Fixed Deposits: ಫಿಕ್ಸೆಡ್ ಡೆಪಾಸಿಟ್ಸ್​ನ 3 ವರ್ಷಗಳ ಅವಧಿಗೆ ಹೆಚ್ಚಿನ ಬಡ್ಡಿ ನೀಡುವ ಟಾಪ್ 5 ಬ್ಯಾಂಕ್​ಗಳಿವು

ಮೂರು ವರ್ಷದೊಳಗಿನ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಇಟ್ಟಲ್ಲಿ ಗರಿಷ್ಠ ಮಟ್ಟದ ಬಡ್ಡಿ ದರ ನೀಡುವ ಭಾರತದ ಟಾಪ್ 5 ಬ್ಯಾಂಕ್​ಗಳ ವಿವರ ಇಲ್ಲಿದೆ. ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ದರ ಎಷ್ಟಿದೆ ಎಂಬ ಮಾಹಿತಿ ತಿಳಿಯಿರಿ.

Fixed Deposits: ಫಿಕ್ಸೆಡ್ ಡೆಪಾಸಿಟ್ಸ್​ನ 3 ವರ್ಷಗಳ ಅವಧಿಗೆ ಹೆಚ್ಚಿನ ಬಡ್ಡಿ ನೀಡುವ ಟಾಪ್ 5 ಬ್ಯಾಂಕ್​ಗಳಿವು
ಪ್ರಾತಿನಿಧಿಕ ಚಿತ್ರ

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಖಾತ್ರಿಪಡಿಸಿದ ರೂ. 5 ಲಕ್ಷದವರೆಗಿನ ಠೇವಣಿ ಸುರಕ್ಷತೆಯ ವಿಷಯಕ್ಕೆ ಬಂದಾಗ ಸ್ಥಿರ ಆದಾಯ ನೀಡುವ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ನಿಶ್ಚಿತ ಠೇವಣಿಗಾಗಿ ಅರ್ಜಿ ಸಲ್ಲಿಸುವ ಮೊದಲಿಗೆ ಠೇವಣಿ ಅವಧಿಯ ಆಧಾರದ ಮೇಲೆ ಉತ್ತಮ ಅಥವಾ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಬ್ಯಾಂಕ್​ಗಳು ಯಾವುವು ಎಂಬ ವಿವರ ಇಲ್ಲಿ ನೀಡಲಾಗುತ್ತಿದೆ. ಫಿಕ್ಸೆಡ್​ ಡೆಪಾಸಿಟ್​ನಲ್ಲಿ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ 7 ದಿನಗಳಿಂದ 10 ವರ್ಷಗಳವರೆಗಿನ ವಿವಿಧ ಮೆಚ್ಯೂರಿಟಿ ಅವಧಿಯ ಪೈಕಿ 3 ವರ್ಷಗಳು ಅಥವಾ 3 ವರ್ಷಕ್ಕಿಂತ ಕಡಿಮೆ ಸಮಯದ ಠೇವಣಿ ಗುರಿಯನ್ನು ಹೊಂದಿದ್ದರೆ, ಇಲ್ಲಿ ಭಾರತದ ಟಾಪ್ 5 ಬ್ಯಾಂಕ್​ಗಳ ಬಗ್ಗೆ ವಿವರ ಇದೆ. ಈಗ ರೂ. 2 ಕೋಟಿಗಿಂತ ಕಡಿಮೆ ಠೇವಣಿಗೆ ಶೇ 7.25ರ ವರೆಗೆ ಬಡ್ಡಿದರವನ್ನು ನೀಡುತ್ತಿವೆ.

