Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial changes: ಜುಲೈ ತಿಂಗಳಿಂದ ಈ 6 ಬದಲಾವಣೆಗಳು ನಿರೀಕ್ಷಿಸಿ; ಅವು ಯಾವುವು ಎಂಬುದನ್ನು ತಿಳಿಯಿರಿ

ಜುಲೈನಲ್ಲಿ ಈ 6 ಹಣಕಾಸು ವಿಚಾರದ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಈ ಪೈಕಿ ನಿಮ್ಮ ಮೇಲೆ ಪರಿಣಾಮ ಬೀರಬಹುದಾದ ಸಂಗತಿಗಳು ಯಾವುವು ಎಂಬುದನ್ನು ನೋಡಿಕೊಳ್ಳಿ.

Financial changes: ಜುಲೈ ತಿಂಗಳಿಂದ ಈ 6 ಬದಲಾವಣೆಗಳು ನಿರೀಕ್ಷಿಸಿ; ಅವು ಯಾವುವು ಎಂಬುದನ್ನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 28, 2021 | 10:33 PM

ನಾವೀಗ ಜೂನ್ ತಿಂಗಳ ಕೊನೆಯಲ್ಲಿದ್ದೀವಿ. ಇನ್ನೆರಡು ದಿನ ಕಳೆದರೆ ಜುಲೈ ಕಣ್ಣೆದುರು ನಿಂತು, ಸ್ವಾಗತಿಸುತ್ತದೆ. ಹೊಸ ತಿಂಗಳು ಬರುತ್ತಿದ್ದಂತೆ ಹೊಸ ನಿಯಮಗಳು ಬರುತ್ತವೆ. ಹಲವು ಸಂಗತಿಗಳು ಜುಲೈ 1ನೇ ತಾರೀಕಿನಿಂದ ಬದಲಾವಣೆ ಕಾಣುತ್ತವೆ. ಮುಂದಿನ ತಿಂಗಳಿಂದ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಮುಂಚಿತವಾಗಿ ತಿಳಿಯುವುದು ಉತ್ತಮ. ಅದಕ್ಕೂ ಮುಂಚೆ ಒಂದು ಮಾತು, 6 ಬದಲಾವಣೆಗಳ ಪಟ್ಟಿಯನ್ನು ನಿಮ್ಮೆದುರು ಇಡಲಾಗುತ್ತಿದೆ. ಈ ಪೈಕಿ ಯಾವ್ಯಾವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿಕೊಳ್ಳಿ.

1. ಪ್ರತಿ ತಿಂಗಳ ಮೊದಲ ದಿನ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ದರದಲ್ಲಿ ಬದಲಾವಣೆ ಕಾಣುತ್ತದೆ. ಇದೇ ಸಂಗತಿ ಜುಲೈ 1ನೇ ತಾರೀಕಿನಂದು ಸಹ ಆಗಬಹುದು. ಅದೇ ವೇಳೆ, ಕೆಲವು ಸಲ ದರದಲ್ಲಿ ಯಾವುದೇ ಪರಿಷ್ಕರಣೆ ಆಗದೆ ಸಹ ಉಳಿಯುತ್ತದೆ.

2. ಭಾರತದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ. ಈ ಬ್ಯಾಂಕ್​ ಹೊಸ ನಿಯಮಾವಳಿಗಳನ್ನು ತರುತ್ತಿದೆ. ಚೆಕ್​ಬುಕ್ ಮತ್ತು ಎಟಿಎಂನಿಂದ ನಗದು ವಿಥ್​ಡ್ರಾ ಮಾಡುವ ನಿಯಮಾವಳಿಗಳ ಬದಲಾವಣೆ ಆಗಲಿದೆ. ಶುಲ್ಕದಲ್ಲಿ ಏರಿಕೆ ಆಗಲಿದೆ. ಬೇಸಿಕ್ ಸೇವಿಂಗ್ಸ್ ಅಕೌಂಟ್ಸ್​ಗೆ ಈ ನಿಯಮಾವಳಿಗಳು ಅನ್ವಯ ಆಗಲಿವೆ.

