Dearness Allowance: ಜುಲೈ 1ರಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ಪಾವತಿ

ಕೇಂದ್ರ ಸರ್ಕಾರದ 65 ಲಕ್ಷ ನಿವೃತ್ತ ಉದ್ಯೋಗಿಗಳು ಮತ್ತು 52 ಲಕ್ಷ ಉದ್ಯೋಗಿಗಳು ಈ ಸೌಲಭ್ಯಕ್ಕೆ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರಿಗೂ ಕೇಂದ್ರ ಸರ್ಕಾರದ ಸೌಲಭ್ಯವನ್ನು ಮತ್ತೆ ಮೊದಲಿನಂತೆಯೇ ಪಡೆದುಕೊಳ್ಳಲಿದ್ದಾರೆ. 

Dearness Allowance: ಜುಲೈ 1ರಿಂದಲೇ ಕೇಂದ್ರ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ಪಾವತಿ
ಸಾಂದರ್ಭಿಕ ಚಿತ್ರ
Follow us
guruganesh bhat
| Updated By: Digi Tech Desk

Updated on:Apr 23, 2021 | 6:18 PM

ದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈನಿಂದ ಸಂಪೂರ್ಣ ತುಟ್ಟಿ ಭತ್ಯೆ ಸೌಲಭ್ಯಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಜುಲೈ1ರಿಂದಲೇ ಪರಿಷ್ಕೃತ  ತುಟ್ಟಿ ಭತ್ಯೆ ಸೌಲಭ್ಯಗಳ ಮೂರು ಕಂತುಗಳನ್ನು ಪಾವತಿಸಲಾಗುವುದು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ಮೇಲ್ಮನೆಗೆ ಅವರು ಪತ್ರ ಬರೆದಿದ್ದಾರೆ.

ಸದ್ಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ17ರಷ್ಟು ತುಟ್ಟಿ ಭತ್ಯೆ ಸೌಲಭ್ಯ ಪಡೆಯುತ್ತಿದ್ದಾರೆ. ಈ ದರ ಶೇ 28ಕ್ಕೆ ಹೆಚ್ಚಳವಾಗಲಿದೆ. ತುಟ್ಟಿ ಭತ್ಯೆ ಸೌಲಭ್ಯದಲ್ಲಿ 2020ರ ಜನವರಿ 1ರಿಂದ ಶೇ 3ರಷ್ಟು ಹೆಚ್ಚಳ, 2020ರ ಜುಲೈನಿಂದ ಶೇ4ರಷ್ಟು ಹೆಚ್ಚಳ, 2021ರ ಜನವರಿ 1ರಿಂದ ಶೇ4ರಷ್ಟು ಹೆಚ್ಚಳವಾಗಲಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ , ಈ ಹಿಂದಿನ ಮೂರು ದರಗಳನ್ನು ಮತ್ತೆ ನೀಡಲಾಗುವುದು ಎಂದಿದ್ದಾರೆ.

ಕೊವಿಡ್ ಸೋಂಕಿನ ಹೆಚ್ಚಳದಿಂದ ಡಿಎ ಸೌಲಭ್ಯಗಳನ್ನು ಜನವರಿ 1, 2020ರಿಂದಲೇ ಕೇಂದ್ರ ಸರ್ಕಾರ ತಡೆ ಹಿಡಿದಿತ್ತು. ತದನಂತರ ಜುಲೈ 2020ರ ಕಂತು ಮತ್ತು ಜನವರಿ 2021ರ ಕಂತುಗಳನ್ನು ಸಹ ಕೇಂದ್ರ ಸರ್ಕಾರ ಪಾವತಿಸಿರಲಿಲ್ಲ. ಆದರೆ ಇದೀಗ ಘೋಷಿಸಿರುವ ಪ್ರಕಾರ ಮುಂದಿನ ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಸೌಲಭ್ಯ ಮತ್ತೆ ದೊರೆಯಲಿದೆ. ತಡೆ ಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿ ಭತ್ಯೆ ಸೌಲಭ್ಯಗಳಿಗೂ ಅಂದಿನ ಮಾನದಂಡಗಳಿಗೆ ಅನುಗುಣವಾಗಿಯೇ ದೊರೆಯಲಿವೆ. ಮುಂದಿನ ಜುಲೈನಲ್ಲಿ ಪರಿಷ್ಕೃತ ಡಿಎ ಸೌಲಭ್ಯವನ್ನು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದ 65 ಲಕ್ಷ ನಿವೃತ್ತ ಉದ್ಯೋಗಿಗಳು ಮತ್ತು 52 ಲಕ್ಷ ಉದ್ಯೋಗಿಗಳು ಈ ಸೌಲಭ್ಯಕ್ಕೆ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರಿಗೂ ಕೇಂದ್ರ ಸರ್ಕಾರದ ಸೌಲಭ್ಯವನ್ನು ಮತ್ತೆ ಮೊದಲಿನಂತೆಯೇ ಪಡೆದುಕೊಳ್ಳಲಿದ್ದಾರೆ.  1-7-2021ರಿಂದ ಕ್ಯುಮುಲೇಟಿವ್ ಪರಿಷ್ಕೃತ ದರದಲ್ಲಿ ಆರಂಭಿಸಲಾಗುವುದು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂದಿದ್ದಾರೆ. ಇದರರ್ಥ ಏನೆಂದರೆ, ಪರಿಷ್ಕೃತ ತುಟ್ಟಿ ಭತ್ಯೆ ದರವು ಕಳೆದ ವರ್ಷ ಸ್ಥಗಿತವಾಗಿದ್ದ ದರಕ್ಕಿಂತ ಹೆಚ್ಚಿನದಾಗಿರುತ್ತದೆ.

ಇದನ್ನೂ ಓದಿ: ಕೇರಳ ಸರ್ಕಾರಿ ಆಸ್ಪತ್ರೆಗಳಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆಯಿಂದ ದಿನಕ್ಕೆ 1.5 ಟನ್ ಮೆಡಿಕಲ್​​ ಆಕ್ಸಿಜನ್​ ಪೂರೈಕೆ

45 ವರ್ಷ ಮೇಲ್ಪಟ್ಟ, ಕೇಂದ್ರ ಸರ್ಕಾರಿ ನೌಕರರು ಕೊವಿಡ್​-19 ಲಸಿಕೆ ಸ್ವೀಕರಿಸಲು ಸರ್ಕಾರದ ಸೂಚನೆ

(how DA restoration will impact take home pay of central govt employees from July 1 2021)

Published On - 12:47 pm, Fri, 16 April 21

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