SBI Customer Alert: ಎಸ್​ಬಿಐ ಗ್ರಾಹಕರೇ ಯುಪಿಐ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ಹಂತಗಳನ್ನು ಅನುಸರಿಸಿ

ವಿವಿಧ ಬಗೆಯ ಆನ್​ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಲ್ಲಿ ಎಚ್ಚರಿಕೆ ಮೂಡಿಸಲಾಗಿದೆ.

SBI Customer Alert: ಎಸ್​ಬಿಐ ಗ್ರಾಹಕರೇ ಯುಪಿಐ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಈ ಹಂತಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 25, 2022 | 5:50 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅಥವಾ ಎಸ್​ಬಿಐ ಸೋಮವಾರದಂದು ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದೆ. ಭಾರತದಲ್ಲಿ ಈಚೆಗೆ ಇಂಟರ್​ನೆಟ್​ನಲ್ಲಿ ಡಿಜಿಟಲ್ ವಹಿವಾಟುಗಳ ಪ್ರಮಾಣ ಜಾಸ್ತಿಯಾಗಿದೆ. ಸರ್ಕಾರ ಕೂಡ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತಿದೆ. ಆದರೆ ಈ ವಹಿವಾಟು ಸದಾ ಸುರಕ್ಷಿತ ಅಂತಲ್ಲ. ಒಂದು ವೇಳೆ ಏನಾದರೂ ತಪ್ಪಾಗಿ ಮಾಡಿದಲ್ಲಿ ಮತ್ತು ಮಾಹಿತಿ ಸುರಕ್ಷಿತವಾಗಿಲ್ಲದಿದ್ದಲ್ಲಿ ಹ್ಯಾಕರ್​ಗಳಿಗೆ ಕಳುವಿಗೆ ಮಾರ್ಗ ಸಲೀಸಾಗುತ್ತದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದ್ದು, ಡಿಜಿಟಲ್ ವಹಿವಾಟು ಮಾಡುವ ವೇಳೆ ಇವುಗಳನ್ನು ಪಾಲಿಸಿ, ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ. “ಎಸ್​ಬಿಐನಿಂದ ಗ್ರಾಹಕರಿಗಾಗಿ ಸಮಗ್ರವಾದ ಡಿಜಿಟಲ್ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಅದರಲ್ಲಿ ಗ್ರಾಹಕರ ಸುರಕ್ಷಿತ ಹಾಗೂ ಭದ್ರವಾದ ಡಿಜಿಟಲ್ ವಹಿವಾಟು ಖಾತ್ರಿ ಮಾಡಿಕೊಳ್ಳಲು ಏನು ಮಾಡಬೇಕು ಹಾಗೂ ಮಾಡಬಾರದು ಎಂದು ತಿಳಿಸಲಾಗಿದೆ,” ಎಂಬುದಾಗಿ ಎಸ್​ಬಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್ ಬ್ಯಾಂಕಿಂಗ್, ಟಿಜಿಟಲ್ ವಹಿವಾಟುಗಳು, ಎಲೆಕ್ಟ್ರಾನಿಕ್ ಪಾವತಿಗಳು ಮತ್ತು ಸಾಮಾಜಿಕ ಮಾಧ್ಯಮ ಭದ್ರತೆಗಳಲ್ಲಿ ಗ್ರಾಹಕರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲಾಗಿದೆ.

