N Chandrasekharan: ಬಿಕ್ಕಟ್ಟಿನ ಕಾಲದಲ್ಲಿ ಟಾಟಾ ಸನ್ಸ್​ ಚುಕ್ಕಾಣಿ ಹಿಡಿದ ಎನ್​. ಚಂದ್ರಶೇಖರನ್ ಅವಧಿ ಮತ್ತೆ 5 ವರ್ಷಗಳಿಗೆ ವಿಸ್ತರಣೆ

ಟಾಟಾ ಸನ್ಸ್​ನ ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗೂ ಸಿಇಒ ಎನ್​. ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು 5 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ.

N Chandrasekharan: ಬಿಕ್ಕಟ್ಟಿನ ಕಾಲದಲ್ಲಿ ಟಾಟಾ ಸನ್ಸ್​ ಚುಕ್ಕಾಣಿ ಹಿಡಿದ ಎನ್​. ಚಂದ್ರಶೇಖರನ್ ಅವಧಿ ಮತ್ತೆ 5 ವರ್ಷಗಳಿಗೆ ವಿಸ್ತರಣೆ
ಎನ್​. ಚಂದ್ರಶೇಖರನ್ (ಸಂಗ್ರಹ ಚಿತ್ರ)
TV9kannada Web Team

| Edited By: Srinivas Mata

Feb 11, 2022 | 6:16 PM

ಟಾಟಾ ಸನ್ಸ್​ನ ಮಂಡಳಿಯು ಅಧ್ಯಕ್ಷ ಎನ್​. ಚಂದ್ರಶೇಖರನ್ (N Chandrasekharan) ಅವರ ಅವಧಿಯನ್ನು ಐದು ವರ್ಷಗಳ ಕಾಲ ವಿಸ್ತರಿಸುವುದಕ್ಕೆ ಫೆಬ್ರವರಿ 11ನೇ ತಾರೀಕಿನಂದು ನಿರ್ಧಾರ ಮಾಡಿದೆ. “ಈ ಸಭೆಗೆ ರತನ್ ಎನ್​. ಟಾಟಾ ಅವರು ವಿಶೇಷ ಆಹ್ವಾನಿತರು. ಎನ್​. ಚಂದ್ರಶೇಖರನ್ ಅವರ ನಾಯಕತ್ವದ ಅಡಿಯಲ್ಲಿ ಟಾಟಾ ಸಮೂಹದ (Tata Group) ಪ್ರಗತಿ ಮತ್ತು ಪ್ರದರ್ಶನದ ಬಗ್ಗೆ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಇನ್ನೂ 5 ವರ್ಷಗಳಿಗೆ ಅವಧಿ ವಿಸ್ತರಣೆ ಮಾಡುವಂತೆ ಶಿಫಾರಸು ಮಾಡಿದ್ದಾರೆ. ಆಡಳಿತ ಮಂಡಳಿ ಸದಸ್ಯರು ಸಹ ಕಾರ್ಯನಿರ್ವಾಹಕ ಅಧ್ಯಕ್ಷರ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದು, ಸರ್ವಾನುಮತದಿಂದ ಎನ್​.ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಕಾರ್ಯ ನಿರ್ವಾಹಕ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ,” ಎಂದು ಕಂಪೆನಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಂದ ಹಾಗೆ ಈ ತಿಂಗಳು ಚಂದ್ರಶೇಖರನ್ ಅವರ ಸದ್ಯದ ಅವಧಿ ಅಧ್ಯಕ್ಷರಾಗಿ ಕೊನೆಗೊಳ್ಳಲಿದೆ.

