Minimum amount for investment: ನನ್ನ ಹೂಡಿಕೆ ಪಯಣ 11 ರೂಪಾಯಿ ಜತೆ ಶುರುವಾಗಿದ್ದು ಹೇಗೆ ಗೊತ್ತಾ?

Minimum amount for investment: ನನ್ನ ಹೂಡಿಕೆ ಪಯಣ 11 ರೂಪಾಯಿ ಜತೆ ಶುರುವಾಗಿದ್ದು ಹೇಗೆ ಗೊತ್ತಾ?
ಶೇ 16,000ದಷ್ಟು ಏರಿಕೆ

ಬಹಳ ಜನರು ತಮ್ಮ ಬಳಿ ಇರುವ ಹಣದಲ್ಲಿ ಹೂಡಿಕೆ- ಉಳಿತಾಯ ಸಾಧ್ಯವಾ ಅಂತ ಯೋಚನೆ ಮಾಡಿಕೊಂಡು, ಏನನ್ನೂ ಉಳಿಸದೆ ಜೀವನ ಕಳೆದು, ಒಂದು ಹಂತದಲ್ಲಿ ಪಶ್ಚಾತಾಪ ಪಡುತ್ತಾರೆ. ನಿಮ್ಮ ಬಳಿ 11 ರೂಪಾಯಿ ಇದ್ದರೂ ಹೂಡಿಕೆ ಶುರು ಮಾಡಬಹುದು ಎಂಬ ಸಂಗತಿ ಗೊತ್ತಾ?

Srinivas Mata

|

Apr 19, 2021 | 9:57 PM

ಆ ಮೊತ್ತ ಬಹಳ ಕಡಿಮೆ, ಆದರೆ ಬೆಳವಣಿಗೆ ಹೆಚ್ಚಾಗುತ್ತಲೇ ಇರಬೇಕು ಅನ್ನೋ ಉದ್ದೇಶ ಪ್ರತಿ ಹಂತದಲ್ಲೂ ಇರುತ್ತಿತ್ತು. 2020ನೇ ಇಸವಿಯಿದೆಯಲ್ಲಾ ಅದೊಂದು ಬಗೆಯಲ್ಲಿ ಟೀಚರ್ ಇದ್ದಂತೆ. ಯಾವುದಾದರೂ ವಿಷಯವನ್ನು ದೂರದಿಂದಲೇ ಆಲೋಚಿಸುವುದನ್ನು, ನಿರ್ವಹಣೆ ಮಾಡೋದನ್ನು ಹಾಗೂ ಮುನ್ನಡೆಸುವುದನ್ನು ಕಲಿಸಿಕೊಟ್ಟ ವರ್ಷ ಅದು. ಜತೆಗೆ ನನ್ನ ಆಲೋಚನೆ ಇತ್ತಲ್ಲಾ, ಅದಕ್ಕೇ ನಿಷ್ಠನಾಗಿರುವುದನ್ನು ಹೇಳಿಕೊಟ್ಟಿದ್ದು ಕೂಡ ಅದೇ ಬೆಳವಣಿಗೆಯ ಮನಸ್ಥಿತಿ. ಎಲ್ಲವೂ ಶುರುವಾಗಿದ್ದು ಅದರಿಂದಲೇ, ಹೌದಲ್ಲವಾ?

ಸಿಂಗಂ ಹಿಂದಿ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ- ನನ್ನ ಅವಶ್ಯಕತೆಗಳು ಕಡಿಮೆ ಇವೆ… ಆದ್ದರಿಂದ ನನ್ನ ತುಡಿತದಲ್ಲಿ ಧಮ್ ಇದೆ (ಮೇರಿ ಝರೂರತೇನ್ ಕಮ್ ಹೈ…ಇಸ್​ಲಿಯೇ ಮೇರೆ ಝಮೀರ್ ಮೇ ಧಮ್ ಹೈ)

