AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Economic Conclaves At Delhi: ಜುಲೈ 8ರಿಂದ 10 ಪ್ರಮುಖ ಆರ್ಥಿಕ ಚರ್ಚೆಗೆ ವೇದಿಕೆ ಆಗಲಿರುವ ದೆಹಲಿಗೆ ಮಿನಿ ದಾವೋಸ್ ಕಳೆ

ಜುಲೈ 8ರಿಂದ 10ನೇ ತಾರೀಕಿನ ಮಧ್ಯೆ ದೆಹಲಿಯಲ್ಲಿ ಎರಡು ಪ್ರಮುಖ ಆರ್ಥಿಕ ಸಮಾವೇಶಗಳು ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು ಭಾಗವಹಿಸುವ ಈ ಕಾರ್ಯಕ್ರಮದಿಂದ ದೆಹಲಿಗೆ ಮಿನಿ ದಾವೋಸ್ ರೂಪ ದೊರೆಯಲಿದೆ.

Economic Conclaves At Delhi: ಜುಲೈ 8ರಿಂದ 10 ಪ್ರಮುಖ ಆರ್ಥಿಕ ಚರ್ಚೆಗೆ ವೇದಿಕೆ ಆಗಲಿರುವ ದೆಹಲಿಗೆ ಮಿನಿ ದಾವೋಸ್ ಕಳೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 07, 2022 | 3:38 PM

Share

ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಜಾಗತಿಕ ಆರ್ಥಿಕತೆ (Economy) ಕಲಸುಮೇಲೋಗರವಾಗಿ, ಕೆಲವು ದೇಶಗಳು ಆಹಾರ ಮತ್ತು ಇಂಧನ ಕೊರತೆಗೆ ನಲುಗಿ ಹೋಗಿರುವ ಕಾಲಘಟ್ಟದಲ್ಲಿ ವಿವಿಧ ದೇಶಗಳ ನಾಯಕರು ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡುವ ಸಲುವಾಗಿ ದೆಹಲಿಯಲ್ಲಿ ಸೇರಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಎರಡು ಥೀಮ್​ಗಳ ಚರ್ಚೆ ನಡೆಯಲಿದೆ. ಅದರಲ್ಲಿ ಒಂದು, ಭವಿಷ್ಯದ ಪುನರ್​ ವ್ಯಾಖ್ಯಾನ. ಮತ್ತೊಂದು ಎಲ್ಲರನ್ನೂ ಒಳಗೊಂಡಂಥ ಬೆಳವಣಿಗೆ. ಜುಲೈ 8ರಿಂದ 10ನೇ ತಾರೀಕು ಈ ಚರ್ಚೆ ನಡೆಯಲಿದ್ದು, ದೆಹಲಿಯು ಮಿನಿ ದಾವೋಸ್ (ಇಲ್ಲಿ ಜಾಗತಿಕ ಮಟ್ಟದ ಆರ್ಥಿಕ ಫೋರಂ ನಡೆಯುತ್ತದೆ) ರೀತಿಯಲ್ಲಿ ಸುದ್ದಿ ಮಾಡಲಿದೆ. ಇದರಲ್ಲಿ 20ಕ್ಕೂ ಹೆಚ್ಚು ದೇಶಗಳ 50ಕ್ಕೂ ಮಿಕ್ಕಿ ರಾಜಕೀಯ ಹಾಗೂ ಆರ್ಥಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ದೇಶಗಳಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಎರಡೂ ಭಾಗವಹಿಸಲಿವೆ.

ಎರಡು ವಾರ್ಷಿಕ ಕಾರ್ಯಕ್ರಮಗಳು ಒಂದೇ ಸೂರಿನಡಿ ನಡೆಯಲಿದೆ. ಸಿಂಗಾಪೂರದ ಹಿರಿಯ ಸಚಿವ ತರಮನ್ ಷಣ್ಮುಗರತ್ನಂ ಅವರ ಮುಖ್ಯ ಭಾಷಣ ಮುಗಿದ ತಕ್ಷಣ ಅರುಣ್ ಜೇಟ್ಲಿ ವಾರ್ಷಿಕ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಆ ನಂತರದಲ್ಲಿ ಸಂಜೆ ಭೇಟಿ ನೀಡಲಿರುವ ಅಂತಾರಾಷ್ಟ್ರೀಯ ನಿಯೋಗದ ಜತೆಗೆ ಪ್ರಧಾನಿ ಮೋದಿ ಅವರು ಸಂವಾದ ಕೂಡ ನಡೆಸುತ್ತಾರೆ. ಈ ಅಂತಾರಾಷ್ಟ್ರೀಯ ನಿಯೋಗವು ಕೌಟಿಲ್ಯ ಆರ್ಥಿಕ ಸಮಾವೇಶದ ಚೊಚ್ಚಲ ಮೂರು ದಿನದ ಸಮಾವೇಶದಲ್ಲಿ ಭಾಗಿ ಆಗಲಿದೆ.