“ಟಾಟಾ ಸಮೂಹವನ್ನು ಕಳೆದ 5 ವರ್ಷಗಳಿಂದ ಮುನ್ನಡೆಸುತ್ತಿರುವುದು ವಿಶೇಷ ಗೌರವ ಮತ್ತು ಮುಂದಿನ ಹಂತಕ್ಕೆ, ಇನ್ನೈದು ವರ್ಷಕ್ಕೆ ಟಾಟಾ ಸಮೂಹವನ್ನು ಮುನ್ನಡೆಸಲು ಅವಕಾಶ ಸಿಕ್ಕಿರುವುದರಿಂದ ಸಂತೋಷವಾಗಿದೆ,” ಎಂದು ಚಂದ್ರಶೇಖರನ್ ಹೇಳಿದ್ದಾರೆ. 2017ನೇ ಇಸವಿಯಲ್ಲಿ ಚಂದ್ರಶೇಖರನ್ ಅವರು ಟಾಟಾ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಆ ಸಂದರ್ಭದಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಗೊಳಿಸುವುದರೊಂದಿಗೆ ನಾಯಕತ್ವದ ಬಿಕ್ಕಟ್ಟು ತಲೆದೋರಿತ್ತು. ಅಲ್ಲಿಯ ತನಕ ಚಂದ್ರಶೇಖರನ್ ಅವರು ಟಾಟಾ ಸಮೂಹದ ಅತಿ ಮುಖ್ಯರಾಗಿ ಗುರುತಿಸಿಕೊಂಡಿದ್ದರು. ಟಾಟಾ ಸಮೂಹದ ಪಾಲಿನ ಕಾಮಧೇನು ಅನಿಸಿಕೊಂಡಿದ್ದ ಟಿಸಿಎಸ್​ನ ನೋಡಿಕೊಳ್ಳುತ್ತಿದ್ದರು. ಆ ನಂತರ ಯಾವಾಗ ಹೊಸ ಜವಾಬ್ದಾರಿ ವಹಿಸಿಕೊಂಡರೋ ಟಾಟಾ ಸನ್ಸ್​ ಸ್ಥಿರತೆ ತರುವಲ್ಲಿ ಯಶ ಕಂಡರು.

ಸೈರಸ್​ ಮಿಸ್ತ್ರಿ ವಿರುದ್ಧ ಕಾನೂನು ಕದನದಲ್ಲಿ ಜಯ ಚಂದ್ರಶೇಖರನ್ ಅವರ ಅಧಿಕಾರಾವಧಿಯ ದೊಡ್ಡ ಸಮಯ ಕಳೆದಿದ್ದು ಸೈರಸ್​ ಮಿಸ್ತ್ರಿ ಜತೆಗಿನ ಕಾನೂನು ಕದನದಲ್ಲಿ. ಇದು ಈ ಹಿಂದೆಂದೂ ಟಾಟಾ ಸನ್ಸ್​ನಲ್ಲಿ ಕಾಣಿಸಿಕೊಂಡಿರದ ಸಾರ್ವಜನಿಕ ಕೆಸೆರೆರಚಾಟಕ್ಕೆ ಕಾರಣವಾಯಿತು. ಹೂಡಿಕೆದಾರರು, ಉದ್ಯಮ ಭಾಗೀದಾರರ ಮಧ್ಯೆ ಮರಳಿ ವಿಶ್ವಾಸ ಗಳಿಸಿ, ಟಾಟಾ ಹೆಸರನ್ನು ಮರುಸ್ಥಾಪಿಸುವುದು ಚಂದ್ರಶೇಖರನ್ ಅವರಿಗೆ ಬಹು ಮುಖ್ಯ ಕಾರ್ಯವಾಯಿತು. ಟಿಸಿಎಸ್​ನ ಪರ್ಫಾರ್ಮೆನ್ಸ್ ಹಾಗೂ ಮಾರುಕಟ್ಟೆಯನ್ನು ಒಪ್ಪಿಕೊಳ್ಳುವ ಸ್ವಭಾವದ ಮೂಲಕ ಅವರು ಅದನ್ನು ಯಶಸ್ವಿಯಾಗಿ ಮಾಡಿದರು. ಏರ್​ ಇಂಡಿಯಾದ ಬಿಡ್​ ಗೆದ್ದಿದ್ದು ಚಂದ್ರ ಅವರ ಅತಿ ದೊಡ್ಡ ಯಶಸ್ಸುಗಳಲ್ಲಿ ಒಂದು. ಇದರ ಜತೆಗೆ ಸುಪ್ರೀಂ ಕೋರ್ಟ್​ನಲ್ಲಿ ಸೈಸರ್ ಮಿಸ್ತ್ರಿ ವಿರುದ್ಧ ಗಳಿಸಿದ ಕಾನೂನು ವಿಜಯ ಕೂಡ ಪ್ರಮುಖವಾದದ್ದು. ಸರ್ಕಾರದ ಬಂಡವಾಳ ಹಿಂತೆಗೆತಕ್ಕೆ ಬೆಂಬಲ ನೀಡುವ ಮೂಲಕ ಹಾಗೂ ಏರ್ ಇಂಡಿಯಾವನ್ನು ಮರಳಿ ಟಾಟಾ ತೆಕ್ಕೆಗೆ ತರುವಲ್ಲಿ ಯಶಸ್ವಿಯಾದರು. ​

