Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಯುಎಎನ್​ ಮರೆತು ಹೋದರೆ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

ಇಪಿಎಫ್​ಒ ಪೋರ್ಟಲ್​ ಸದಸ್ಯರು ಮರೆತುಹೋದ ಅಥವಾ ಕಳೆದುಕೊಂಡ ಯುಎಎನ್​ ಹೇಗೆ ಮರಳಿ ಪಡೆಯಬಹುದು ಹಾಗೂ ಅದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬಿತ್ಯಾದಿ ವಿವರಗಳ ಹಂತಹಂತವಾದ ವಿವರಣೆ ಇಲ್ಲಿದೆ.

EPFO: ಯುಎಎನ್​ ಮರೆತು ಹೋದರೆ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 04, 2021 | 12:56 PM

ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟದಿಂದ (EPFO) ವಿತರಿಸುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯ ಕೋಡ್ ಅನ್ನು ಖಾತೆದಾರರು ಬಳಸಿಕೊಂಡು, ತಮ್ಮ ಪಿಎಫ್​ ಖಾತೆಯಲ್ಲಿ ಇರುವ ಬಾಕಿಯನ್ನು ಮತ್ತು ಇತರ ಇಪಿಎಫ್​ ಮಾಹಿತಿಯನ್ನು ಪರಿಶೀಲಿಸಬಹುದು. ಒಬ್ಬರಿಂದ ಮತ್ತೊಬ್ಬ ಉದ್ಯೋಗದಾತರಿಗೆ ಪಿಎಫ್​ ಖಾತೆಯನ್ನು ಯಾವುದೇ ಉದ್ಯೋಗದಾತರ ಅವಲಂಬನೆ ಇಲ್ಲದೆ ವಿಥ್​ಡ್ರಾಗಾಗಿ ಪೋರ್ಟಬಿಲಿಟಿ ಮಾಡುವುದಕ್ಕೆ ಈ ಸಂಖ್ಯೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದೇ ಸಂಖ್ಯೆಯನ್ನು ಬಳಸಿಕೊಂಡು ಹಳೆ ಖಾತೆಯನ್ನು ಕ್ಲೋಸ್​ ಮಾಡಬಹುದು ಮತ್ತು ಬಾಕಿ ಮೊತ್ತವನ್ನು ವರ್ಗಾವಣೆ ಮಾಡಬಹುದು. ಇಪಿಎಫ್​ಒ ಆನ್​ಲೈನ್​ ಸೇವೆಯ ಅನುಕೂಲಗಳು ಪಡೆಯುವುದಕ್ಕೆ ಯುಎಎನ್​ ಅನ್ನು ಉದ್ಯೋಗಿಯ ಕೆವೈಸಿ ಮಾಹಿತಿ ಜತೆಗೆ ಜೋಡಣೆ ಮಾಡಿರಬೇಕು. ಆದರೆ ಒಂದು ವೇಳೆ ಯುಎಎನ್​ ಮರೆತುಹೋದಲ್ಲಿ ಅಥವಾ ಅದನ್ನು ಟ್ರ್ಯಾಕ್​ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದಲ್ಲಿ ಏನು ಮಾಡೋದು? ಅಂಥ ಸಂದರ್ಭದಲ್ಲಿ ಸಿಬ್ಬಂದಿಯು ಈ ಕೆಳಗಿನ ಸರಳ ಹಂತಗಳ ಮೂಲಕ ಆನ್​ಲೈನ್​ನಲ್ಲೇ ಮರಳಿ ಪಡೆಯಬಹುದು.