ಲಾಗ್​ಇನ್ ಭದ್ರತೆ: – ವಿಶಿಷ್ಟ ಹಾಗೂ ಸಂಕೀರ್ಣವಾದ ಪಾಸ್​ವರ್ಡ್​ಗಳನ್ನು ಬಳಸಿ – ನಿಯಮಿತವಾಗಿ ಪಾಸ್​ವರ್ಡ್​ ಬದಲಿಸುವುದನ್ನು ನೆನಪಿಟ್ಟುಕೊಳ್ಳಿ – ಬಳಕೆದಾರ ಐಡಿ, ಪಾಸ್​ವರ್ಡ್​ ಅಥವಾ PIN ಅನ್ನು ಎಲ್ಲೂ ಬಯಲು ಮಾಡಬೇಡಿ, ಸಂಗ್ರಹಿಸಬೇಡಿ ಅಥವಾ ಬರೆದಿಡಬೇಡಿ – ಬ್ಯಾಂಕ್​ನಿಂದ ಯಾವತ್ತಿಗೂ ಬಳಕೆದಾರರ ಐಡಿ/ಪಾಸ್​ವರ್ಡ್​ಗಳು/ಕಾರ್ಡ್ ಸಂಖ್ಯೆ/PIN/ಸಿವಿವಿ/ಒಟಿಪಿ ಕೇಳುವುದಿಲ್ಲ, ನೆನಪಿಟ್ಟುಕೊಳ್ಳಿ – ಆಟೋ ಸೇವ್ ಅಥವಾ ರಿಮೆಂಬರ್ ಎಂಬುದನ್ನು ಡಿವೈಸ್​ನಲ್ಲಿ ಡಿಸೇಬಲ್ ಮಾಡಬೇಕು. ಬಳಕೆದಾರರ ಐಡಿ ಮತ್ತು ಪಾಸ್​ವರ್ಡ್​ಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.

ಇಂಟರ್​​ನೆಟ್ ಭದ್ರತೆ: -ಬ್ಯಾಂಕ್ ವೆಬ್​ಸೈಟ್​ನ ಅಡ್ರೆಸ್​ ಬಾರ್​ನಲ್ಲಿ “https”​ ಎಂಬುದಿದೆಯೇ ಗಮನಿಸಿ – ಓಪನ್ ವೈ-ಫೈ ನೆಟ್​ವರ್ಕ್​​ಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಆನ್​ಲೈನ್​ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡದಿರಿ – ಕೆಲಸ ಮುಗಿದ ಮೇಲೆ ಲಾಗ್​ಔಟ್ ಆಗಿ, ಬ್ರೌಸರ್ ಕ್ಲೋಸ್ ಮಾಡಬೇಕು.

ಯುಪಿಐ ಭದ್ರತೆ: – ಮೊಬೈಲ್ PIN ಮತ್ತು ಯುಪಿಐ PIN ಬೇರೆಬೇರೆಯಾಗಿರಲಿ. – ಯಾವುದೇ ಅಪರಿಚಿತ ಯುಪಿಐ ವಿನಂತಿಗೆ ಪ್ರತಿಕ್ರಿಯಿಸಬೇಡಿ. – ಮೊತ್ತವನ್ನು ವರ್ಗಾವಣೆ ಮಾಡುವುದಕ್ಕೆ PIN ಬೇಕೇ ಹೊರತು ಹಣ ಪಡೆಯುವುದಕ್ಕಲ್ಲ ಎಂಬುದು ನೆನಪಿರಲಿ – ನೀವು ಮಾಡದೆ ಯಾವುದೇ ವಹಿವಾಟು ಆಗಿದ್ದಲ್ಲಿ ಕೂಡಲೇ ಯುಪಿಐ ಸೇವೆ ನಿಮ್ಮ ಖಾತೆ ಡಿಸೇಬಲ್ ಮಾಡಿ.

ಡೆಬಿಟ್/ಕ್ರೆಡಿಟ್ ಕಾರ್ಡ್ ಭದ್ರತೆ: – ಎಟಿಎಂ ಮಶೀನ್ ಅಥವಾ ಪಿಒಎಸ್ ಸಾಧನಗಳನ್ನು ಬಳಸಿ ವಹಿವಾಟುಗಳನ್ನು ಮಾಡುವಾಗ ನಿಮ್ಮ ಸುತ್ತಮುತ್ತ ಯಾರಿದ್ದಾರೆ ಎಂಬ ಬಗ್ಗೆ ಗಮನ ಇರಲಿ. – PIN ಟೈಪ್ ಮಾಡುವಾಗ ಕೀ ಪ್ಯಾಡ್ ಇತರರಿಗೆ ಕಾಣದಂತೆ ಕವರ್ ಮಾಡಿ – ಯಾವುದೇ ವಹಿವಾಟು ಮಾಡುವ ಮುನ್ನ ಇ-ಕಾಮರ್ಸ್ ವೆಬ್​ಸೈಟ್​ಗಳನ್ನು ಖಾತ್ರಿ ಮಾಡಿಕೊಳ್ಳಿ. – ಡೆಬಿಟ್ ಕಾರ್ಡ್​ ವಹಿವಾಟುಗಳನ್ನು ಆನ್​ಲೈನ್ ಬ್ಯಾಂಕಿಂಗ್ ಮೂಲಕ ನಿರ್ವಹಿಸಿ – ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳು, ಪಿಒಎಸ್ ಮತ್ತು ಎಟಿಎಂ ದೇಶೀ ಹಾಗೂ ಅಂತರರಾಷ್ಟ್ರೀಯ ವಹಿವಾಟುಗಳಿಗೆ ಕಾರ್ಡ್​ ವಹಿವಾಟಿಗೆ ಮಿತಿಯನ್ನು ನಿಗದಿ ಮಾಡಬೇಕು.

