ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ (HDFC Bank) ನಿಶ್ಚಿತ ಠೇವಣಿಗಳನ್ನು ಹೊಂದಿರುವ ಬ್ಯಾಂಕ್ ಗ್ರಾಹಕರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಮುಖ್ಯವಾಗಿ, ಬ್ಯಾಂಕ್ನಿಂದ ಕೆಲವು ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದನ್ನು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬ್ಯಾಂಕ್‌ನ ಅಪ್ಡೇಟ್ ಪ್ರಕಾರ, 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 5ರಿಂದ 10 ಬೇಸಿಸ್ ಪಾಯಿಂಟ್ ಹೆಚ್ಚಿಸಲಾಗಿದೆ ಮತ್ತು ಪರಿಷ್ಕೃತ ದರಗಳು ಫೆಬ್ರವರಿ 14ರಿಂದ ಅನ್ವಯವಾಗುತ್ತವೆ. ಇದರ ಹೊರತಾಗಿ, ಖಾಸಗಿ ಬ್ಯಾಂಕ್ ಒಂದು ವರ್ಷದ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಹಿಂದಿನ ಶೇ 4.9ರಿಂದ ಶೇ 5ಕ್ಕೆ ಹೆಚ್ಚಿಸಿದೆ.
ಅಲ್ಲದೆ, 1-2 ವರ್ಷಗಳ ಮಧ್ಯದ ಅವಧಿಯನ್ನು ಹೊಂದಿರುವ ಠೇವಣಿಗಳ ಮೇಲಿನ ಬಡ್ಡಿ ದರವು ಶೇ 5 ಆಗಿದೆ. ಎರಡು-ಮೂರು ವರ್ಷಗಳ ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರವು ಶೇ 5.20 ಎಂದು ಬ್ಯಾಂಕ್ ಹೇಳಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಕಾರ, 3ರಿಂದ 5 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ದರಗಳನ್ನು 5 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.45ಕ್ಕೆ ಹೆಚ್ಚಿಸಲಾಗಿದೆ. 5ರಿಂದ 10 ವರ್ಷಗಳ ಅವಧಿಯೊಂದಿಗೆ ಠೇವಣಿಗಳ ಮೇಲಿನ ಎಫ್ಡಿ ದರವು ಪ್ರಸ್ತುತ ಶೇ 5.60 ಆಗಿದೆ. ಕಳೆದ ವಾರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೊ ಬ್ಯಾಂಕ್ ಕೂಡ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದವು.
ಇನ್ನೂ ಅಚ್ಚರಿ ಎಂಬಂಥ ಕ್ರಮದಲ್ಲಿ, ಆರ್ಬಿಐ ಹಣಕಾಸು ನೀತಿ ಸಮಿತಿಯು ಕಳೆದ ವಾರ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿತು. ರೆಪೊ ದರ ಪ್ರಸ್ತುತ ಶೇ 4 ಮತ್ತು ರಿವರ್ಸ್ ರೆಪೊ ದರ ಶೇ 3.35ರಲ್ಲಿದೆ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ: HDFC Bank Q3 Results: ಎಚ್‌ಡಿಎಫ್‌ಸಿ ಬ್ಯಾಂಕ್ ಮೂರನೇ ತ್ರೈಮಾಸಿಕ ಲಾಭ 10342 ಕೋಟಿ ರೂಪಾಯಿ