AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Privatisation: ಸರ್ಕಾರದಿಂದ ಇನ್ನೆರಡು ಬ್ಯಾಂಕ್​ಗಳ ಖಾಸಗೀಕರಣ ಎನ್ನುತ್ತಿವೆ ಮೂಲಗಳು

ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ (ಪಿಎಸ್‌ಬಿ) ಖಾಸಗೀಕರಣದ (Privatisation) ಹಾದಿಯಲ್ಲಿದೆ ಮತ್ತು ಮುಂಬರುವ ತಿಂಗಳಲ್ಲಿ ಸೂಕ್ತ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 2021-22ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ವರ್ಷದಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ ಖಾಸಗೀಕರಣ ಉದ್ದೇಶವನ್ನು ಘೋಷಿಸಿತು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯತಂತ್ರದ ಹೂಡಿಕೆ ನೀತಿಯನ್ನು ಅನುಮೋದಿಸಿತು. ಮೂಲಗಳ ಪ್ರಕಾರ, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಮತ್ತು ಅದು ಆ ಹಾದಿಯಲ್ಲಿದೆ. ಇದಲ್ಲದೆ, ಬಿಪಿಸಿಎಲ್​ನ ಹೂಡಿಕೆ ಹಿಂತೆಗೆತ […]

Bank Privatisation: ಸರ್ಕಾರದಿಂದ ಇನ್ನೆರಡು ಬ್ಯಾಂಕ್​ಗಳ ಖಾಸಗೀಕರಣ ಎನ್ನುತ್ತಿವೆ ಮೂಲಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 26, 2022 | 8:01 AM

ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ (ಪಿಎಸ್‌ಬಿ) ಖಾಸಗೀಕರಣದ (Privatisation) ಹಾದಿಯಲ್ಲಿದೆ ಮತ್ತು ಮುಂಬರುವ ತಿಂಗಳಲ್ಲಿ ಸೂಕ್ತ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 2021-22ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ವರ್ಷದಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳ ಖಾಸಗೀಕರಣ ಉದ್ದೇಶವನ್ನು ಘೋಷಿಸಿತು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯತಂತ್ರದ ಹೂಡಿಕೆ ನೀತಿಯನ್ನು ಅನುಮೋದಿಸಿತು. ಮೂಲಗಳ ಪ್ರಕಾರ, ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಮತ್ತು ಅದು ಆ ಹಾದಿಯಲ್ಲಿದೆ. ಇದಲ್ಲದೆ, ಬಿಪಿಸಿಎಲ್​ನ ಹೂಡಿಕೆ ಹಿಂತೆಗೆತ ಆಲೋಚನೆ ಇದೆ ಮತ್ತು ಹೊಸ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಕೇವಲ ಒಬ್ಬ ಬಿಡ್ಡರ್ ಮಾತ್ರ ಕಣದಲ್ಲಿ ಉಳಿದಿದ್ದರಿಂದ ಸರ್ಕಾರವು ಮಾರಾಟವನ್ನು ರದ್ದುಗೊಳಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಲ್ಲಿ ತನ್ನ ಸಂಪೂರ್ಣ ಶೇ 52.98ರಷ್ಟು ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿತ್ತು ಮತ್ತು ಮಾರ್ಚ್ 2020ರಲ್ಲಿ ಬಿಡ್ಡರ್​ಗಳಿಂದ ಆಸಕ್ತಿ ಅಭಿವ್ಯಕ್ತಿಯನ್ನು ಆಹ್ವಾನಿಸಿತು. ನವೆಂಬರ್ 2020ರ ವೇಳೆಗೆ ಕನಿಷ್ಠ ಮೂರು ಬಿಡ್‌ಗಳು ಬಂದವು. ಆದರೆ ಇತರರು ಹಿಂತೆಗೆದುಕೊಂಡ ನಂತರ ಈಗ ಕೇವಲ ಒಂದು ಮಾತ್ರ ಉಳಿದಿದೆ. ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಯತಂತ್ರದ ಮಾರಾಟದಲ್ಲಿ ಕೆಲವು ಸಮಸ್ಯೆಗಳಿವೆ ಮತ್ತು ಅವುಗಳನ್ನು ಪರಿಹರಿಸಿದ ನಂತರ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