ಚಂದ್ರಶೇಖರನ್ ಮೂಲತಃ ತಂತ್ರಜ್ಞಾನ ಕ್ಷೇತ್ರದ ಹಿನ್ನೆಲೆಯಿಂದ ಬಂದವರು. ಆದರೂ ಸ್ವಲ್ಪ ಮಟ್ಟಿಗೆ ತಯಾರಿಕೆ ಮತ್ತು ಬಂಡವಾಳ ದೊಡ್ಡ ಮಟ್ಟದಲ್ಲಿ ಅಗತ್ಯ ಇರುವ ವಲಯಗಳ ಬಗ್ಗೆ ಜ್ಞಾನ ಇತ್ತು. ಟಾಟಾ ಸಮೂಹದ ಹಲವು ಲಿಸ್ಟೆಡ್ ಕಂಪೆನಿಗಳ ಸಾಲ ಸಮಸ್ಯೆಯನ್ನು ಬಗೆಹರಿಸುವುದು ಅತಿ ದೊಡ್ಡ ಕೆಲಸವಾಗಿತ್ತು. ಅದರಲ್ಲೂ ಟಾಟಾ ಸ್ಟೀಲ್​ಗೆ ದೊಡ್ಡ ಮಟ್ಟದ ಸಾಲ ಇತ್ತು. ಟಾಟಾ ಸ್ಟೀಲ್​ನ ಸಾಲದ ಹೊರೆ ಇಳಿಸಲು ಹಲವಾರು ವಿಲೀನ ಹಾಗೂ ಸ್ವಾಧೀನ ಪ್ರಯತ್ನಗಳನ್ನು ಸ್ವತಃ ಚಂದ್ರಶೇಖರನ್​ ನಿರ್ವಹಿಸಿದರು. ಆದರೆ ಅದರಲ್ಲಿ ಯಶಸ್ಸು ಕಾಣಲಿಲ್ಲ. ಕೊರೊನಾ ಸಮಯದಲ್ಲಿ ಪದಾರ್ಥಗಳ ಏರಿಳಿತ, ಹವಾಮಾನ ಹಾಗೂ ಚೀನಾ ಪಾರಮ್ಯದಿಂದ ರಚನಾತ್ಮಕ ಬದಲಾವಣೆಯಾಗಿ ಟಾಟಾ ಸ್ಟೀಲ್ ಏರಿಕೆಗೆ ಸಹಾಯ ಆಯಿತು.

ಟಾಟಾ ಟೆಲಿ ಸರ್ವೀಸ್ ಅನ್ನು ಭಾರ್ತಿ ಏರ್​ಟೆಲ್​ಗೆ ಮಾರಾಟ ಮಾಡಿ, ಸಾಲವನ್ನು ತನ್ನ ಬಳಿಯೇ ಇರಿಸಿಕೊಂಡಿದ್ದರಿಂದ ಚಂದ್ರಶೇಖರನ್ ಅವರ ಅಧಿಕಾರಾವಧಿಯಲ್ಲಿ ಮುಜುಗರದ ಸನ್ನಿವೇಶ ಎದುರಿಸುವಂತಾಯಿತು. ಜೆಟ್​ ಏರ್​ವೇಸ್​ ಖರೀದಿಸಬೇಕು ಎಂಬ ಪ್ರಯತ್ನ ಕೈಗೂಡಲಿಲ್ಲ. ಸ್ವಾಧೀನ ಹಾಗೂ ಖರೀದಿಯ ಹಲವು ಪ್ರಯತ್ನಗಳು ವಿಫಲವಾಗಿದ್ದಂಥವು ಚಂದ್ರಶೇಖರನ್ ಅವರ ಮೊದಲ ಅವಧಿಯಲ್ಲಿ ಯಶ ಕಂಡವು. ಟಾಟಾ ಪವರ್ ತನ್ನ ರಿನೀವಬಲ್ ವ್ಯವಹಾರದ ಮೌಲ್ಯವನ್ನು 2 ವರ್ಷಗಳಿಂದ ಹೆಚ್ಚು ಮಾಡಲು ಕೆಲಸ ಮಾಡುತ್ತಿದೆ. ಆದರೆ ರಿನೀವಬಲ್​ಗೆ ಪ್ರೀಮಿಯಂ ಮೌಲ್ಯಮಾಪನ ಬರುವ ಹೊತ್ತಿಗೆ ಅವಕಾಶದಿಂದ ತಪ್ಪಿಸಿಕೊಂಡಿತು. ಚಂದ್ರಶೇಖರನ್ ನಾಯಕತ್ವದಲ್ಲಿ ಟಾಟಾ ಮೋಟಾರ್ಸ್ ಸ್ಥಿರವಾಯಿತು ಮತ್ತು ಚಿಪ್ ಕೊರತೆಯ ಉತ್ತುಂಗದ ಸಮಯದಲ್ಲಿ ಸ್ವಾವಲಂಬಿ ಆಗಿರುವ ಅವರ ಬಲವಾದ ಹೇಳಿಕೆಯು ಇಂಡಿಯಾ ಇಂಕ್‌ನ ನಾಯಕರಾಗಿ ಸ್ಥಾನವನ್ನು ಬಲಪಡಿಸಿತು.