3. ಪೋಸ್ಟ್​ ಆಫೀಸ್ ಯೋಜನೆಗಳ ಬಡ್ಡಿ ದರಗಳು ಜುಲೈ 1ರಿಂದ ಪರಿಷ್ಕರಣೆ ಆಗಬಹುದು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ದರದ ಪರಿಶೀಲನೆ ನಡೆಸಲಾಗುತ್ತದೆ. ಈಗ ಏಪ್ರಿಲ್​ನಿಂದ ಜೂನ್​ ತನಕದ ತ್ರೈಮಾಸಿಕ ಪೂರ್ತಿ ಆಗುವುದರಿಂದ ಅಂಚೆ ಕಚೇರಿ ಬಡ್ಡಿ ದರಗಳ ಪರಿಷ್ಕರಣೆ ಸಾಧ್ಯತೆ ಇದೆ. ಹಾಗಂತ ಆಗೇ ಆಗುತ್ತದೆ ಎಂದೇನೂ ಇಲ್ಲ.

4. ಜುಲೈನಲ್ಲಿ ಮಾರುತಿ ಸುಜುಕಿ ಇಂಡಿಯಾ ಹಾಗೂ ಹೀರೋ ಮೋಟೋಕಾರ್ಪ್ ವಾಹನಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಈ ಬೆಲೆ ಏರಿಕೆ ಘೋಷಣೆಯನ್ನು ಈಗಾಗಲೇ ಹೀರೋ ಮೋಟೋಕಾರ್ಪ್ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಏರಿಕೆ ಆಗಲಿದೆ.

5. ಸಿಂಡಿಕೇಟ್​ ಬ್ಯಾಂಕ್, ಆಂಧ್ರಾ ಬ್ಯಾಂಕ್, ಕಾರ್ಪೊರೇಷನ್​ ಬ್ಯಾಂಕ್​ ಬ್ಯಾಂಕ್​ಗಳ ಐಎಫ್​ಎಸ್​ಸಿ ಕೋಡ್​ಗಳಲ್ಲಿ ಬದಲಾವಣೆ ಆಗಲಿದೆ. ಈಗಾಗಲೇ ಈ ಬಗ್ಗೆ ಗ್ರಾಹಕರಿಗೆ ಸಂದೇಶಗಳು ಬರಲು ಆರಂಭ ಆಗಿದೆ. ಸಿಂಡಿಕೇಟ್​ ಬ್ಯಾಂಕ್​ ಈಗಾಗಲೇ ಕೆನರಾ ಬ್ಯಾಂಕ್​ ಜತೆಗೂ ಮತ್ತು ಆಂಧ್ರಾ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್​ ಜತೆಗೂ ವಿಲೀನ ಆಗಿದೆ.

6. ಇನ್ನು ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಮಾಡದವರಿಗೆ ಮುಂದಿನ ತಿಂಗಳಿಂದ ಟಿಡಿಎಸ್​ ಹೆಚ್ಚಿಸುವುದಕ್ಕೆ ತೀರ್ಮಾನಿಸಲಾಗಿದೆ. ಅದೇ ರೀತಿ ಪ್ರತಿ ವರ್ಷ 50 ಸಾವಿರಕ್ಕಿಂತ ಹೆಚ್ಚಿನ ಟಿಡಿಎಸ್​ ಕಡಿತ ಆಗುವವರ ಪಾಲಿಗೂ ಕಟ್ಟಬೇಕಾದ ಮೊತ್ತ ಹೆಚ್ಚಾಗಲಿದೆ.

ಇದನ್ನೂ ಓದಿ: SBI ATM, Cheque Book: ಎಸ್​ಬಿಐ ಎಟಿಎಂ ನಗದು ವಿಥ್​ ಡ್ರಾ ನಿಯಮಗಳು, ಚೆಕ್​ಬುಕ್ ಶುಲ್ಕಗಳು ಜುಲೈನಿಂದ ಬದಲಾವಣೆ

(Here are the 6 personal finance financial changes expect in July month)

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!