Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ

| Updated By: Srinivas Mata

Updated on: May 28, 2022 | 8:05 AM

ಎಂಪ್ಲಾಯೀಸ್ ಪ್ರಾವಿಡೆಂಟ್ ಖಾತೆಯ ಯುಎಎನ್ ಕಂಡು ಹಿಡಿಯುವುದು ಹೇಗೆ ಎಂಬುದರ ಬಗ್ಗೆ ಹಂತಹಂತವಾದ ವಿವರಣೆ ಇಲ್ಲಿದೆ.

Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ
ಸಾಂದರ್ಭಿಕ ಚಿತ್ರ
Follow us on

ಇಪಿಎಫ್‌ಗೆ ಹಣ ಜಮೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ 12-ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಯೂನಿವರ್ಸಲ್ ಅಕೌಂಟ್ ನಂಬರ್ ಎಂದು ನೀಡಲಾಗುತ್ತದೆ. ಇಪಿಎಫ್​ಒ ನಿಮಗೆ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ನೀಡಲಾಗುತ್ತದೆ. ವಿವಿಧ ಸಂಸ್ಥೆಗಳು/ಕಂಪೆನಿಗಳು ನೀಡಿದ ವ್ಯಕ್ತಿಯ ಎಲ್ಲ ಸದಸ್ಯ ಐಡಿಗಳಿಗೆ ಯುಎಎನ್​ ಕೇಂದ್ರ ಜೀವಾಳವಾಗಿ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಿಗಳ ವೃತ್ತಿ ಜೀವನದುದ್ದಕ್ಕೂ ಎಷ್ಟು ಹುದ್ದೆಗಳನ್ನು ಹೊಂದಿದ್ದರೂ ಯುಎಎನ್ ಒಂದೇ ಆಗಿರುತ್ತದೆ.

ಹಂತ 1: ಅಧಿಕೃತ ಇಪಿಎಫ್​ಒ ​​ವೆಬ್‌ಸೈಟ್‌ಗೆ ಭೇಟಿ ನೀಡಿ: https://unifiedportal-mem.epfindia.gov.in/memberinterface/

ಹಂತ 2: ನೋ (know) ಯುವರ್ ಯುಎಎನ್ ಸ್ಥಿತಿಯನ್ನು ಕ್ಲಿಕ್ ಮಾಡಿ

ಹಂತ 3: ಡ್ರಾಪ್‌ಡೌನ್ ಮೆನುವಿನಿಂದ ರಾಜ್ಯ ಮತ್ತು ಇಪಿಎಫ್‌ಒ ಕಚೇರಿಯನ್ನು ಆಯ್ಕೆ ಮಾಡಿ.

ಹಂತ 4: ನಿಮ್ಮ ಪಿಎಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ವೈಯಕ್ತಿಕ ವಿವರಗಳನ್ನು ನಮೂದಿಸಿ

ಗಮನಿಸಿ: ಸ್ಯಾಲರಿ ಸ್ಲಿಪ್ ನಿಮಗೆ ಪಿಎಫ್ ಸಂಖ್ಯೆ/ಸದಸ್ಯರ ಐಡಿಯನ್ನು ಒದಗಿಸುತ್ತದೆ.

ಹಂತ 5: ಕ್ಯಾಪ್ಚಾ ನಮೂದಿಸಿ ಮತ್ತು ‘ಅಧಿಕೃತ ಪಿನ್ ಪಡೆಯಿರಿ’ ಕ್ಲಿಕ್ ಮಾಡಿ

ಹಂತ 6: UAN ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಹಂತ 7: PIN ನಮೂದಿಸಿದ ನಂತರ ‘OTP ಮೌಲ್ಯೀಕರಿಸಿ ಮತ್ತು UAN ಪಡೆಯಿರಿ’ ಬಟನ್ ಅನ್ನು ಕ್ಲಿಕ್ ಮಾಡಿ.

ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ನೀವು ಒದಗಿಸಿದ ಫೋನ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಯುಎಎನ್​ ಅನ್ನು ಹೇಗೆ ಸಕ್ರಿಯಗೊಳಿಸುವುದು?

ಯುಎಎನ್ ಆಧಾರಿತ ಸದಸ್ಯ ಪೋರ್ಟಲ್ ವೆಬ್‌ಸೈಟ್ ಆಗಿರುವ https://uanmembers.epfoservices.in/ಗೆ ಭೇಟಿ ನೀಡುವ ಮೂಲಕ ಸದಸ್ಯರು ತಮ್ಮ ಯುಎಎನ್ ಅನ್ನು ಸಕ್ರಿಯಗೊಳಿಸಬಹುದು. ಯುಎಎನ್ ಸದಸ್ಯ ಪೋರ್ಟಲ್‌ನಲ್ಲಿ ಅದನ್ನು ಸಕ್ರಿಯಗೊಳಿಸಲು, ಸದಸ್ಯರು ಯುಎಎನ್​, ಮೊಬೈಲ್ ಸಂಖ್ಯೆ ಮತ್ತು ಸದಸ್ಯ ಐಡಿ ಸುಲಭವಾಗಿ ಲಭ್ಯವಿರಬೇಕು. ಒಮ್ಮೆ ಸಕ್ರಿಯಗೊಳಿಸಿದ ನಂತರ, ಸದಸ್ಯರು ತಮ್ಮ ಯುಎಎನ್​ ಅನ್ನು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನಂತೆ ನಮೂದಿಸುವ ಮೂಲಕ ಯುಎಎನ್ ಸದಸ್ಯ ಪೋರ್ಟಲ್ ಅನ್ನು ಸಂಪರ್ಕಿಸಬಹುದು, ಅದನ್ನು ಅವರೇ ಜನರೇಟ್ ಮಾಡಿರುತ್ತಾರೆ.

ಹಂತ 1: url- http://uanmembers.epfoservices.in/uan_reg_form.phpಗೆ ಹೋಗಿ

ಹಂತ 2: ಯುಎಎನ್ ಸಂಖ್ಯೆಯನ್ನು ನಮೂದಿಸಿ

ಹಂತ 3: ಯಾವುದೇ ಪಾಸ್‌ವರ್ಡ್ ನಮೂದಿಸಿ

ಹಂತ 4: ಇತರ ವಿವರಗಳನ್ನು ನಮೂದಿಸಿ ಮತ್ತು ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಿ

ಹಂತ 5: ದೃಢೀಕರಣ ಪಿನ್ ಪಡೆಯಿರಿ

ನೀವು ಎಸ್ಸೆಮ್ಮೆಸ್ ಮೂಲಕ ಸ್ವೀಕರಿಸಿದ PIN ಅನ್ನು ಒಮ್ಮೆ ನಮೂದಿಸಿದ ನಂತರ ನಿಮ್ಮ ಯುಎಎನ್ ಖಾತೆಯನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Tax On EPF: ಇಪಿಎಫ್​ ಉಳಿತಾಯಕ್ಕೆ ಹೊಸ ತೆರಿಗೆ ಲೆಕ್ಕಾಚಾರದ ಬಗ್ಗೆ 7 ಅಂಶಗಳಲ್ಲಿ ವಿವರಣೆ