HDFC Bank: ಹೆಚ್ಡಿಎಫ್ಸಿ ಬ್ಯಾಂಕ್ ಭರ್ಜರಿ ಆದಾಯ; ಪ್ರತೀ ಷೇರಿಗೆ 19 ರೂ ಲಾಭಾಂಶ ಘೋಷಣೆ
Dividend of Rs 19 Per Equity Share Announced: 2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 12,047 ಕೋಟಿ ರೂ ನಿವ್ವಳ ಲಾಭ ಅಗಿದೆ ಎಂದು ವರದಿಯಲ್ಲಿ ತೋರಿಸಿದೆ. ಅಂದರೆ ನಿವ್ವಳ ಲಾಭದಲ್ಲಿ ಶೇ. 16.53ರಷ್ಟು ಹೆಚ್ಚಳವಾಗಿದೆ.
ನವದೆಹಲಿ: ಭಾರತದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎನಿಸಿದ ಎಚ್ಡಿಎಫ್ಸಿ ಬ್ಯಾಂಕ್ (HDFC Bank) ಏಪ್ರಿಲ್ 15ರಂದು ಪ್ರಕಟಿಸಿದ ಕೊನೆಯ ತ್ರೈಮಾಸಿಕ ಹಣಕಾಸು ವರದಿಯಲ್ಲಿ ಭರ್ಜರಿ ಆದಾಯದ ಘೋಷಣೆ ಮಾಡಿದೆ. 2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ 12,047 ಕೋಟಿ ರೂ ನಿವ್ವಳ ಲಾಭ (Net Profit) ಅಗಿದೆ ಎಂದು ವರದಿಯಲ್ಲಿ ತೋರಿಸಿದೆ. ಅಂದರೆ ನಿವ್ವಳ ಲಾಭದಲ್ಲಿ ಶೇ. 16.53ರಷ್ಟು ಹೆಚ್ಚಳವಾಗಿದೆ. ಬಡ್ಡಿಯಿಂದಲೇ ಬಂದ ಆದಾಯ (Income From Interests) 23,351.8 ಕೋಟಿ ರೂ ಆಗಿದೆ. 2021-22ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಡ್ಡಿ ಆದಾಯ 18,872.7 ಕೋಟಿ ರೂ ಎಂದು ಎಚ್ಡಿಎಫ್ಸಿ ಬ್ಯಾಂಕ್ ತೋರಿಸಿತ್ತು. 2023ರ ಹಣಕಾಸು ವರ್ಷದಲ್ಲಿ ಈ ಆದಾಯದಲ್ಲಿ ಶೇ. 23.7ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಷೇರು ಮಾರುಕಟ್ಟೆಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಈ ಮಾಹಿತಿ ನೀಡಿದೆ.
ಇನ್ನು, ಈ ತ್ರೈಮಾಸಿಕ ಅವಧಿಯಲ್ಲಿ ಹೆಚ್ಡಿಎಫ್ಸಿ ಬ್ಯಾಂಕ್ನ ನಿವ್ವಳ ಆದಾಯ (Net Income) 32,083 ಕೋಟಿ ರೂನಷ್ಟಿದೆ. ಹಿಂದಿನ ವರ್ಷದ ಈ ಅವಧಿಯಲ್ಲಿ 26,509.8 ಕೋಟಿ ರೂ ನಿವ್ವಳ ಆದಾಯ ಗಳಿಸಿತ್ತು. ಈ ಬಾರಿ ಅದು ಶೇ. 21ರಷ್ಟು ಹೆಚ್ಚಾಗಿದೆ.
ಇನ್ನು ಹೆಚ್ಡಿಎಫ್ಸಿ ಬ್ಯಾಂಕ್ನ ಕಾರ್ಯಾಚರಣೆ ವೆಚ್ಚ (Operating Expense) 13,462.1 ಕೋಟಿ ರೂ ಇದೆ. ಹಿಂದಿನ ವರ್ಷದಕ್ಕೆ ಹೋಲಿಸಿರೆ ಈ ಖರ್ಚಿಯಲ್ಲಿ ಶೇ. 32.6ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Forex: ಭಾರತದ ಫೋರೆಕ್ಸ್ ನಿಧಿ 48 ಲಕ್ಷ ಕೋಟಿಗೆ ಏರಿಕೆ; ಆರ್ಥಿಕತೆ ಶೇ. 7ರಷ್ಟು ವೃದ್ಧಿ ಎಂದು ಹಣಕಾಸು ಸಚಿವೆ ನಿರೀಕ್ಷೆ
ಎಚ್ಡಿಎಫ್ಸಿ ಬ್ಯಾಂಕ್ನಿಂದ ಪ್ರತೀ ಷೇರಿಗೆ 19 ರೂ ಲಾಭಾಂಶ ಘೋಷಣೆ
ಭರ್ಜರಿ ಆದಾಯ ಮತ್ತು ಲಾಭ ಬಂದ ಹಿನ್ನೆಲೆಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ಷೇರುದಾರರಿಗೆ ಭರ್ಜರಿ ಕೊಡುಗೆಯೂ ಸಿಕ್ಕಿದೆ. ಬ್ಯಾಂಕ್ನ ಪ್ರತೀ 1 ರೂನ ಈಕ್ವಿಟಿ ಷೇರಿಗೆ 19 ರೂ ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಲಾಗಿದೆ. ಅಂದರೆ ಶೇ. 1900ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಆದರೆ, ಬ್ಯಾಂಕ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಯ ಬಳಿಕ ಡಿವಿಡೆಂಡ್ ನೀಡಲಾಗುತ್ತದೆ.
ಬ್ಯಾಂಕ್ನ ಸದಸ್ಯರ ನೊಂದಣಿಯಲ್ಲಿ ಹೆಸರು ಇರುವಂಥ ಶೇರುದಾರರಿಗೆ ಡಿವಿಡೆಂಡ್ ಸಿಗಲಿದೆ ಎಂಬ ಮಾಹಿತಿ ಇದೆ. ಎಚ್ಡಿಎಫ್ಸಿ ಬ್ಯಾಂಕ್ನ ಷೇರು ಮೌಲ್ಯ ಸದ್ಯ ಪ್ರತೀ ಷೇರಿಗೆ 1,695 ರೂ ಇದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 16 April 23