Aadhaar Biometrics: ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಹಾಗೂ ಅನ್​ಲಾಕ್ ಮಾಡುವುದು ಹೇಗೆಂದು ತಿಳಿಯಿರಿ

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮತ್ತು ಅನ್​ಲಾಕ್ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

Aadhaar Biometrics: ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಹಾಗೂ ಅನ್​ಲಾಕ್ ಮಾಡುವುದು ಹೇಗೆಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 12, 2022 | 8:57 PM

ಭದ್ರತೆಯನ್ನು ಬಲಪಡಿಸುವ ಹಾಗೂ ಆಧಾರ್ ಕಾರ್ಡ್ (Aadhaar Card) ಹೊಂದಿರುವವರಿಗೆ ನಿಯಂತ್ರಣ ಒದಗಿಸುವ ಪ್ರಯತ್ನದಲ್ಲಿ 12 ಅಂಕಿಗಳ ಗುರುತಿನ ಕಾರ್ಡ್ ಅನ್ನು ಲಾಕ್ ಮಾಡಲು ಮತ್ತು ಅನ್​ಲಾಕ್ ಮಾಡಲು ಯುಐಡಿಎಐ ಬೆಂಬಲ ಒದಗಿಸಿದೆ. ವೈಯಕ್ತಿಕ ಡೇಟಾದ ಸುರಕ್ಷತೆ ಮತ್ತು ಗೋಪ್ಯತೆ ಅಪಾಯದಲ್ಲಿದೆ ಎಂದು ನೀವು ಭಾವಿಸಿದಾಗ ಆಧಾರ್ ಬಯೋಮೆಟ್ರಿಕ್ಸ್ ಅನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲು ಲಾಕ್ ಮತ್ತು ಅನ್​ಲಾಕ್ ಮಾಡಲು ಆಯ್ಕೆ ಮಾಡಬಹುದು. ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಲು ಅಧಿಕಾರ ನೀಡುವ ಸೇವೆಯನ್ನು ಬಳಸಲು ಅವಕಾಶ ನೀಡಲಾಗಿದೆ. ಲಾಕ್ ಮಾಡಲಾದ ಬಯೋಮೆಟ್ರಿಕ್ಸ್ ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‌ಗಳನ್ನು (ಬೆರಳಚ್ಚುಗಳು/ಐರಿಸ್) ದೃಢೀಕರಣಕ್ಕಾಗಿ ಬಳಸಲು ಸಾಧ್ಯ ಆಗುವುದಿಲ್ಲ ಎಂದು ಖಚಿತಪಡಿಸುತ್ತದೆ.

“ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಿದ ನಂತರ, ಬಯೋಮೆಟ್ರಿಕ್ ವಿಧಾನ (ಫಿಂಗರ್‌ಪ್ರಿಂಟ್/ಐರಿಸ್) ಬಳಸಿಕೊಂಡು ಯಾವುದೇ ದೃಢೀಕರಣ ಸೇವೆಗಳಿಗಾಗಿ UID ಬಳಸಿದರೆ ಲಾಕ್ ಆಗಿರುವುದನ್ನು ಸೂಚಿಸುವ ನಿರ್ದಿಷ್ಟ ದೋಷ ಕೋಡ್ ‘330’ ಅನ್ನು ಸೂಚಿಸುತ್ತದೆ,” ಎಂದು ಯುಐಡಿಎಐ ಹೇಳಿದೆ. ದೃಢೀಕರಣಕ್ಕಾಗಿ ಬಳಸಿದ ನಿವಾಸಿಗಳ ಆಧಾರ್‌ನಲ್ಲಿರುವ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್ ಮಾಡಬಹುದು. ಒಮ್ಮೆ ನಿವಾಸಿಗಳು ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರೆ ಆಧಾರ್ ಹೊಂದಿರುವವರು ಈ ಕೆಳಗಿನದನ್ನು ಆಯ್ಕೆ ಮಾಡುವವರೆಗೆ ಅವರ ಬಯೋಮೆಟ್ರಿಕ್ ಲಾಕ್ ಆಗಿರುತ್ತದೆ; ಅವುಗಳು ಹೀಗಿವೆ:

– ಅದನ್ನು ಅನ್​ಲಾಕ್ ಮಾಡಿ (ಇದು ತಾತ್ಕಾಲಿಕ) ಅಥವಾ

– ಲಾಕ್ ಸಿಸ್ಟಮ್ ಅನ್ನು ನಿಷ್ಕ್ರಿಯಗೊಳಿಸಿ

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಮತ್ತು ಅನ್​ಲಾಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ

– UIDAI ಅಧಿಕೃತ ವೆಬ್‌ಸೈಟ್ uidai.gov.inಗೆ ಭೇಟಿ ನೀಡಿ.

– ಮೈ ಆಧಾರ್‌ಗೆ ಹೋಗಿ ಮತ್ತು ಆಧಾರ್ ಸೇವೆಗಳನ್ನು ಆಯ್ಕೆ ಮಾಡಿ.

– ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ.

– “ಲಾಕ್ ಸಕ್ರಿಯಗೊಳಿಸಿ” ಆಯ್ಕೆ ಮಾಡಿ.

– ಮುಂದಿನ ವೆಬ್‌ಪುಟದಲ್ಲಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ

– ಕ್ಯಾಪ್ಚಾ ಕೋಡ್‌ ನಮೂದಿಸಿ

– Send OTP ಅನ್ನು ಕ್ಲಿಕ್ ಮಾಡಿ, ಅದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸುತ್ತದೆ

– ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು/ಅನ್‌ಲಾಕ್ ಮಾಡಲು ಆಯ್ಕೆಯನ್ನು ಆರಿಸಿ

ಆದರೆ, ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅತ್ಯಗತ್ಯ. ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸದಿದ್ದರೆ ಹತ್ತಿರದ ದಾಖಲಾತಿ ಕೇಂದ್ರ/ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಂಟ್‌ಗೆ ಭೇಟಿ ನೀಡಬಹುದು ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಅಪ್​ಡೇಟ್​ ಮಾಡಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Aadhaar On DigiLocker: ಡಿಜಿಲಾಕರ್​ ಜತೆ ಆಧಾರ್ ಜೋಡಿಸುವುದು ಹೇಗೆ ಹಂತಹಂತವಾದ ಮಾಹಿತಿ ಇಲ್ಲಿದೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್