Sign In

By signing in or creating an account, you agree with Associated Broadcasting Company's Terms & Conditions and Privacy Policy.

ICICI Bank Customer Alert: ಐಸಿಐಸಿಐ ಬ್ಯಾಂಕ್​ನ ಚೆಕ್​ ರಿಟರ್ನ್, ಕ್ರೆಡಿಟ್​ ಕಾರ್ಡ್​​ ಶುಲ್ಕಗಳಲ್ಲಿ ಬದಲಾವಣೆ

ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್​ನಿಂದ ಕ್ರೆಡಿಟ್​ ಕಾರ್ಡ್ ವಿಳಂಬ ಪಾವತಿ ಶುಲ್ಕ ಹಾಗೂ ಚೆಕ್ ರಿಟರ್ನ್ ಶುಲ್ಕಗಳ ಪರಿಷ್ಕರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

ICICI Bank Customer Alert: ಐಸಿಐಸಿಐ ಬ್ಯಾಂಕ್​ನ ಚೆಕ್​ ರಿಟರ್ನ್, ಕ್ರೆಡಿಟ್​ ಕಾರ್ಡ್​​ ಶುಲ್ಕಗಳಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 11, 2022 | 12:58 PM

ಐಸಿಐಸಿಐ ಬ್ಯಾಂಕ್​ನಿಂದ ಕ್ರೆಡಿಟ್​ ಕಾರ್ಡ್ (Credit Card)​ ಶುಲ್ಕಗಳ ಏರಿಕೆ ಮಾಡಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಗೆ ಬಂದಿದೆ. ಒಂದು ವೇಳೆ ಚೆಕ್ ರಿಟರ್ನ್ ಆದಲ್ಲಿ ಒಟ್ಟಾರೆ ಮೊತ್ತದಲ್ಲಿ ಶೇ 2ರಷ್ಟು ಅಥವಾ ಕನಿಷ್ಠ 500 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಒಟ್ಟಾರೆ ಮೊತ್ತದ ಆಧಾರದಲ್ಲಿ ವಿಳಂಬ ಶುಲ್ಕವು ಬದಲಾವಣೆ ಆಗುತ್ತದೆ. ಮೊತ್ತವು 100 ರೂಪಾಯಿಯ ಒಳಗಿದ್ದಲ್ಲಿ ಯಾವುದೇ ಶುಲ್ಕ ಬೀಳುವುದಿಲ್ಲ. ಚೆಕ್​ ರಿಟರ್ನ್ ಆಗುವ ಮೊತ್ತ ಹೆಚ್ಚಾಗುತ್ತಾ ಹೋದಂತೆ ವಿಧಿಸುವ ಶುಲ್ಕ ಜಾಸ್ತಿ ಆಗುತ್ತಾ ಸಾಗುತ್ತದೆ. 50,000 ರೂಪಾಯಿ ಮೇಲ್ಪಟ್ಟ ಮೊತ್ತ ಇದ್ದಲ್ಲಿ ಅತಿ ಹೆಚ್ಚಿನ ಹಣವಾದ 1200 ರೂಪಾಯಿ ವಿಧಿಸಲಾಗುತ್ತದೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ. ಬದಲಾವಣೆ ಕುರಿತು ಕಳೆದ ತಿಂಗಳು ಐಸಿಐಸಿಐ ಬ್ಯಾಂಕ್ ಅಧಿಸೂಚನೆ ಹೊರಡಿಸಿತು. “ಪ್ರಿಯ ಗ್ರಾಹಕರೇ, ಫೆಬ್ರವರಿ 10, 2022ರಿಂದ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕ ರಚನೆ ಬದಲಾವಣೆ ಆಗಲಿದೆ. ಎಂಐಟಿಸಿ ಮೇಲೆ ಹೆಚ್ಚು ಮಾಹಿತಿಗೆ, ಭೇಟಿ ನೀಡಿ bit.ly/3qPW6wj,” ಎಂದು ತಿಳಿಸಲಾಗಿದೆ.