– ಈ ಮೇಲಿನ ವಾಕ್ಯಗಳು ನನ್ನ ತಲೆಯಲ್ಲಿ ಸುತ್ತು ಹೊಡೆಯುತ್ತಲೇ ಇತ್ತು. ಬದುಕು 2021ಕ್ಕೆ ಪ್ರವೇಶ ಪಡೆಯಿತು. ನನ್ನ ನಂಬಿಕೆಯ ಹೆಜ್ಜೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸಿದೆ. ಒಂದು ಡಿಮ್ಯಾಟ್ ಅಕೌಂಟ್ ತೆರೆದೆ. ಅದೇನೂ ಕಷ್ಟವಲ್ಲ ಬಿಡಿ. ನಾನು ಒಂದಿಷ್ಟು ಹುಡುಕಾಟ ನಡೆಸಬೇಕಿತ್ತು, ಅಷ್ಟೇ. ಪುಕ್ಕಟೆಯಾಗಿ ಡಿಮ್ಯಾಟ್ ಖಾತೆ ತೆರೆಯೋದು ಮತ್ತು ಇಲ್ಲಿದೆ ನೋಡಿ. ನಾನೆಲ್ಲ ಷರತ್ತು, ನಿಬಂಧನೆಗಳು, ದರ ಎಲ್ಲವನ್ನೂ ಓದಿದೆ. ಆ ನಂತರ ನನ್ನ ಬಗ್ಗೆ ಗೊತ್ತಿರುವ ಎಲ್ಲರಿಗೂ ಗಾಬರಿ ಆಯಿತು.

ನನ್ನ ಸುತ್ತಮುತ್ತಲ ಸ್ನೇಹಿತರು, ಕುಟುಂಬದವರು, ಜತೆಗೆ ಆಟವಾಡಲು ಬರುತ್ತಿದ್ದವರು, ಸಂಗೀತಗಾರರು, ಬರಹಗಾರರು, ಬೇರೆ- ಬೇರೆ ಕ್ಷೇತ್ರದಲ್ಲಿ ಇರುವವರು ಎಲ್ಲರೂ, ನಾನೇನಿದ್ದರೂ ಕಣ್ಣಿಗೆ ಕಾಣುವಂಥ ಆಸ್ತಿಗಳ (ಟ್ಯಾಂಜಿಬಲ್ ಅಸೆಟ್ಸ್) ಮೇಲೆ ಹಣ ಹಾಕುವವನು ಅಂದುಕೊಂಡಿದ್ದರು. ನಾನು ಯಾವಾಗಲೂ ನನಗೆ ಇಷ್ಟವಿದ್ದ ಸಂಗತಿಗಳನ್ನೇ ಮಾಡುವವನು. (ಇದರಲ್ಲಿ ನಾನು ಏಕಾಂಗಿನಾ?)

ಆಗೊಂದು ಸಮಯ ಇತ್ತು. ನನಗೆ ಬೇಡದಿದ್ದರೂ ಅಥವಾ ಅಗತ್ಯ ಇಲ್ಲದಿದ್ದರೂ ಅಥವಾ ಬಳಸದಿದ್ದರೂ ಖರೀದಿ ಮಾಡಿಬಿಡುತ್ತಿದ್ದೆ. ಅಥವಾ ಖರೀದಿ ಮಾಡಿದ ಕೆಲವು ಸಮಯ ಮಾತ್ರ ಬಳಸುತ್ತಿದ್ದೆ. ಆ ನಂತರ ನನಗೇ ಒಂಥರಾ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. (ಈ ವಿಷಯದಲ್ಲೂ ನಾನು ಏಕಾಂಗಿನಾ?)

