ಮುಂಬರುವ ತಿಂಗಳಾದ ಜೂನ್ನಲ್ಲಿ ಬ್ಯಾಂಕ್ಗಳಿಗೆ ಬಹಳ ಕಡಿಮೆ ದಿನ ರಜಾ ಇದೆ. ಅದು ಖಾಸಗಿ ವಲಯದ್ದೇ ಇರಬಹುದು, ಸಾರ್ವಜನಿಕ ಸ್ವಾಮ್ಯದ್ದೇ (PSB’s) ಇರಬಹುದು ರಜಾ ದಿನಗಳು ಬಹಳ ಕಡಿಮೆ ಇದೆ. ಯಾವಾಗಲೂ ಹೊಸ ತಿಂಗಳ ಆರಂಭದೊಂದಿಗೆ ಬ್ಯಾಂಕ್ ರಜಾ ದಿನಗಳ ಪಟ್ಟಿ ಸಹ ನೆನಪಾಗುತ್ತದೆ. ಈಗ ನಿಮ್ಮೆದುರು ಇಡುತ್ತಿರುವುದು ಜೂನ್ ತಿಂಗಳ ರಜಾ ಪಟ್ಟಿ. ಜೂನ್ನಲ್ಲಿ 8 ದಿನ ಬ್ಯಾಂಕ್ ರಜಾ ಇದೆ. ಆ ಪೈಕಿ ವಾರಾಂತ್ಯದ ರಜೆಗಳು ಆರು ಇದೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಪಟ್ಟಿ ಸಿದ್ಧಪಡಿಸಲಾಗಿದೆ. ಅಂದ ಹಾಗೆ ಪ್ರತಿ ವರ್ಷದ ಆರಂಭದಲ್ಲಿ ಆರ್ಬಿಐ ಆಯಾ ವರ್ಷದ್ದರ ರಜಾ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆ ದಿನಗಳಂದು ಸಾರ್ವಜನಿಕ ವಲಯ, ಖಾಸಗಿ ವಲಯ, ಕೋ ಆಪರೇಟಿವ್ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಬ್ಯಾಂಕ್ಗಳು ಕಾರ್ಯ ನಿರ್ವಹಿಸುವುದಿಲ್ಲ.
ಆರ್ಬಿಐ ರಜಾ ದಿನಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. “ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ಹಾಲಿಡೇ”, ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ಹಾಲಿಡೇ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ ಹಾಲಿಡೇ ಮತ್ತು ಬ್ಯಾಂಕ್ಗಳ ಕ್ಲೋಸಿಂಗ್ ಅಕೌಂಟ್ಸ್. ಏಪ್ರಿಲ್ 1ನೇ ತಾರೀಕಿನಂದು ಬ್ಯಾಂಕ್ಗಳ ಖಾತೆ ಮುಕ್ತಾಯದ ದಿನಾಂಕ ಇಡೀ ದೇಶದ ಎಲ್ಲ ಬ್ಯಾಂಕ್ಗಳಿಗೂ ಅನ್ವಯಿಸುತ್ತದೆ. ಆದರೆ “ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ಹಾಲಿಡೇ”ಗೆ ಹೆಚ್ಚಿನ ರಜಾ ದಿನಗಳು ಬರುತ್ತವೆ. ಅಂದಹಾಗೆ ಜೂನ್ ತಿಂಗಳು ಬಹಳ ಕಡಿಮೆ ರಜಾ ಇರುವಂಥ ತಿಂಗಳು ಎನಿಸಿಕೊಳ್ಳಲಿದೆ.
ಜೂನ್ 1, 2022ರಿಂದ ಅನ್ವಯ ಆಗುವಂಥ ಬ್ಯಾಂಕ್ ರಜಾ ದಿನಗಳು ಹೀಗಿವೆ:
ಜೂನ್ 2: ಮಹಾತ್ಮ ಪ್ರತಾಪ್ ಜಯಂತಿ- ಶಿಲ್ಲಾಂಗ್
ಜೂನ್ 15: ವೈ.ಎಂ.ಎ. ದಿನ/ಗುರು ಹರ್ಗೋಬಿಂದ್ ಜೀ ದಿನ/ರಾಜ ಸಂಕ್ರಾಂತಿ- ಐಜ್ವಾಲ್, ಭುವನೇಶ್ವರ್, ಜಮ್ಮು, ಶ್ರೀನಗರ್
ಇದರ ಹೊರತಾಗಿ, ಆರು ವಾರಾಂತ್ಯದ ದಿನಗಳ ವಿವರ ಇಲ್ಲಿದೆ:
ಜೂನ್ 5: ಭಾನುವಾರ
ಜೂನ್ 11: ಎರಡನೇ ಶನಿವಾರ
ಜೂನ್ 12: ಭಾನುವಾರ
ಜೂನ್ 19: ಭಾನುವಾರ
ಜೂನ್ 25: ನಾಲ್ಕನೇ ಶನಿವಾರ
ಜೂನ್ 26: ಭಾನುವಾರ
ಒಂದು ವೇಳೆ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬೇಕಿದ್ದಲ್ಲಿ ಅಥವಾ ಮುಖ್ಯ ವ್ಯವಹಾರಗಳಿದ್ದಲ್ಲಿ ಈ ರಜಾ ದಿನಗಳನ್ನು ಗಮನಿಸಿದ ನಂತರ ತೆರಳಿರಿ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PAN Or Aadhaar: 20 ಲಕ್ಷ ರೂ. ಮೊತ್ತದ ಜಮೆ, ಹಿಂತೆಗೆತಕ್ಕೆ ಮೇ 26ರಿಂದ ಪ್ಯಾನ್ ಅಥವಾ ಆಧಾರ್ ಕಡ್ಡಾಯ
Published On - 12:50 pm, Fri, 27 May 22