SBI ATM Cash Withdraw: ಒಟಿಪಿ ಮೂಲಕ ಎಸ್​ಬಿಐ ಎಟಿಎಂ ನಗದು ವಿಥ್​ಡ್ರಾ ಹೇಗೆ ಗೊತ್ತೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಒಟಿಪಿ ಮೂಲಕವಾಗಿ ನಗದು ವಿಥ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ.

SBI ATM Cash Withdraw: ಒಟಿಪಿ ಮೂಲಕ ಎಸ್​ಬಿಐ ಎಟಿಎಂ ನಗದು ವಿಥ್​ಡ್ರಾ ಹೇಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 20, 2022 | 2:48 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) 24 ಗಂಟೆಗಳ OTP ಆಧಾರಿತ ನಗದು ಹಿಂಪಡೆಯುವ ಆಯ್ಕೆಯನ್ನು ಪರಿಚಯಿಸುವ ಮೂಲಕ ಎಟಿಎಂಗಳಲ್ಲಿ ನಗದು ಹಿಂಪಡೆಯುವ ಭದ್ರತಾ ಮಟ್ಟವನ್ನು ಹೆಚ್ಚಿಸಿದೆ. ಎಸ್‌ಬಿಐನಿಂದ 2020ರ ಜನವರಿ ತನ್ನ ಎಟಿಎಂಗಳಿಗೆ ಒಂದು-ಟೈಮ್ ಪಾಸ್‌ವರ್ಡ್ (OTP) ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಿತು. “ನಮ್ಮ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ವ್ಯವಸ್ಥೆಯು ಎಸ್​ಬಿಐ ಎಟಿಎಂಗಳಲ್ಲಿ ವಹಿವಾಟು ನಡೆಸುವುದು ವಂಚಕರ ವಿರುದ್ಧದ ಸಂರಕ್ಷಣೆ ಆಗಿದೆ. ನಿಮ್ಮನ್ನು ವಂಚನೆಗಳಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ. ಒಟಿಪಿ ಎಂಬುದು ಸಿಸ್ಟಂನಿಂದ ಜನರೇಟ್ ಆದ ಸಂಖ್ಯೆಗಳನ್ನು ಒಳಗೊಂಡಂಥದ್ದು ಆಗಿದ್ದು, ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ಈ ಒಟಿಪಿ ಆಧಾರಿತ ನಗದು ಹಿಂಪಡೆಯುವ ಸೌಲಭ್ಯವು ರೂ. 10,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಮತ್ತು ಎಸ್​ಬಿಐನ ಎಟಿಎಂಗಳಲ್ಲಿ ಲಭ್ಯವಿದೆ.

ಎಸ್​ಬಿಐನ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆ ಕಾರ್ಯನಿರ್ವಹಣೆ ಹೀಗಿದೆ:

– ಎಸ್‌ಬಿಐ ಕಾರ್ಡ್‌ದಾರರು ಎಟಿಎಂನಲ್ಲಿ ನಗದು ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಮಯದಲ್ಲಿ ಎಸ್‌ಬಿಐನಲ್ಲಿ ನೋಂದಾಯಿಸಲಾದ ಅವರ ಮೊಬೈಲ್ ಸಂಖ್ಯೆಗೆ ಒಟಿಪಿ ಸ್ವೀಕರಿಸುತ್ತಾರೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ.

– ಒಟಿಪಿಯು ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ಎಸ್​ಬಿಐ ಕಾರ್ಡ್‌ದಾರರು ಹಣವನ್ನು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಬೇಕು.

– ಇದು ಎಸ್​ಬಿಐ ಕಾರ್ಡ್‌ದಾರರನ್ನು ಅನಧಿಕೃತ ಎಟಿಎಂ ನಗದು ಹಿಂಪಡೆಯುವಿಕೆಯಿಂದ ರಕ್ಷಿಸುತ್ತದೆ.

ಎಸ್‌ಬಿಐ ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯುವಾಗ ಸ್ಕಿಮ್ ಮಾಡಿದ/ಕ್ಲೋನ್ ಮಾಡಿದ ಕಾರ್ಡ್‌ಗಳ ಖಾತೆಯಲ್ಲಿ ಅನಧಿಕೃತ ವಹಿವಾಟುಗಳ ಅಪಾಯದಿಂದ ಗ್ರಾಹಕರನ್ನು ಇದು ರಕ್ಷಿಸುತ್ತದೆ ಎಂದು ಎಸ್‌ಬಿಐ ಹಿಂದಿನ ಫೇಸ್‌ಬುಕ್ ಪೋಸ್ಟ್ ಹೇಳಿದೆ.

ಇದನ್ನೂ ಓದಿ: SBI Customer Alert: ಎಸ್​ಬಿಐ ಗ್ರಾಹಕರೇ ಯುಪಿಐ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ಹಂತಗಳನ್ನು ಅನುಸರಿಸಿ

“ಒಟಿಪಿಯು ಸಿಸ್ಟಂ-ಜನರೇಟೆಡ್ ಸಾಂಖ್ಯಿಕ ಅಕ್ಷರಗಳನ್ನು ಒಳಗೊಂಡಿರುವಂಥದ್ದು ಆಗಿದ್ದು, ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ದೃಢೀಕರಣದ ಈ ಹೆಚ್ಚುವರಿ ಅಂಶವು ಎಸ್‌ಬಿಐ ಕಾರ್ಡ್ ಹೊಂದಿರುವವರನ್ನು ಅನಧಿಕೃತ ಎಟಿಎಂ ನಗದು ಹಿಂಪಡೆಯುವಿಕೆಯಿಂದ ರಕ್ಷಿಸುತ್ತದೆ,” ಎಂದು ಫೇಸ್‌ಬುಕ್ ಪೋಸ್ಟ್ ಸೇರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Fri, 20 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್