ಟಾಟಾ ಸಮೂಹದ ಡಿಜಿಟಲ್ ಥ್ರಸ್ಟ್ ಸೂಪರ್‌ ಆ್ಯಪ್ ರಚಿಸಲು ಚಂದ್ರಶೇಖರನ್ ಅವರ ವೈಯಕ್ತಿಕ ಪ್ರಯತ್ನಗಳ ಮೂಲಾಧಾರವಾಗಿದೆ. ಬಿಗ್ ಬಾಸ್ಕೆಟ್ ಮತ್ತು 1mg ಸೇರಿದಂತೆ ಕೆಲವು ಪ್ರಮುಖ ಸ್ವಾಧೀನಗಳು ಹೊಸ-ಯುಗ ವಲಯದ ಉತ್ಕರ್ಷದಲ್ಲಿ ಟಾಟಾ ನಕ್ಷೆಯಲ್ಲಿ ಇರಿಸಿದವು. ಆದರೆ ಉದ್ಯಮವು ಅವರ ತಾಂತ್ರಿಕ ಪರಿಣತಿಯನ್ನು ನೀಡಿದ ಈ ದಿಕ್ಕಿನಲ್ಲಿ ಗುಂಪಿನಿಂದ ಹೆಚ್ಚಿನದನ್ನು ನಿರೀಕ್ಷಿಸಿದೆ.

ಮುಂದಿನ ದಾರಿ ಚಂದ್ರಶೇಖರನ್ ಅವರ ಎರಡನೇ ಅವಧಿಯಲ್ಲಿ ಟಾಟಾ-ಮಿಸ್ತ್ರಿ ಸಾಹಸಗಾಥೆಯ ಸುತ್ತ ಅಪೂರ್ಣ ವ್ಯವಹಾರವನ್ನು ಪೂರ್ಣಗೊಳಿಸುವುದು ನಿರ್ಣಾಯಕವಾಗಿದೆ; ಸೈರಸ್ ಮಿಸ್ತ್ರಿಯಿಂದ ಅಂತಿಮ ಪ್ರತ್ಯೇಕತೆಯು ಒಂದು ಸಂಕೀರ್ಣ ವ್ಯವಹಾರವಾಗಿದ್ದು, ನಾಯಕತ್ವದ ತಂಡವು ಪರಿಣಾಮಕಾರಿಯಾಗಿ ನಿಭಾಯಿಸಬೇಕಾಗಿದೆ. ಚಂದ್ರಶೇಖರನ್ ಅವರು ಗುಂಪು ಮಟ್ಟದಲ್ಲಿ ಸುಸ್ಥಿರತೆ ಮೇಲೆ ಟಾಟಾ ಟ್ರಸ್ಟ್‌ಗಳ ಗಮನವನ್ನು ವ್ಯಕ್ತಪಡಿಸಬೇಕಾಗುತ್ತದೆ ಹಾಗೂ ಇತರ ದೊಡ್ಡ ವ್ಯಾಪಾರ ಸಮೂಹಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲು ಗುಂಪಿನ ಡಿಜಿಟಲ್ ಉಪಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ.

ಇದನ್ನೂ ಓದಿ: Tata Steel: ಟಾಟಾ ಸ್ಟೀಲ್ ಅಕ್ಟೋಬರ್​ನಿಂದ ಡಿಸೆಂಬರ್​ ಮೂರನೇ ತ್ರೈಮಾಸಿಕ ಲಾಭ ಶೇ 159ರಷ್ಟು ಹೆಚ್ಚಳ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada