GST: 10 ಕೋಟಿ ವಹಿವಾಟು ನಡೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ

ಅಕ್ಟೋಬರ್ 1 ರಿಂದ ಜಿಎಸ್‌ಟಿ ಅಡಿಯಲ್ಲಿ ಇ-ಇನ್‌ವಾಯ್ಸಿಂಗ್‌ಗೆ ಸಂಬಂಧಿಸಿದಂತೆ ಬದಲಾವಣೆಗಳು ನಡೆಯಲಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಇ-ಇನ್‌ವಾಯ್ಸಿಂಗ್‌ನ ವಹಿವಾಟಿನ ಮಿತಿಯನ್ನು ಸರ್ಕಾರವು 20 ಕೋಟಿಯಿಂದ 10 ಕೋಟಿಗೆ ಇಳಿಯಲಿದೆ.

GST: 10 ಕೋಟಿ ವಹಿವಾಟು ನಡೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ
ಅಕ್ಟೋಬರ್ 1 ರಿಂದ ಜಿಎಸ್‌ಟಿ ಅಡಿಯಲ್ಲಿ ಇ-ಇನ್‌ವಾಯ್ಸಿಂಗ್‌ಗೆ ಸಂಬಂಧಿಸಿದಂತೆ ಬದಲಾವಣೆ
Edited By:

Updated on: Sep 27, 2022 | 4:14 PM

ನೀವು 10 ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದರೆ ಜಿಎಸ್‌ಟಿಗೆ ಸಂಬಂಧಿಸಿದ ಈ ಮಾಹಿತಿಯು ನಿಮಗೆ ತುಂಬಾ ಮುಖ್ಯವಾಗಿದೆ. ಏಕೆಂದರೆ ಅಕ್ಟೋಬರ್ 1 ರಿಂದ ಜಿಎಸ್‌ಟಿ ಅಡಿಯಲ್ಲಿ ಇ-ಇನ್‌ವಾಯ್ಸಿಂಗ್‌ಗೆ ಸಂಬಂಧಿಸಿದಂತೆ ಬದಲಾವಣೆಗಳು ನಡೆಯಲಿವೆ. ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇ-ಚಲನ್ (E-Invoicing)ನ ವಹಿವಾಟಿನ ಮಿತಿಯನ್ನು ಸರ್ಕಾರವು 20 ಕೋಟಿಯಿಂದ 10 ಕೋಟಿಗೆ ಇಳಿಸಲಿದೆ. ಈ ನಿಯಮವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ದೊಡ್ಡ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸುವುದು, ಮಾರಾಟದಲ್ಲಿ ಪಾರದರ್ಶಕತೆ, ತಪ್ಪುಗಳನ್ನು ಕಡಿಮೆ ಮಾಡುವುದು, ಸ್ವಯಂಚಾಲಿತ ಮತ್ತು ಡೇಟಾ ಎಂಟ್ರಿ ಕೆಲಸವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೂಲಗಳ ಪ್ರಕಾರ, ಆದಾಯ ಕೊರತೆಯನ್ನು ತಗ್ಗಿಸಲು ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರವು ಭವಿಷ್ಯದಲ್ಲಿ 5 ಕೋಟಿ ರೂಪಾಯಿಗಳ ವಹಿವಾಟಿಗೆ ಕೊಂಡೊಯ್ಯಬಹುದು. ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳಿಗೆ ಅನುಗುಣವಾಗಿ ಪ್ರಸ್ತುತ ಮಿತಿಯನ್ನು ಪರಿಷ್ಕರಿಸಿ ಪರೋಕ್ಷ ತೆರಿಗೆಗಳ ಕಸ್ಟಮ್ಸ್ ಕೇಂದ್ರೀಯ ಮಂಡಳಿ (CBIC) ಸೋಮವಾರ ತಡರಾತ್ರಿ ಈ ಆದೇಶ ಹೊರಡಿಸಿದೆ.

ಜಿಎಸ್‌ಟಿ ಇ-ಚಲನ್ ಕಡ್ಡಾಯ

ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಕೋಟಿ ರೂ. ಮತ್ತು ನಂತರ 5 ಕೋಟಿ ರೂ. ವಹಿವಾಟು ನಡೆಸುವ ಕಂಪನಿಗಳಿಗೆ ಜಿಎಸ್‌ಟಿ ಇ-ಇನ್‌ವಾಯ್ಸಿಂಗ್ ಕಡ್ಡಾಯಗೊಳಿಸುವ ಸರ್ಕಾರದ ಯೋಜನೆ ಕುರಿತು ಬಿಸಿನೆಸ್ ಸ್ಟ್ಯಾಂಡರ್ಡ್ ಜುಲೈ 4ರಂದು ವರದಿ ಮಾಡಿತ್ತು. ಇ-ಇನ್‌ವಾಯ್ಸಿಂಗ್ (ಎಲೆಕ್ಟ್ರಾನಿಕ್ ಬಿಲ್ಲಿಂಗ್) ಅಕ್ಟೋಬರ್ 2020 ರಲ್ಲಿ ಪ್ರಾರಂಭವಾಯಿತು. ಅದರಂತೆ 500 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಘಟಕಗಳಿಗೆ ಕಡ್ಡಾಯಗೊಳಿಸಲಾಗಿದೆ.

ಈ ಮಿತಿಯನ್ನು ಬ್ಯುಸಿನೆಸ್-ಟು-ಬಿಸಿನೆಸ್ (B2B) ವಹಿವಾಟುಗಳಿಗೆ 100 ಕೋಟಿ ರೂಪಾಯಿಗಳಿಗೆ ಮತ್ತು ನಂತರ 2021 ರಲ್ಲಿ 50 ಕೋಟಿಗೆ ಇಳಿಸಲಾಯಿತು. ತೆರಿಗೆದಾರರು ತಮ್ಮ ಸಿಸ್ಟಮ್ ಅಥವಾ ಬಿಲ್ಲಿಂಗ್ ಸಾಫ್ಟ್‌ವೇರ್‌ನಲ್ಲಿ ಇನ್‌ವಾಯ್ಸ್ ಅನ್ನು ಉತ್ಪಾದಿಸಬೇಕು ಮತ್ತು ನಂತರ ಅವುಗಳನ್ನು ಇನ್‌ವಾಯ್ಸ್ ನೋಂದಣಿ ಪೋರ್ಟಲ್ (IRP) ನಲ್ಲಿ ವರದಿ ಮಾಡಬೇಕು. ಇದಕ್ಕಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅಗತ್ಯವಿರುತ್ತದೆ.

ಹೊಸ ಆರ್ಥಿಕ ವರ್ಷದ ಆರಂಭದಿಂದ ಅಂದರೆ 2022ರ ಅಕ್ಟೋಬರ್ 1ರಿಂದ ಇಂತಹ ಹಲವು ನಿಯಮಗಳಲ್ಲಿ ಆಗಲಿರುವ ಬದಲಾವಣೆಗಳು ಶ್ರೀಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಹ ಒಂದು ಹೊಸ ನಿಯಮದ ಪ್ರಕಾರ, ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಅ.1 ರಿಂದ ಇ-ಇನ್‌ವಾಯ್ಸ್ ಅನ್ನು ಕಡ್ಡಾಯಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (ಸಿಬಿಐಸಿ) ಸುತ್ತೋಲೆಯ ಪ್ರಕಾರ, B2B ವ್ಯಾಪಾರ ಮಾಡುವ ಮತ್ತು ವಾರ್ಷಿಕ ವಹಿವಾಟು 10 ಕೋಟಿ ರೂ.ಗಿಂತ ಹೆಚ್ಚು ಇರುವ ಎಲ್ಲಾ ವ್ಯಾಪಾರಿಗಳು ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ಚಲನ್ ಅನ್ನು ರಚಿಸಬೇಕಾಗುತ್ತದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Tue, 27 September 22