Self Made Women Of US: ಜಯಶ್ರೀ ಉಲ್ಲಾಳ್ ಅಮೆರಿಕ ಸೆಲ್ಫ್ಮೇಡ್ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು; ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?
ಸೆಲ್ಫ್ಮೇಡ್ ಶ್ರೀಮಂತ ಮಹಿಳೆಯರು ಎಂದು ಗುರುತಿಸಿಕೊಂಡಿರುವ ಭಾರತ ಮೂಲದವರು ಅಮರಿಕದಲ್ಲಿದ್ದು, ಅವರ ಬಗ್ಗೆ ಮಾಹಿತಿ ಇಲ್ಲಿದೆ. ಜತೆಗೆ ಆಸ್ತಿ ಮೌಲ್ಯ ಮತ್ತಿತರ ವಿವರವೂ ಇದೆ.
ಕಳೆದ ತಿಂಗಳು, 2022ರ ಜೂನ್ನಲ್ಲಿ ಫೋರ್ಬ್ಸ್ನಿಂದ ಅಮೆರಿಕದ ಶ್ರೀಮಂತ (Rich) ಸೆಲ್ಫ್ ಮೇಡ್ ಮಹಿಳೆಯರ ಎಂಟನೆ ವಾರ್ಷಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ. ತಂತಮ್ಮ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡಿರುವ ದೇಶದ ಟಾಪ್ ಮಹಿಳಾ ಉದ್ಯಮಿಗಳ ಹೆಸರನ್ನು ದಾಖಲಿಸುವಂಥ ಪ್ರಯತ್ನ ಇದಾಗಿದೆ. ಹಳೆ ಅವಕಾಶಗಳನ್ನು ಮೀರಿ, ತಮ್ಮ ಬ್ರ್ಯಾಂಡ್ಗಳಿಗೆ ಹೊಸದನ್ನು ಸೃಷ್ಟಿಸಿ, ಕಂಪೆನಿಯ ಹಣಕಾಸು ಸ್ಥಿತಿ ಉತ್ತಮಗೊಳ್ಳಲು ಕಾರಣರಾದ ಇವರು ಅಮೆರಿಕದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿ ಆಗಲು ಸಾಧ್ಯವಾಗಿದೆ. ಜತೆಗೆ ಈ ಹಿಂದೆಂದಿಗಿಂತ ಶ್ರೀಮಂತರಾಗಿದ್ದಾರೆ. ಅಂದಹಾಗೆ ಅಮರಿಕದ ಅತಿ ಶ್ರೀಮಂತ ಸೆಲ್ಫ್-ಮೇಡ್ ಮಹಿಳೆಯರ ಪೈಕಿ ಭಾರತೀಯ ಮೂಲದ ಐವರು ಉದ್ಯಮಿಗಳಿದ್ದಾರೆ.
1. ಅರಿಸ್ಟಾ ನೆಟ್ವರ್ಕ್ನ ನಂಬರ್ 15ನೇ ಸ್ಥಾನಕ್ಕೆ ಏರುವಂತೆ ಮಾಡಿದ ಜಯಶ್ರೀ ವಿ. ಉಲ್ಲಾಳ್
2. ಸಿಂಟೆಲ್ 24ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಾರಣರಾದ ನೀರಜ್ ಸೇಥಿ
3. 57ನೇ ಸ್ಥಾನದಲ್ಲಿ ಇರುವ ಕಾನ್ಫ್ಲುಯೆಂಟ್ ಸಹ ಸಂಸ್ಥಾಪಕರು ಹಾಗೂ ಮಾಜಿ ಸಿಟಿಒ ನೇಹಾ ನರ್ಖೆಡೆ
4. 87ನೇ ಶ್ರೇಯಾಂಕದಲ್ಲಿ ಇರುವ ಪೆಪ್ಸಿಕೋದ ಸಿಇಒ ಇಂದ್ರಾ ನೂಯಿ
5. 97ನೇ ಸ್ಥಾನದಲ್ಲಿ ಇರುವ Ginkgo Bioworks ಸಹ ಸಂಸ್ಥಾಪಕರು ರೇಷ್ಮಾ ಶೆಟ್ಟಿ
ಫೋರ್ಬ್ಸ್ ಪ್ರಕಾರ, ಶೇ 5ರಷ್ಟು ಅರಿಸ್ಟಾ ಷೇರಿನ ಪಾಲು ಹೊಂದಿರುವ ಜಯಶ್ರೀ ಉಲ್ಲಾಳ್ ಅಮೆರಿಕದ ಅತಿ ಶ್ರೀಮಂತ ಸೆಲ್ಫ್ಮೇಡ್ ಮಹಿಳೆಯರಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯ 190 ಕೋಟಿ ಅಮೆರಿಕನ್ ಡಾಲರ್ನಷ್ಟಿದೆ. ನೀರಜ್ ಸೇಥಿ ನಿವ್ವಳ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್. ಇವರು ತಮ್ಮ ಪತಿ ಭರತ್ ದೇಸಾಯಿ ಜತೆಗೂಡಿ 1980ರಲ್ಲಿ ಮಿಷಿಗನ್ನ ಟ್ರಾಯ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆರಂಭದ ಕೇವಲ 2000 ಯುಎಸ್ಡಿಯೊಂದಿಗೆ ತಮ್ಮ ಉದ್ಯಮ ಆರಂಭಿಸಿದವರು. ಕಂಪ್ಯೂಟರ್ ಸೈನ್ಸ್ನಲ್ಲಿ ಇವರು ಸ್ನಾತಕೋತ್ತರ ಪದವಿ ಮಾಡಿದ್ದಾರೆ.
ನೇಹಾ ನರ್ಖೆಡೆ ನಿವ್ವಳ ಮೌಲ್ಯ 49 ಕೋಟಿ ಅಮೆರಿಕನ್ ಡಾಲರ್ನಷ್ಟಿದೆ. ಇವರು ಬೆಳೆದದ್ದು ಪುಣೆಯಲ್ಲಿ. ಪೆಪ್ಸಿಕೋದ ಸಿಇಒ ಆಗಿರುವ ಇಂದ್ರಾ ನೂಯಿ ನಿವ್ವಳ ಆಸ್ತಿ ಮೌಲ್ಯ 32 ಕೋಟಿ ಅಮೆರಿಕನ್ ಡಾಲರ್. ಪೆಪ್ಸಿಕೋದಲ್ಲಿ ಅವರಿಗೆ ಸಿಕ್ಕ ಷೇರುಗಳಿಂದಾಗಿ ಇಷ್ಟು ದೊಡ್ಡ ಮೊತ್ತದ ಆಸ್ತಿ ಇದೆ. ಇನ್ನು ರೇಷ್ಮಾ ಶೆಟ್ಟಿ ಅವರ ನಿವ್ವಳ ಆಸ್ತಿ ಮೌಲ್ಯ 22 ಕೋಟಿ ಅಮೆರಿಕನ್ ಡಾಲರ್.
ಇದನ್ನೂ ಓದಿ: Forbes Richest Athletes: ಇವರೇ ನೋಡಿ ವಿಶ್ವದ ಶ್ರೀಮಂತ ಕ್ರೀಡಾಪಟುಗಳು..!