EPFO UAN ಮರಳಿ ಪಡೆಯುವುದು ಹೇಗೆ? – ಇಪಿಎಫ್​ಒ ಪೋರ್ಟಲ್ https://unifiedportal-mem.epfindia.gov.in ಲಾಗ್​ ಇನ್ ಆಗಬೇಕು. ಮತ್ತು ಹೋಮ್​ ಪೇಜ್​ನಲ್ಲಿ ಸಿಗುವ ‘Know You UAN’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. – ಇಪಿಎಫ್ ಖಾತೆಗೆ ಜೋಡಣೆ ಮಾಡಿರುವ 10 ಅಂಕಿಯ ಮೊಬೈಲ್ ನಂಬರ್ ನಮೂದಿಸಬೇಕು. ಮತ್ತು ದೃಢೀಕರಣಕ್ಕಾಗಿ Captch Code ಭರ್ತಿ ಮಾಡಬೇಕು. – ಮೊಬೈಲ್​ಗೆ ಬರುವ ಒಟಿಪಿಯನ್ನು ದೃಢೀಕರಣಕ್ಕಾಗಿ ನಮೂದಿಸಬೇಕು. – ಆ ನಂತರ ಹೆಸರು, ಜನ್ಮದಿನಾಂಕ ಮುಂತಾದ ವಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ. – ಆಧಾರ್, ಪ್ಯಾನ್ ಅಥವಾ ಸದಸ್ಯ ಐಡಿಗಳನ್ನು ದೃಢೀಕರಣದ ಕೊನೆ ಭಾಗವಾಗಿ ನಮೂದಿಸಬೇಕಾಗುತ್ತದೆ. – ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ‘Show My UAN’ ಮೇಲೆ ಕ್ಲಿಕ್ ಮಾಡಿ – ಮತ್ತು ಇಲ್ಲಿಂದ ಮುಂದುವರಿಯಿರಿ. ಯುಎಎನ್​ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು ಅಥವಾ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬಹುದು.

ಒಂದು ವೇಳೆ ಯುಎಎನ್​ಇನ್ನೂ ಸಕ್ರಿಯವಾಗಿಲ್ಲ ಅಂತಾದರೆ, ಇಲ್ಲಿಂದ ಕೆಳಗೆ ಇರುವ ನಿಯಮಾವಳಿಗಳನ್ನು ಅನುಸರಿಸಿ ಸಕ್ರಿಯಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬಹುದು. – ಇಪಿಎಫ್​ಒ ಸದಸ್ಯರ ಅಧಿಕೃತ ಪೋರ್ಟಲ್​ಗೆ ಲಾಗ್​ ಇನ್ ಆಗಬೇಕು. – ಹೋಮ್​ಪೇಜ್​ನಲ್ಲಿ ಸಿಗುವ “Activate UAN” ಲಿಂಕ್​ ಮೇಲೆ ಕ್ಲಿಕ್ ಮಾಡಬೇಕು. – ಯುಎಎನ್​, ಸದಸ್ಯತ್ವ ಐಡಿ, ಆಧಾರ್ ಅಥವಾ PAN ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. – ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ (ಐಚ್ಛಿಕ)​ ನಮೂದಿಸಬೇಕು. – ದೃಢೀಕರಣಕ್ಕಾಗಿ ಬಾಕ್ಸ್​ನಲ್ಲಿ ತೋರಿಸಲಾದ Captch Code ಭರ್ತಿ ಮಾಡಬೇಕು. – ಒಟಿಪಿಯನ್ನು ನೋಂದಾಯಿತ ಮೊಬೈಲ್​ ಸಂಖ್ಯೆಯನ್ನು ದೃಢೀಕರಣಕ್ಕಾಗಿ ಕಳುಹಿಸಲಾಗುತ್ತದೆ. – ಒಟಿಪಿಯನ್ನು ನಮೂದಿಸಿ ಹಾಗೂ “Validate OTP and Activate UAN” ಎಂಬುದರ ಮೇಲೆ ಕ್ಲಿಕ್ ಮಾಡಿ. – ಯುಎಎನ್​ ಸಕ್ರಿಯಗೊಳ್ಳುತ್ತದೆ. ಪಾಸ್​ವರ್ಡ್​ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಒಂದು ಸಲ ಸಕ್ರಿಯವಾದ ಮೇಲೆ ಇಪಿಎಫ್​ಒ ಸದಸ್ಯರ ಪೋರ್ಟಲ್​ನಲ್ಲಿ ಯುಎಎನ್​ ಜತೆಗೆ ಪಾಸ್​ವರ್ಡ್ ಬಳಸಬಹುದು.

ಇದನ್ನೂ ಓದಿ: EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!