2019ರ ನವೆಂಬರ್‌ನಲ್ಲಿ ಸಂಪುಟವು ಶೇ 54.80ರಷ್ಟು ಸರ್ಕಾರಿ ಈಕ್ವಿಟಿಯಿಂದ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ವಹಣಾ ನಿಯಂತ್ರಣದ ಜೊತೆಗೆ ಶೇ 30.8ರಷ್ಟು ಶೇಕಡಾ ಕಾರ್ಯತಂತ್ರದ ಮಾರಾಟಕ್ಕೆ ಅನುಮೋದಿಸಿತ್ತು. ಮಾರಾಟದ ನಂತರ ಸರ್ಕಾರವು ಶೇ 24 ಶೇಕಡಾ ಪಾಲನ್ನು ಉಳಿಸಿಕೊಳ್ಳುತ್ತದೆ; ಆದರೆ ಯಾವುದೇ ವೀಟೋ ಅಧಿಕಾರವಿಲ್ಲದೆ. ನೀತಿ ಆಯೋಗವು ಈಗಾಗಲೇ ಖಾಸಗೀಕರಣಕ್ಕಾಗಿ ಎರಡು ಬ್ಯಾಂಕ್‌ಗಳು ಮತ್ತು ಒಂದು ವಿಮಾ ಕಂಪೆನಿಯನ್ನು ಹೂಡಿಕೆ ಹಿಂತೆಗೆತದ ಕಾರ್ಯದರ್ಶಿಗಳ ಪ್ರಮುಖರ ಗುಂಪಿಗೆ ಸೂಚಿಸಿದೆ. ಮೂಲಗಳ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾಸಗೀಕರಣ ಆಗಲಿರುವ ಬ್ಯಾಂಕ್​ಗಳು.

ಪ್ರಕ್ರಿಯೆಯ ಪ್ರಕಾರ, ಸಂಪುಟ ಕಾರ್ಯದರ್ಶಿ ನೇತೃತ್ವದ ಕಾರ್ಯದರ್ಶಿಗಳ ಪ್ರಮುಖರ ಗುಂಪು ತನ್ನ ಶಿಫಾರಸನ್ನು ಅದರ ಅನುಮೋದನೆಗಾಗಿ ಪರ್ಯಾಯ ಕಾರ್ಯವಿಧಾನಕ್ಕೆ (AM) ಕಳುಹಿಸುತ್ತದೆ ಮತ್ತು ಅಂತಿಮವಾಗಿ ಅಂತಿಮ ಅನುಮೋದನೆಗಾಗಿ ಪ್ರಧಾನ ಮಂತ್ರಿ ನೇತೃತ್ವದ ಸಂಪುಟಕ್ಕೆ ಕಳುಹಿಸುತ್ತದೆ. ಪ್ರಮುಖರ ಗುಂಪಿನ ಕಾರ್ಯದರ್ಶಿಗಳ ಸದಸ್ಯರು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಆದಾಯ ಕಾರ್ಯದರ್ಶಿ, ವೆಚ್ಚ ಕಾರ್ಯದರ್ಶಿ, ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ, ಕಾನೂನು ವ್ಯವಹಾರಗಳ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ ಮತ್ತು ಆಡಳಿತ ಇಲಾಖೆಯ ಕಾರ್ಯದರ್ಶಿಯನ್ನು ಒಳಗೊಂಡಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: PSU Privatisation: ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಪ್ರಸ್ತಾವಕ್ಕೆ ಷೇರು ಮಾರ್ಕೆಟ್ ಪ್ರತಿಕ್ರಿಯೆ ಹೇಗಿದೆ?