ಇರಲಿ ಬಿಡಿ, ನನ್ನ ಬಗ್ಗೆ ಗೊತ್ತಿರುವವರು ಏಕೆ ಆಶ್ಚರ್ಯಕ್ಕೆ ಒಳಗಾದರು ಅನ್ನೋದನ್ನು ಹೇಳ್ತೀನಿ. ಈ ಭೂಮಿ ಮೇಲೆ ಅತ್ಯಂತ ಸುಲಭವಾಗಿ ಬಳಸಬಹುದಾದ, ಸಲೀಸಾದ, ಸ್ವಚ್ಛವಾದ ಆ ಹೂಡಿಕೆ ಅಪ್ಲಿಕೇಷನ್ ಕೆವೈಸಿ ಪೂರ್ತಿ ಆಗಲಿ ಎಂದು ಕಾಯ್ದೆ. ಈಚೆಗೆ ಅವರಿಗೆ ಯೂನಿಕಾರ್ನ್ ಸ್ಥಾನಮಾನ ಸಿಕ್ಕಿದೆ. (ಆದರೆ ಅದು ಪಿಂಕ್ ಅಲ್ಲ). ಖಾತ್ರಿ ಇಮೇಲ್ ಬಂತು. ಸರಿಯಾಗಿ ಎಲ್ಲ ಪರೀಕ್ಷೆ ಮಾಡಿದ ಮೇಲೆ, ಯಾವುದಕ್ಕೂ ಒಂದು ಪಿಜ್ಜಾ ತಿನ್ನಬೇಕು ಅಂದರೆ ನನ್ನ ಬ್ಯಾಂಕ್ ಅಕೌಂಟ್​ಗೆ ಅಲ್ಲಿಂದ ವಾಪಸ್ ಹಣ ವಿಥ್ ಡ್ರಾ ಮಾಡೋದು ಹೇಗೆ ಅಂತ ನೋಡಿಕೊಂಡು, 501 ರೂಪಾಯಿ ವರ್ಗಾವಣೆ ಮಾಡಿದೆ.

ಇಷ್ಟು ಕಡಿಮೆ ಮೊತ್ತ ವರ್ಗಾವಣೆ ಮಾಡಿದ ಮೇಲೆ, ಅದಕ್ಕೂ ಸಣ್ಣ ಮೊತ್ತದ ಷೇರು ಖರೀದಿಸುವುದಕ್ಕೆ ನಿರ್ಧಾರ ಮಾಡಿದೆ. ಕೆಲವು ಷೇರುಗಳನ್ನು ಆಯ್ಕೆ ಮಾಡಿಕೊಂಡು, ನನ್ನ ವಾಚ್​ಲಿಸ್ಟ್​ಗೆ ಸೇರಿಸಿಕೊಂಡೆ. ಒಂದಿಷ್ಟು ಅಧ್ಯಯನ ಮಾಡಿದೆ. ಇನ್ನೂ ಕೆಲವು ಷೇರುಗಳನ್ನು ಹುಡುಕಿಕೊಂಡು, ಅದು ರೂ. 11ಕ್ಕೆ ಬರುವ ತನಕ ನೋಡಿದೆ. ನನ್ನೊಳಗೆ, ಯೆಸ್ ಎಂಬ ಉದ್ಗಾರ ಬಂತು. ದೀರ್ಘವಾದ ಉಸಿರೆಳೆದುಕೊಂಡೆ. 1 ಷೇರನ್ನು 11 ರೂಪಾಯಿಗೆ ಖರೀದಿ ಬಟನ್ ಒತ್ತಿದೆ. ಒಂದು ಗುಂಡಾದ ಚಕ್ರ ಸುತ್ತಿ ಸುತ್ತಿ ಕೊನೆಗೆ ರೈಟ್ ಟಿಕ್ ಮಾರ್ಕ್ ಬಂತು.

