Gold Price on 28th September 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು ಭಾರೀ ಕುಸಿತವಾಗಿದೆ. ಬೆಳ್ಳಿ ಬೆಲೆಯಲ್ಲಿ (Silver Price) ಕೂಡ ಇಂದು 900 ರೂ. ಇಳಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ. 3 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಇದ್ದುದು 45,800 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,200 ರೂ. ಇದ್ದುದು 49,970 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,100 ರೂ. ಮುಂಬೈ- 45,800 ರೂ, ದೆಹಲಿ- 45,950 ರೂ, ಕೊಲ್ಕತ್ತಾ- 45,800 ರೂ, ಬೆಂಗಳೂರು- 45,850 ರೂ, ಹೈದರಾಬಾದ್- 45,800 ರೂ, ಕೇರಳ- 45,800 ರೂ, ಪುಣೆ- 45,830 ರೂ, ಮಂಗಳೂರು- 45,850 ರೂ, ಮೈಸೂರು- 45,850 ರೂ. ಇದೆ.
ಇದನ್ನೂ ಓದಿ: Gold Price Today: ಮೆಟ್ರೋ ಸಿಟಿಗಳಲ್ಲಿ ಚಿನ್ನದ ಬೆಲೆ 530 ರೂ. ಕುಸಿತ; ಬೆಳ್ಳಿ ದರದಲ್ಲೂ ಮತ್ತೆ ಇಳಿಕೆ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,290 ರೂ, ಮುಂಬೈ- 49,970 ರೂ, ದೆಹಲಿ- 50,130 ರೂ, ಕೊಲ್ಕತ್ತಾ- 49,970 ರೂ, ಬೆಂಗಳೂರು- 50,020 ರೂ, ಹೈದರಾಬಾದ್- 49,970 ರೂ, ಕೇರಳ- 49,970 ರೂ, ಪುಣೆ- 50,000 ರೂ, ಮಂಗಳೂರು- 50,020 ರೂ, ಮೈಸೂರು- 50,020 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಇಂದು 900 ರೂ. ಕುಸಿತವಾಗಿದೆ. 3 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 56,300 ರೂ. ಇದ್ದುದು ಇಂದು 55,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700 ರೂ., ಮಂಗಳೂರು- 60,700 ರೂ., ಮುಂಬೈ- 55,400 ರೂ, ಚೆನ್ನೈ- 60,700 ರೂ, ದೆಹಲಿ- 55,400 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 55,400 ರೂ. ಆಗಿದೆ.