ನಾರ್ಥ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈ ಬ್ಯಾಂಕ್​ನಲ್ಲಿ ಸಾಮಾನ್ಯ ಜನರಿಗೆ ಶೇ 6.75 ಶೇಕಡಾ ಮತ್ತು ಹಿರಿಯ ನಾಗರಿಕರಿಗೆ ಶೇ 7.25ರಷ್ಟು ದರವನ್ನು 2 ಕೋಟಿಗಿಂತ ಕಡಿಮೆ ಮೊತ್ತಕ್ಕೆ 3 ವರ್ಷ ಅಥವಾ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಖಾತ್ರಿ ನೀಡಲಾಗುತ್ತದೆ.
ಎಫ್‌ಡಿ ಬಡ್ಡಿ ದರ (ವಾರ್ಷಿಕ) ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ
7-14 ದಿನಗಳು: ಶೇ 3- ಶೇ 3.5
15-29 ದಿನಗಳು: ಶೇ 3- ಶೇ 3.5
30-45 ದಿನಗಳು: ಶೇ 3- ಶೇ 3.5
46-90 ದಿನಗಳು: ಶೇ 3.5- 4
91-180 ದಿನಗಳು: ಶೇ 4-4.5
181-365 ದಿನಗಳು: ಶೇ 5- ಶೇ 5.5
366 ದಿನಗಳಿಂದ 729 ದಿನಗಳು: ಶೇ 6.75- 7.25
730 ದಿನಗಳಿಂದ 1095 ದಿನಗಳು: ಶೇ 6.75- ಶೇ 7.25
(ಮೂಲ: ಬ್ಯಾಂಕ್ ವೆಬ್‌ಸೈಟ್, 19 ಏಪ್ರಿಲ್ 2021ರಿಂದ ಜಾರಿ)

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
3 ವರ್ಷ ಅಥವಾ 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗಾಗಿ ಜನ ಸ್ಮಾಲ್ ಫೈನಾನ್ಸ್​ ಬ್ಯಾಂಕ್​ನಿಂದ ಸಾಮಾನ್ಯ ಜನರಿಗೆ ಶೇ 6.50 ಮತ್ತು ಹಿರಿಯ ನಾಗರಿಕರಿಗೆ ಶೇ 7.00ರಷ್ಟು ರಿಟರ್ನ್ಸ್ ಖಾತ್ರಿ ನೀಡುತ್ತದೆ. ಬ್ಯಾಂಕ್​ನ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೊನೆಯದಾಗಿ 07.05.2021ರಂದು ಪರಿಷ್ಕರಿಸಲಾಗಿದೆ ಅದು ಈ ಕೆಳಗಿನಂತಿದೆ:
ಎಫ್‌ಡಿ ಬಡ್ಡಿ ದರ (ವಾರ್ಷಿಕ) ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ
7-14 ದಿನಗಳು: ಶೇ 2.50- ಶೇ 3
15-60 ದಿನಗಳು: ಶೇ 3- ಶೇ 3.5
61-90 ದಿನಗಳು: ಶೇ 3.75- ಶೇ 4.25
91-180 ದಿನಗಳು: ಶೇ 4.5- 5
181-364 ದಿನಗಳು: ಶೇ 5.5-6
1 ವರ್ಷಕ್ಕೆ (365 ದಿನಗಳು): ಶೇ 6.25- ಶೇ 6.75
> 1 ವರ್ಷ ಮೇಲ್ಪಟ್ಟು- 2 ವರ್ಷದೊಳಗೆ: ಶೇ 6.50- 7
> 2 ವರ್ಷದಿಂದ- 3 ವರ್ಷಕ್ಕೆ ಶೇ 6.50- ಶೇ 7
(ಮೂಲ: ಬ್ಯಾಂಕ್ ವೆಬ್‌ಸೈಟ್, 7 ಮೇ 2021ರಿಂದ ಜಾರಿ)

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
2 ಕೋಟಿ ರೂಪಾಯಿಗಿಂತ ಕಡಿಮೆ ಎಫ್‌ಡಿ ಮೊತ್ತಕ್ಕೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಮೆಚ್ಯೂರ್ ಆಗುವುದಾದರೆ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪಟ್ಟಿಯಲ್ಲಿ 3 ವರ್ಷದ ಎಫ್‌ಡಿಗೆ ಅತ್ಯಧಿಕ ಬಡ್ಡಿದರವನ್ನು ನೀಡುವ ಎರಡನೇ ಬ್ಯಾಂಕ್ ಆಗಿದೆ. ಎಫ್‌ಡಿ ಬಡ್ಡಿ ದರ (ವಾರ್ಷಿಕ) ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ
7-29 ದಿನಗಳು: ಶೇ 2.90- ಶೇ 3.40
30-89 ದಿನಗಳು: ಶೇ 3.50- ಶೇ 4
90-179 ದಿನಗಳು: ಶೇ 4.25- ಶೇ 4.75
180-364 ದಿನಗಳು: ಶೇ 4.75- 5.25
1 ವರ್ಷದಿಂದ 2 ವರ್ಷಕ್ಕೆ: ಶೇ 6-6.5
2 ವರ್ಷ 1 ದಿನದಿಂದ 3 ವರ್ಷಕ್ಕೆ: ಶೇ 6.50- ಶೇ 7
(ಮೂಲ: ಬ್ಯಾಂಕ್ ವೆಬ್‌ಸೈಟ್, 16ನೇ ಆಗಸ್ಟ್ 2021ರಿಂದ ಜಾರಿ)