ಫೆಬ್ರವರಿ 10, 2022ರ ಗುರುವಾರದಿಂದ ಹೊಸ ನಿಯಮ ಜಾರಿಗೆ ಬಂದಿದೆ. ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ ಕಾರ್ಡ್ ಮತ್ತು ಆಕ್ಸಿಸ್ ಬ್ಯಾಂಕ್ 50,000 ರೂಪಾಯಿ ಮೇಲ್ಪಟ್ಟ ಮೊತ್ತಕ್ಕೆ ಕ್ರಮವಾಗಿ ರೂ. 1300, ರೂ. 1300 ಹಾಗೂ 1000 ರೂಪಾಯಿ ವಿಧಿಸುತ್ತವೆ ಎಂದು ಆಯಾ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

ಐಸಿಐಸಿಐ ಬ್ಯಾಂಕ್ ವಿಳಂಬ ಶುಲ್ಕದ ಪರಿಷ್ಕೃತ ಪಟ್ಟಿ ಹೀಗಿದೆ:

– ಬಾಕಿ ಮೊತ್ತವು 100 ರೂಪಾಯಿಗಿಂತ ಕಡಿಮೆಯಿದ್ದಲ್ಲಿ: ಯಾವುದೇ ಶುಲ್ಕ ಇಲ್ಲ

– 100 ರೂ.ನಿಂದ 500 ರೂಪಾಯಿಗೆ: 100 ರೂ. ವಿಳಂಬ ಶುಲ್ಕ

– 501 ರೂಪಾಯಿಯಿಂದ 5000 ರೂಪಾಯಿ: 500 ರೂ. ವಿಳಂಬ ಶುಲ್ಕ

– 5001 ರೂಪಾಯಿಯಿಂದ 10000 ರೂಪಾಯಿ: 750 ರೂ. ವಿಳಂಬ ಶುಲ್ಕ

– 10001 ರೂಪಾಯಿಯಿಂದ 25000 ರೂ.: 900 ರೂ. ವಿಳಂಬ ಶುಲ್ಕ

– 25001 ರೂಪಾಯಿಯಿಂದ 50000 ರೂ.: 1000 ರೂ. ವಿಳಂಬ ಶುಲ್ಕ

– ಬಾಕಿ ಮೊತ್ತ 50,000 ರೂಪಾಯಿ ಮೇಲ್ಪಟ್ಟು ಇದ್ದಲ್ಲಿ 1200 ರೂ. ವಿಳಂಬ ಶುಲ್ಕ

ಇದರ ಜತೆಗೆ 50 ರೂಪಾಯಿ ಹಾಗೂ ಜಿಎಸ್​ಟಿ ಅನ್ನು ಗ್ರಾಹಕ ಉಳಿತಾಯ ಖಾತೆಯಿಂದ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಈ ಹೆಚ್ಚಳವು ಎಮರಾಲ್ಡೆ ಕ್ರೆಡಿಟ್​ ಕಾರ್ಡ್​ಗೆ ಅನ್ವಯಿಸುವುದಿಲ್ಲ ಎನ್ನಲಾಗಿದೆ. ನಿರ್ದಿಷ್ಟ ಅವಧಿಯೊಳಗಾಗಿ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತವನ್ನು ಪಾವತಿಸದಿದ್ದಲ್ಲಿ ಅದನ್ನು ತೀರಿಸುವ ತನಕ ಕ್ರೆಡಿಟ್ ಕಾರ್ಡ್ ಬಳಸದಿರುವುದು ಉತ್ತಮ. ಇದರಿಂದ ಬಡ್ಡಿ ದರ ಹೆಚ್ಚಾಗುತ್ತದೆ. ದೊಡ್ಡ ಮೊತ್ತ ಇದ್ದಲ್ಲಿ ಅದನ್ನು ಸಮಾನ ಮಾಸಿಕ ಕಂತುಗಳಾಗಿ ಅಥವಾ ಇಎಂಐಗಳಾಗಿ ಮಾರ್ಪಡಿಸಬಹುದು.

ಐಸಿಐಸಿಐ ಬ್ಯಾಂಕ್ ಚೆಕ್ ಶುಲ್ಕಗಳು

ಕ್ರೆಡಿಟ್ ಕಾರ್ಡ್​ ವಿಳಂಬ ಶುಲ್ಕವನ್ನು ಏರಿಕೆ ಮಾಡಿರುವುದರ ಹೊರತಾಗಿ ಐಸಿಐಸಿಐ ಬ್ಯಾಂಕ್​ನಿಂದ ಒಟ್ಟಾರೆ ಆಟೋ ಡೆಬಿಟ್ ಮತ್ತು ಚೆಕ್ ರಿಟರ್ನ್ ಮೊತ್ತದ ಮೇಲೆ ಶೇ 2ರಷ್ಟು ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಮೊತ್ತ 500 ರೂಪಾಯಿ ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: ICICI Bank: ಐಸಿಐಸಿಐ ಬ್ಯಾಂಕ್​ಗೆ ಮೂರನೇ ತ್ರೈಮಾಸಿಕದಲ್ಲಿ ಶೇ 25ರಷ್ಟು ಲಾಭ ಹೆಚ್ಚಳ

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