ಮೊಬೈಲ್ ಬ್ಯಾಂಕಿಂಗ್ ಭದ್ರತೆ – ಬಲವಾದ ಪಾಸ್​ವರ್ಡ್ಸ್/ಬಯೋಮೆಟ್ರಿಕ್ ಅನುಮತಿಯನ್ನು ನಿಮ್ಮ ಫೋನ್​ನಲ್ಲಿ/ಲ್ಯಾಪ್​ಟಾಪ್​ಗಳು/ಟ್ಯಾಬ್​ಲೆಟ್​ಗಳನ್ನು ಸಕ್ರಿಯಗೊಳಿಸಬೇಕು. – ಯಾರೊಂದಿಗೆ ನಿಮ್ಮ ಮೊಬೈಲ್ PIN ಹಂಚಿಕೊಳ್ಳಬೇಡಿ. – ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ದೃಢೀಕರಣ ಬಳಸಬೇಕು – ಅಜ್ಞಾತರು ಸೂಚಿಸಿದ ಅಪರಿಚಿತ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬಾರದು. – ಅಧಿಕೃತ ಸ್ಟೋರ್​ಗಳ ಮೂಲಕ ಮಾತ್ರ ಅಪ್ಲಿಕೇಷನ್​ಗಳನ್ನು ಡೌನ್​ಲೋಡ್ ಮಾಡಬೇಕು. – ಮೊಬೈಲ್​ಗಳಲ್ಲಿ ಇನ್​ಸ್ಟಾಲ್ ಆದ ಮುಖ್ಯವಾದ ಆ್ಯಪ್​​ಗಳನ್ನು ನಿಯಮಿತವಾಗಿ ನಿಗಾ ಮಾಡಬೇಕು ಹಾಗೂ ಅನಗತ್ಯವಾದ ಹಾಗೂ ಬಳಸದ ಆ್ಯಪ್​ಗಳnfnu ಗಮನಿಸಬೇಕು. – ಸಾರ್ವಜನಿಕ ವಯರ್​ಲೆಸ್ ನೆಟ್​ವರ್ಕ್​ಗಳನ್ನು ಬಳಸದಿರಿ

ಸಾಮಾಜಿಕ ಮಾಧ್ಯಮ ಭದ್ರತೆ: – ನೀವು ಯಾರ ಜತೆ ಸಂವಾದ ನಡೆಸುತ್ತೀರೋ ಅವರ ಗುರುತು ಖಾತ್ರಿ ಮಾಡಿಕೊಳ್ಳಿ – ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಲ್ಲಿ ನಿಮ್ಮ ವೈಯಕ್ತಿಕ/ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ – ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಮತ್ತು ಸ್ಥಳಗಳಲ್ಲಿ ರಹಸ್ಯ ಮಾಹಿತಿಗಳ ಬಗ್ಗೆ ಚರ್ಚಿಸಬೇಡಿ.

ಇದನ್ನೂ ಓದಿ: State Bank Of India: ಎಸ್​ಬಿಐ ಯೋನೋ ಆ್ಯಪ್​ ಮೂಲಕ ಚೆಕ್​ ಪಾವತಿ ನಿಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್