಗುವುದನ್ನು ಖಾತ್ರಿಪಡಿಸಲು ರಿಸರ್ವ್ ಬ್ಯಾಂಕ್ ಇಂತಹದ್ದೊಂದು ನಿಯಮ ರೂಪಿಸಿದೆ.

ಏನಿದು ಗ್ರೀನ್ ಡೆಪಾಸಿಟ್?

ಗ್ರೀನ್ ಡೆಪಾಸಿಟ್​ನಲ್ಲಿ ಗ್ರಾಹಕರು ಇರಿಸುವ ಠೇವಣಿ ಹಣವನ್ನು ಪರಿಸರಸ್ನೇಹಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ. ಮರುಬಳಕೆ ಇಂಧನ ಯೋಜನೆ, ಎಲೆಕ್ಟ್ರಿಕ್ ವಾಹನ ತಯಾರಿಕೆ, ಕಸ ತ್ಯಾಜ್ಯ ನಿರ್ವಹಣೆ ಇತ್ಯಾದಿ ಯೋಜನೆಗಳಿಗೆ ಬ್ಯಾಂಕುಗಳು ಸಾಲ ಕೊಡಲು ಗ್ರೀನ್ ಡೆಪಾಸಿಟ್ ಹಣವನ್ನು ಬಳಸುತ್ತವೆ. ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿ (ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ಸ್) ಈಡೇರಿಸುವ ಯೋಜನೆಗಳಿಗೆ ಈ ಹಣ ವ್ಯಯವಾಗಬೇಕು. ಬೇರೆ ಯಾವ ಯೋಜನೆಗಳಿಗೂ ಗ್ರೀನ್ ಡೆಪಾಸಿಟ್​ನ ಹಣವನ್ನು ಸಾಲವಾಗಿ ನೀಡುವಂತಿಲ್ಲ. ಗ್ರೀನ್ ಬಾಂಡ್​ಗಳಂತೆಯೇ ಗ್ರೀನ್ ಡೆಪಾಸಿಟ್​ಗಳೂ ಬಳಕೆಯ ಅಗುತ್ತವೆ.

ತಮ್ಮ ಹಣ ಪರಿಸರಸ್ನೇಹಿ ಕಾರ್ಯಗಳಿಗೆ ಸಹಾಯವಾಗಲಿ ಎಂಬ ಉದ್ದೇಶ ಇರುವವರು ಇಂಥ ಗ್ರೀನ್ ಸ್ಕೀಮ್​ಗಳನ್ನು ಪಡೆದುಕೊಳ್ಳಬಹುದು. ಪರಿಸರಸ್ನೇಹಿ ಯೋಜನೆಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ ತೃಪ್ತಿ ಹೂಡಿಕೆದಾರರಿಗೆ ಸಿಗುತ್ತದೆ.

ಗ್ರೀನ್ ಡೆಪಾಸಿಟ್ ಸ್ಕೀಂ​ಗೆ ಬಡ್ಡಿ ಎಷ್ಟು ಇತ್ಯಾದಿ ವಿವರ…

ಯೂನಿಯನ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಎಚ್​ಎಸ್​ಬಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಹೀಗೆ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲೂ ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ಇಡಬಹುದು. ಇದಕ್ಕೆ ನೀಡಲಾಗುವ ಬಡ್ಡಿ ವಿವಿಧ ಬ್ಯಾಂಕುಗಳಲ್ಲಿ ವಿವಿಧ ದರಗಳಿವೆ.

ಎಚ್​ಡಿಎಫ್​ಸಿಯ ಗ್ರೀನ್ ಎಫ್​ಡಿ ಸ್ಕೀಮ್​ನಲ್ಲಿ 3 ವರ್ಷದಿಂದ 5 ವರ್ಷದವರೆಗಿನ ಅವಧಿಯ ಠೇವಣಿಗೆ ವರ್ಷಕ್ಕೆ ಶೇ. 7.3ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 0.25ರಷ್ಟು ಹೆಚ್ಚು ಬಡ್ಡಿ ಬರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:46 pm, Fri, 2 June 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More