Flight: ನಿಮಗೆ ಅಗ್ಗದ ಬೆಲೆಯಲ್ಲಿ ವಿಮಾನ ಪ್ರಯಾಣ ಮಾಡಬೇಕೆ? ಇಲ್ಲಿವೆ ಟಿಪ್ಸ್

ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನ ಟಿಕೆಟ್ ದರಗಳು ಸಾಕಷ್ಟು ಏರಿಕೆಯಾಗಿವೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರಗಳು ಜಿಗಿತ ಕಂಡಿವೆ. ಜೆಟ್ ಇಂಧನ ಬೆಲೆಯೂ ಏರಿಕೆ ಕಂಡಿರುವುದರಿಂದ, ಟಿಕೆಟ್​ಗಳ ಬೆಲೆಯೂ ಏರಿಕೆಯಾಗಿದೆ.

Flight: ನಿಮಗೆ ಅಗ್ಗದ ಬೆಲೆಯಲ್ಲಿ ವಿಮಾನ ಪ್ರಯಾಣ ಮಾಡಬೇಕೆ? ಇಲ್ಲಿವೆ ಟಿಪ್ಸ್
Flight
Follow us
TV9 Web
| Updated By: ನಯನಾ ರಾಜೀವ್

Updated on: Jul 07, 2022 | 11:58 AM

ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನ ಟಿಕೆಟ್ ದರಗಳು ಸಾಕಷ್ಟು ಏರಿಕೆಯಾಗಿವೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರಗಳು ಜಿಗಿತ ಕಂಡಿವೆ. ಜೆಟ್ ಇಂಧನ ಬೆಲೆಯೂ ಏರಿಕೆ ಕಂಡಿರುವುದರಿಂದ, ಟಿಕೆಟ್​ಗಳ ಬೆಲೆಯೂ ಏರಿಕೆಯಾಗಿದೆ. ಆದರೆ ವಿಮಾನ ಟಿಕೆಟ್‌ಗಳ ಮೇಲೆ ಡೀಲ್‌ಗಳು/ಡಿಸ್ಕೌಂಟ್‌ಗಳನ್ನು ಪಡೆಯಲು ಮತ್ತು ಸ್ವಲ್ಪ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುವ ಕೆಲವು ಸರಳ ಸಲಹೆಗಳಿವೆ.

ಆನ್​ಲೈನ್​ನಲ್ಲಿ ಅಗ್ಗದ ವಿಮಾನ ಟಿಕೆಟ್​ಗಳನ್ನು ಪಡೆಯಲು ನೀವು ಹೀಗೆ ಮಾಡಿ ಗೂಗಲ್ ಎಕ್ಸ್​ಪ್ಲೋರ್ ಬಳಕೆ ಮಾಡಿ ಗೂಗಲ್ ಕ್ರೋಮ್ ಕೆಲವು ಥರ್ಡ್ ಪಾರ್ಟಿ ಪ್ಲಗ್-ಇನ್‌ಗಳನ್ನು ಒದಗಿಸುತ್ತದೆ ಅದು ನಿಮಗಾಗಿ ವಿಮಾನ ದರಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಬೆಲೆಗಳಲ್ಲಿ ಇಳಿಕೆ ಕಂಡುಬಂದ ಸಮಯದಲ್ಲಿ ನಿಮಗೆ ತಿಳಿಸುತ್ತದೆ. ಲಭ್ಯವಿರುವ ಆಯ್ಕೆಗಳಲ್ಲಿ ವಿಮಾನ ದರಗಳನ್ನು ಕಂಪೇರ್ ಮಾಡುವುದು, ಹಾಗೂ ಅಗ್ಗದ ಬೆಲೆ ಇರುವ ವಿಮಾನಗಳ ಕುರಿತು ಮಾಹಿತಿ ನೀಡುತ್ತದೆ.

ಪ್ರೈಸ್ ಡ್ರಾಪ್ ಕ್ರೋಮ್ ಪ್ಲಗ್ಗಿಂಗ್ಸ್ ನೀವು ರಾತ್ರಿ ಸಮಯ ಅಥವಾ ವೀಕೆಂಡ್​ ಅಲ್ಲಿ ವಿಮಾನ ದರವನ್ನು ಪರೀಕ್ಷಿಸಲೇಬಾರದು, ದಿನದ ಸಮಯ ಹಾಗೂ ವೀಕ್​ಡೇಸ್​ನಲ್ಲಿಯೇ ವಿಮಾನ ದರ ಚೆಕ್ ಮಾಡಬೇಕು. ನಿಮ್ಮ ಪ್ರಯಾಣಕ್ಕೆ ಯಾವುದೇ ದಿನಾಂಕವೂ ಓಕೆ ಎಂಬುದಾಗಿದ್ದರೆ ಸುಲಭವಾಗಿ ಕಡಿಮೆ ಬೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು.

ಬ್ಯಾಂಕುಗಳಿಂದ ಹೆಚ್ಚುವರಿ ರಿಯಾಯಿತಿ ಹಲವು ಬ್ಯಾಂಕ್​ಗಳು ಕ್ರೆಡಿಟ್ ಕಾರ್ಡ್​ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ರಿಯಾಯಿತಿಯನ್ನು ನೀಡುತ್ತವೆ. ಹಲವು ಬ್ಯಾಂಕ್​ಗಳು ವಿಮಾನ ಟಿಕೆಟ್​ ಅನ್ನು ಬುಕ್ ಮಾಡುವಾಗ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತವೆ. ಆದ್ದರಿಂದ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಅದನ್ನು ಬಳಕೆ ಮಾಡಿ.

ಲಾಯಲ್ಟಿ ಕಾರ್ಯಕ್ರಮ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಲಾಯಲ್ಟಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದರ ಅಡಿಯಲ್ಲಿ, ಅವರು ಫ್ಲೈಟ್ ಬುಕಿಂಗ್‌ನಲ್ಲಿ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಾರೆ. ಕೆಲವು ಏರ್‌ಲೈನ್‌ಗಳು ಲಾಯಲ್ಟಿ ಪಾಯಿಂಟ್‌ಗಳನ್ನು ಕೂಡ ನೀಡುತ್ತವೆ, ಅದನ್ನು ವಿಮಾನ ಟಿಕೆಟ್‌ಗಳಿಗಾಗಿ ರಿಡೀಮ್ ಮಾಡಿಕೊಳ್ಳಬಹುದು.

ಆನ್​ಲೈನ್ ಟಿಕೆಟ್​ ಬುಕಿಂಗ್​ನಲ್ಲಿ ಕೊಡುಗೆಗಳು ಏರ್‌ಲೈನ್‌ಗಳು ಮತ್ತು ಇತರ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಡೀಲ್‌ಗಳು ಮತ್ತು ಕೊಡುಗೆಗಳನ್ನು ನೀಡುತ್ತವೆ, ಅವುಗಳನ್ನು ಅನುಸರಿಸಿ ನೀವು ಉತ್ತಮ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಲು ಸಹಾಯ ಮಾಡಬಹುದು.