ನೀವು ತಪ್ಪಾಗಿ ಬೇರೆ ಅಕೌಂಟ್‌ಗೆ ಹಣ ವರ್ಗಾಯಿಸಿದ್ರೆ, ವಾಪಸ್ ಹೀಗೆ ಮರಳಿ ಪಡೆಯಿರಿ

ಯುಪಿಐ ಪಾವತಿ ವೇಳೆ ಸಣ್ಣ ತಪ್ಪಿನಿಂದ ಹಣ ಬೇರೆಯವರ ಖಾತೆಗೆ ಹೋಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಭಯಪಡುವ ಅಗತ್ಯವಿಲ್ಲ. ಹಣವು ಬೇರೆ ಖಾತೆಗೆ ವರ್ಗಾವಣೆಯಾಗಿದ್ದರೆ ತಕ್ಷಣವೇ ಬ್ಯಾಂಕ್ ಅಥವಾ ಯುಪಿಐ ಆ್ಯಪ್‌ ಮೂಲಕ ದೂರು ದಾಖಲಿಸುವುದು ಬಹಳ ಮುಖ್ಯ. ಆದರೆ ಈ ವೇಳೆ ನೀವು ಟ್ರಾನ್ಸಾಕ್ಷನ್ ಐಡಿ, ಯುಪಿಐ ರೆಫರೆನ್ಸ್ ಸಂಖ್ಯೆ, ದಿನಾಂಕ, ಹಣ ಪಾವತಿಸಿದ ಸ್ಕ್ರೀನ್‌ಶಾಟ್‌ ನಿಮ್ಮ ಬಳಿಯಿರಲಿ.

ನೀವು ತಪ್ಪಾಗಿ ಬೇರೆ ಅಕೌಂಟ್‌ಗೆ ಹಣ ವರ್ಗಾಯಿಸಿದ್ರೆ, ವಾಪಸ್ ಹೀಗೆ ಮರಳಿ ಪಡೆಯಿರಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 05, 2026 | 6:24 PM

ಮುಖ್ಯಾಂಶಗಳು

  • ಇತ್ತೀಚೆಗಿನ ದಿನಗಳಲ್ಲಿ ಯುಪಿಐ (UPI) ಮೂಲಕ ಹಣ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ
  • ಸಣ್ಣ ಅಜಾಗರೂಕತೆಯಿಂದ ಯುಪಿಐ ಮೂಲಕ ಬೇರೆ ಖಾತೆಗೆ ಹಣ ವರ್ಗಾಯಿಸುತ್ತೇವೆ
  • ಯುಪಿಐ ಆ್ಯಪ್‌ ಮೂಲಕ ದೂರು ದಾಖಲಿಸಿ ಹಣವನ್ನು ಮರಳಿ ಪಡೆಯಬಹುದು

ಇತ್ತೀಚೆಗಿನ ದಿನಗಳಲ್ಲಿ ಯುಪಿಐ (UPI) ಮೂಲಕ ಹಣ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಕೆಲವೊಮ್ಮೆ ಸಣ್ಣ ಅಜಾಗರೂಕತೆಯಿಂದ ಯುಪಿಐ ಮೂಲಕ ಬೇರೆ ಖಾತೆಗೆ ಹಣ ಪಾವತಿಸುತ್ತೇವೆ. ಒಂದು ವೇಳೆ ತಪ್ಪಾಗಿ ಬೇರೆ ಅಕೌಂಟ್‌ಗೆ ಹಣ ವರ್ಗಾಯಿಸಿದ್ದರೆ ಹೇಗೆ ವಾಪಾಸ್ ಪಡೆಯುವುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ನೀವು ಯುಪಿಐ ಆ್ಯಪ್‌ ಮೂಲಕ ಅಥವಾ ನಿಮ್ಮ ಖಾತೆ ಇರುವ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಈ ಕೆಲವು ಪ್ರಕ್ರಿಯೆ ಅನುಸರಿಸಿದ್ರೆ ನೀವು ಬೇರೆ ಖಾತೆಗೆ ಹಾಕಿದ ಹಣವು ರಿಟರ್ನ್ ಬರುತ್ತದೆ.

ಯುಪಿಐ ಆ್ಯಪ್‌ನಲ್ಲಿ ದೂರು ದಾಖಲಿಸುವುದು ಹೇಗೆ?

ಹಂತ 1: ನೀವು ಬಳಸಿದ ಪಾವತಿ ಆ್ಯಪ್ (ಗೂಗಲ್ ಪೇ , ಫೋನೆಪೇ , ಪೇಟಿಎಂ , ಭೀಮ್) ಮೂಲಕ ತಕ್ಷಣವೇ ದೂರು ನೀಡಿ.

ಹಂತ 2: ಯುಪಿಐ ಆ್ಯಪ್ ತೆರೆದು ವಹಿವಾಟಿನ ಇತಿಹಾಸಗೆ (ಟ್ರಾನ್ಸಾಕ್ಷನ್ ಹಿಸ್ಟರಿ) ಹೋಗಿ.

ಹಂತ 3: ತಪ್ಪಾಗಿ ನಡೆದಿರುವ ವಹಿವಾಟನ್ನು (ಟ್ರಾನ್ಸಾಕ್ಷನ್) ಆಯ್ಕೆಮಾಡಿ. ಅಲ್ಲಿ ರಿಪೋರ್ಟ್, ಹೆಲ್ಪ್ ಅಥವಾ ರೈಸ್ ಎನ್‌ ಇಶ್ಯೂ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಲಾಗಿದೆ ಎಂದು ನಮೂದಿಸಿ ದೂರು ಸಲ್ಲಿಸಿ.

ಇದನ್ನೂ ಓದಿ: ಇಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುವುದು ಯಾವಾಗ? 40 ವರ್ಷಕ್ಕೆ ಕೆಲಸ ಬಿಟ್ಟರೂ ಬಡ್ಡಿ ಸಿಗುವುದು ಮುಂದುವರಿಯುತ್ತಾ?

ಆ್ಯಪ್‌ನಲ್ಲಿ ದೂರು ನೀಡಿದ ಬಳಿಕ ಈ ಕೆಲ್ಸ ಮಾಡಿ

  • ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಅಥವಾ ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
  • ಬ್ಯಾಂಕ್ ಅಧಿಕಾರಿಗಳಿಗೆ ವಹಿವಾಟಿನ ವಿವರ ಸೇರಿದಂತೆ ಯುಟಿಆರ್ ಸಂಖ್ಯೆಯನ್ನು ನೀಡಿ ರಿವರ್ಸಲ್ ಪ್ರಕ್ರಿಯೆ ಮಾಡಲು ವಿನಂತಿ ಮಾಡಿ.
  • ನೀವು ಖಾತೆ ಹೊಂದಿರುವ ಬ್ಯಾಂಕ್‌ನವರು ಹಣ ಪಡೆದವರ ಬ್ಯಾಂಕನ್ನು ಸಂಪರ್ಕ ಮಾಡಿ ಹಣ ಹಿಂಪಡೆಯಲು ನಿಮಗೆ ಸಹಾಯ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us