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಿಂದ 3 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲಿನ ಬಡ್ಡಿದರಗಳ ವಿವರ ಹೀಗಿದೆ.
ಎಫ್‌ಡಿ ಬಡ್ಡಿ ದರ (ವಾರ್ಷಿಕ) ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ
7-45 ದಿನಗಳು: ಶೇ 3- ಶೇ 3.50
46-90 ದಿನಗಳು: ಶೇ 3.25- ಶೇ 3.75
91-180 ದಿನಗಳು: ಶೇ 3.50- ಶೇ 4
181-364 ದಿನಗಳು: ಶೇ 5- 5.50
12 ತಿಂಗಳಿಂದ 15 ತಿಂಗಳು: ಶೇ 5.60- ಶೇ 6.10
15 ತಿಂಗಳು 1 ದಿನದಿಂದ 18 ತಿಂಗಳು: ಶೇ 5.60- ಶೇ 6.10
18 ತಿಂಗಳು 1 ದಿನದಿಂದ 21 ತಿಂಗಳು: ಶೇ 6- ಶೇ 6.50
21 ತಿಂಗಳು 1ದಿನದಿಂದ 24 ತಿಂಗಳು: ಶೇ 6- ಶೇ 6.50
24 ತಿಂಗಳು 1 ದಿನದಿಂದ 30 ತಿಂಗಳು: ಶೇ 6.25- ಶೇ 6.75
30 ತಿಂಗಳು 1 ದಿನದಿಂದ 36 ತಿಂಗಳು: ಶೇ 6.25- ಶೇ 6.75
(ಮೂಲ: ಬ್ಯಾಂಕ್ ವೆಬ್‌ಸೈಟ್, 29ನೇ ಜುಲೈ 2021ರಿಂದ ಜಾರಿ)

ಆರ್‌ಬಿಎಲ್ ಬ್ಯಾಂಕ್
ಆರ್‌ಬಿಎಲ್ ಬ್ಯಾಂಕ್ ಪ್ರಸ್ತುತ 3 ವರ್ಷಗಳಿಗಿಂತ ಕಡಿಮೆ ಅವಧಿಯ ರೂ 3 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಈ ಕೆಳಗಿನ ಬಡ್ಡಿ ದರಗಳನ್ನು ನೀಡುತ್ತಿದೆ.
ಎಫ್‌ಡಿ ಬಡ್ಡಿ ದರ (ವಾರ್ಷಿಕ) ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ
7-14 ದಿನಗಳು: ಶೇ 3.25- ಶೇ 3.75
15-45 ದಿನಗಳು: ಶೇ 3.75- ಶೇ 4.25
46-90 ದಿನಗಳು: ಶೇ 4- ಶೇ 4.50
91-180 ದಿನಗಳು: ಶೇ 4.5- 5
181-240 ದಿನಗಳು: ಶೇ 5-5.50
241 ದಿನಗಳಿಂದ 364 ದಿನಗಳು: ಶೇ 5.25- ಶೇ 5.75
12 ತಿಂಗಳಿಂದ 24 ತಿಂಗಳೊಳಗೆ: ಶೇ 6- ಶೇ 6.50
24 ತಿಂಗಳಿಂದ 36 ತಿಂಗಳೊಳಗೆ: ಶೇ 6- ಶೇ 6.50
(ಮೂಲ: ಬ್ಯಾಂಕ್ ವೆಬ್‌ಸೈಟ್, 1 ಸೆಪ್ಟೆಂಬರ್ 2021ರಿಂದ ಜಾರಿ)

ಇದನ್ನೂ ಓದಿ: Recurring Deposit: ರೆಕರಿಂಗ್​ ಡೆಪಾಸಿಟ್​ ಮೇಲೆ ಉತ್ತಮ ಬಡ್ಡಿ ಸಿಗುವ ನಾಲ್ಕು ಖಾಸಗಿ ಬ್ಯಾಂಕ್​ಗಳಿವು

 

Read Full Article

Click on your DTH Provider to Add TV9 Kannada