ನನ್ನೊಳಗೆ ಒಂದು ಬಗೆಯ ಸಂತೋಷ. ಆದರೆ ನಾನು ಏನು ಖರೀದಿ ಮಾಡಿದ್ದೀನೋ ಅದನ್ನು ಬಳಸೋದಿಕ್ಕೆ ಆಗಲ್ಲ, ನೋಡೋದಿಕ್ಕೆ ಆಗಲ್ಲ ಅಥವಾ ಅದರ ಅನುಭೂತಿಯೂ ಸಿಗಲ್ಲ. ಆ ಕ್ಷಣ ನನಗೇನನ್ನಿಸಿತು ಅಂತ ಹೇಳಲೇಬೇಕು. ಹೊಟ್ಟೆಯೊಳಗೆ ಚಿಟ್ಟೆಯನ್ನ ಬಿಟ್ಟಂಗಾಯಿತು. ಅಂಥ ಸಂತೋಷ. ಆ ನಂತರ ಮತ್ತೆ 11 ಷೇರು ಖರೀದಿಸಿದೆ. ಅದು ನನ್ನ ಗಣಿತದ ಮೋಹ. ಇವತ್ತಿನ ವಿಚಾರಕ್ಕೆ ಹೇಳುವುದಾದರೆ, ಈ ಲೇಖನ ಬರೆಯುವ ಹೊತ್ತಿಗೆ ಈ ಷೇರುಗಳು ನನಗೆ ಚೋಲೆ ಬತೂರೆ ಸಂಪಾದಿಸಿಕೊಟ್ಟಿವೆ. ಏಕೆಂದರೆ, ನನ್ನ ಹಣವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಕಡೆ ಹಾಕಿದ್ದರಿಂದ ಇದು ಆಯಿತು.

ಒಂದು ತಿಂಗಳು ಮತ್ತು ಅದಕ್ಕಿಂತ ಸ್ವಲ್ಪ ಹೆಚ್ಚಿನ ಸಮಯದಲ್ಲಿ ನಾನೇನು ಕಲಿತೆ ಅನ್ನೋದನ್ನು ಇಲ್ಲಿ ಹಂಚಿಕೊಳ್ತಿದೀನಿ: ನಾವು ಶುರು ಮಾಡಲು ಬಯಸುವ ಕೆಲಸಕ್ಕೆ ಬಹಳ ಹಣ ಬೇಕಂತಿಲ್ಲ: ಯಾರಾದರೂ ಏನನ್ನಾದರೂ ಆರಂಭಿಸಬೇಕು ಅಂದಾಗ ಬಹಳ ಹಣ ಬೇಕು ಅಂತೇನಿಲ್ಲ. ಕೈಯಲ್ಲಿ ಏನಿರುತ್ತದೋ ಅದು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಮೌಲ್ಯದ್ದಾಗಿರುತ್ತದೆ. ಅದನ್ನು ಹೇಗೆ ನಮ್ಮ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಅನ್ನೋದು ಗೊತ್ತಿರಬೇಕಷ್ಟೇ. ಕಡಿಮೆ ಅವಶ್ಯಕತೆಗಳು ಇದ್ದಲ್ಲಿ, ಕಡಿಮೆ ಖರ್ಚು ಅಂದರೆ ಅದೇ.

ಹಣವು ಹಣವನ್ನು ಸಂಪಾದಿಸುತ್ತದೆ: ಗಿಡ, ವೈರಾಣು ಹಾಗೂ ಹಣ- ಈ ಮೂರೂ ಒಂದೇ ಥರ ಕೆಲಸ ಮಾಡುತ್ತವೆ. ಆದರೆ ಅವು ದುಪ್ಪಟ್ಟಾಗುವುದಕ್ಕೆ, ಸಿಕ್ಕಾಪಟ್ಟೆ ಜಾಸ್ತಿ ಆಗುವುದಕ್ಕೆ ಸರಿಯಾದ ಜಾಗ ಬೇಕು, ಅಷ್ಟೇ.

ತಾಳ್ಮೆಗೆ ಬೇಗ ಫಲಿತಾಂಶ ಸಿಗುತ್ತದೆ: ಯಾವಾಗ ಷೇರಿನ ಬೆಲೆ ಇಳಿಯುತ್ತಾ ಹೋಯಿತು ಆಗ ಮಾರಿರಬಹುದು. ನನಗೆ ನನ್ನ 5 ರೂಪಾಯಿಯ ಸಣ್ಣ ಕಪ್ ಚಹಾ ಕೂಡ ಮುಖ್ಯ. ಇಷ್ಟು ಸಣ್ಣ ಸಂಖ್ಯೆಯಿಂದ ಆರಂಭಿಸಿದೆ ಅಂತ ನನಗಿಂತ ಚಿಕ್ಕವರು ಮತ್ತು ದೊಡ್ಡವರು ಇಬ್ಬರೂ ಆಡಿಕೊಂಡು. ಆದರೆ ನಿಮಗೆ ಗೊತ್ತಾ, ಅವರೆಲ್ಲ ನನ್ನ ಥರ ಪ್ರಯತ್ನ ಕೂಡ ಮಾಡಿರಲಿಲ್ಲ. ನಾನು ಹಾಕಿದ 11 ರೂಪಾಯಿ ನಾಣ್ಯವನ್ನು ಆಕಾಶಕ್ಕೆ ಚಿಮ್ಮಿದಂತೆ ಆಗಿತ್ತು. ನನಗೆ ಅದು ಬಹಳ ಮುಖ್ಯವಾಗಿತ್ತು. ನನ್ನನ್ನು ಉಳಿಸಲು ಚೋಲೆ ಬತೂರೆ ಇದೆ.

ನೀವೇ ನಿಮ್ಮ ಸ್ವಂತ ಸ್ಟಾರ್ಟ್​ಅಪ್: ನಿಮ್ಮ ಜೀವನದ ಬೇರೆ ಬೇರೆ ಸನ್ನಿವೇಶಗಳು ಬೇರೆ ವಿಭಾಗಗಳಿದ್ದಂತೆ. ಇನ್ನು ನಿಮ್ಮ ಸ್ಥಾನಮಾನವು ವರ್ಚಸ್ಸಿನ (ಗುಡ್​ವಿಲ್) ಮೇಲೆ ನಡೆಯುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಬಾಕಿ ಹಣದ ಮೂಲಕ ಸಮತೋಲನಕ್ಕೆ ಪ್ರಯತ್ನಿಸಬಹುದು. ಆದರೆ ಹಣಕಾಸು ಇಲಾಖೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ನೀವು ಹಣ ಮಾಡ್ತೀರಿ ಮತ್ತು ಜನರನ್ನು ಸಂಪಾದಿಸ್ತೀರಿ: ಹಣ ಮಾಡೋದು, ಬೆಳವಣಿಗೆ ಸಾಧಿಸುವುದು ಇವೆಲ್ಲವೂ ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬೆಲೆಯನ್ನು ಕೇಳುತ್ತದೆ. ಆದರೆ ಸಾಮೂಹಿಕ ಸಾಧನೆ ಮತ್ತು ಇತರರು ನಿಮ್ಮ ಬದುಕಿಗೆ ತುಂಬಿದ ಮೌಲ್ಯವನ್ನು ಮರೆಯಬೇಡಿ.

(ಕೃಪೆ: ಮನಿ9.ಕಾಮ್ ಮೂಲ ಲೇಖಕರು: ಸಿದ್ಧಾರ್ಥ್ ಪಟೇಲ್)

ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?

ಇದನ್ನೂ ಓದಿ: Want to retire rich? ನಿವೃತ್ತಿ ನಂತರ ಆರ್ಥಿಕವಾಗಿ ನೆಮ್ಮದಿಯಾಗಿರಲು ಇಲ್ಲಿವೆ 10 ನಿಯಮಗಳು

ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..

(Here is an example for how people can start investments with very small amount of Rs 11)

Follow us on

Related Stories

Most Read Stories

Click on your DTH Provider to Add TV9 Kannada