ಹೀಗೆ ಎರಡು ಆರ್ಥಿಕ ಸಮಾವೇಶಗಳು ಒಂದೇ ಸಲ ನಡೆಯುತ್ತವೆ. ಅರುಣ್ ಜೇಟ್ಲಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಸಚಿವಾಲಯ ಆಯೋಜಿಸಿದೆ. ಇನ್ನು ಕೌಟಿಲ್ಯ ಎಕನಾಮಿಕ್ ಕಾನ್​​ಕ್ಲೇವ್ (KEC) ಅನ್ನು ಇನ್​ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ (IEG) ಸಹಯೋಗದಲ್ಲಿ ಸಚಿವಾಲಯ ಆಯೋಜಿಸಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಆಯೋಜಕರು ಹೇಳಿರುವಂತೆ, ಈಗಿನ ಜಾಗತಿಕ ಬಿಕ್ಕಟ್ಟಿನ ವೇಳೆಯಲ್ಲಿ ವಿಶ್ವ ಸಮುದಾಯಕ್ಕೆ ಭಾರತವು ಭರವಸೆಯಂತೆ ಹೊರಹೊಮ್ಮಿದೆ. ಸದ್ಯಕ್ಕೆ ಜಾಗತಿಕ ಮಟ್ಟದ ಯಾವುದೇ ಸಪ್ಲೈ ಚೈನ್ ಸಮಸ್ಯೆ, ಅದರಲ್ಲೂ ಆಹಾರ ಹಾಗೂ ಔಷಧ ಸಮಸ್ಯೆಯನ್ನು ನಿವಾರಿಸಿಕೊಂಡು ಮುನ್ನಡೆಯಬಲ್ಲಂಥ ಸಾಮರ್ಥ್ಯ ಇರುವ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ. ದೇಶದೊಳಗೆ ಕೊವಿಡ್-19 ಲಸಿಕೆ ಅಭಿವೃದ್ಧಿ ಮಾಡುವುದರಿಂದ ದಾಖಲೆ ನಿರ್ಮಿಸಿದ್ದು ಮಾತ್ರವಲ್ಲ, ಅದರ ಅಗತ್ಯ ಇರುವಾಗ ವಿವಿಧ ದೇಶಗಳಿಗೆ ಪೂರೈಕೆ ಸಹ ಮಾಡಿತು ಎಂದು ಹೇಳಿದ್ದಾರೆ.

ಮೂರು ದಿನಗಳ ಕಾರ್ಯಕ್ರಮದಲ್ಲಿ ಅಮೆರಿಕ, ಯುನೈಟೆಡ್ ಕಿಂಗ್​ಡಮ್, ಆಸ್ಟ್ರೇಲಿಯಾ, ಇಸ್ರೇಲ್, ಜರ್ಮನಿ. ದಕ್ಷಿಣ ಆಫ್ರಿಕಾ, ಜಪಾನ್, ಸಿಂಗಾಪೂರ್, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಚೀನಾದಂಥ ದೇಶಗಳು ಭಾಗವಹಿಸುವ ಸಾಧ್ಯತೆ ಇದೆ.

ಕೌಟಿಲ್ಯ ಆರ್ಥಿಕ ಸಮಾವೇಶ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಮಾವೇಶದ ಥೀಮ್ ಭವಿಷ್ಯದ ಪುನರ್​ ವ್ಯಾಖ್ಯಾನ.

ಇದನ್ನೂ ಓದಿ: Global Recession: 2023ರ ಆರಂಭದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದ ಐಎಂಎಫ್​ ಮುಖ್ಯಸ್ಥೆ

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು