PF New Rules: ಈ ಜೋಡಣೆ ಆಗದಿದ್ದಲ್ಲಿ ಉದ್ಯೋಗದಾತರ ಪಿಎಫ್ ಕೊಡುಗೆ ನಿಮ್ಮ ಖಾತೆಗೆ ಬರಲ್ಲ

TV9 Digital Desk

| Edited By: Srinivas Mata

Updated on:Aug 11, 2021 | 2:14 PM

ಒಂದು ವೇಳೆ ಈ ಜೋಡಣೆ ಮಾಡದಿದ್ದಲ್ಲಿ ಉದ್ಯೋಗದಾತರ ಪಿಎಫ್ ಕೊಡುಗೆ ಬರುವುದಿಲ್ಲ ಏಕೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ

PF New Rules: ಈ ಜೋಡಣೆ ಆಗದಿದ್ದಲ್ಲಿ ಉದ್ಯೋಗದಾತರ ಪಿಎಫ್ ಕೊಡುಗೆ ನಿಮ್ಮ ಖಾತೆಗೆ ಬರಲ್ಲ
ಪ್ರಾತಿನಿಧಿಕ ಚಿತ್ರ

ಸೆಪ್ಟೆಂಬರ್ 1ರಿಂದ ಅನ್ವಯ ಆಗುವಂತೆ ಪ್ರತಿಯೊಬ್ಬ ಉದ್ಯೋಗಿಯು ಭವಿಷ್ಯ ನಿಧಿ (ಇಪಿಎಫ್) ಖಾತೆಯೊಂದಿಗೆ ಆಧಾರ್ ಅನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು. ಇದನ್ನು ಮಾಡದಿದ್ದರೆ, ಇಪಿಎಫ್ ಖಾತೆಗೆ ಉದ್ಯೋಗದಾತರ ಕೊಡುಗೆ ನಿಲ್ಲುತ್ತದೆ. ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡುವುದನ್ನು ಪೂರ್ಣಗೊಳಿಸಲು ಈ ಹಿಂದೆ ಜೂನ್ 1ರಂದು ಗಡುವು ನಿಗದಿಯಾಗಿತ್ತು, ನಂತರ ಇದನ್ನು ಇಪಿಎಫ್ಒದಿಂದ ಸೆಪ್ಟೆಂಬರ್ 1ಕ್ಕೆ ವಿಸ್ತರಿಸಲಾಯಿತು. ಆಧಾರ್‌ನೊಂದಿಗೆ ಜೋಡಣೆ ಮಾಡದ ಇಪಿಎಫ್ ಖಾತೆಗಳಿಗೆ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸಲು ಗಡುವು ಮೀರಿದ ನಂತರದಲ್ಲಿ ಅವರಿಗೆ ಸಾಧ್ಯವಾಗುವುದಿಲ್ಲ. ತಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಪಿಎಫ್ ಖಾತೆಗಳೊಂದಿಗೆ ಜೋಡಣೆ ಮಾಡದವರು ಕೊವಿಡ್-19 ಮುಂಗಡ ಮತ್ತು ಪಿಎಫ್ ಖಾತೆಗಳಿಗೆ ಲಿಂಕ್ ಮಾಡಲಾದ ವಿಮಾ ಪ್ರಯೋಜನಗಳಂಥ ಸೇವೆಗಳನ್ನು ಸಹ ಕಳೆದುಕೊಳ್ಳುತ್ತಾರೆ.

ಜೂನ್ 1ನೇ ತಾರೀಕಿನಂದು EPFOದಿಂದ ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸಂದೇಶವನ್ನು ಕಳುಹಿಸಿತು ಮತ್ತು ಎಲ್ಲ EPF ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸ್ಪಷ್ಟಪಡಿಸಿತು. ಆದರೆ ನಂತರ ದಿನಾಂಕವನ್ನು ಮೂರು ತಿಂಗಳಿಗೆ, ಸೆಪ್ಟೆಂಬರ್ 1 ಕ್ಕೆ ವಿಸ್ತರಿಸಿತು. ಎಲ್ಲಾ EPF ಖಾತೆದಾರರ UAN ಅನ್ನು ಆಧಾರ್ ಜತೆ ದೃಢೀಕರಿಸುವಂತೆ ಉದ್ಯೋಗದಾತರಿಗೆ EPFOದಿಂದ ಸೂಚಿಸಿದೆ.

EPFO ಹೇಳಿಕೆ “ಆತ್ಮೀಯ ಉದ್ಯೋಗದಾತರೇ, ಸಾಮಾಜಿಕ ಭದ್ರತೆ ಸಂಹಿತೆ, 2020ರ ಸೆಕ್ಷನ್ 142 ಜಾರಿಗೆ ಬಂದ ನಂತರ, ಆಧಾರ್ ಸಂಖ್ಯೆಯನ್ನು ಯುಎಎನ್‌ಗಳೊಂದಿಗೆ ಜೋಡಣೆ ಮಾಡಿದ ಮತ್ತು ಪರಿಶೀಲಿಸಿದ ಸದಸ್ಯರಿಗೆ ಮಾತ್ರ ಇಸಿಆರ್ ಅನ್ನು ಸಲ್ಲಿಸಲು ಅನುಮತಿಸಲಾಗುತ್ತದೆ,” ಎಂದು ಇಪಿಎಫ್‌ಒ ಹೇಳಿದೆ.

ಮತ್ತೊಂದೆಡೆ, ECR ಎಲೆಕ್ಟ್ರಾನಿಕ್ ಚಲನ್ ಕಮ್ ರಸೀದಿಯನ್ನು (ಅಥವಾ PF ರಿಟರ್ನ್) ಆಧಾರ್ ಪರಿಶೀಲಿಸಿದ UAN ಗಳೊಂದಿಗೆ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 1, 2021ರವರೆಗೆ ವಿಸ್ತರಿಸಲಾಗಿದೆ ಎಂದು EPFO ​​ತಿಳಿಸಿದೆ. ಉದ್ಯೋಗಿಗಳು ತಮ್ಮ PF ಅನ್ನು UAN ಜೋಡಣೆ ಮಾಡಿದ್ದರೆ ಮಾತ್ರ ಉದ್ಯೋಗದಾತರು ECR ಅನ್ನು ಸಲ್ಲಿಸಬಹುದು. ಆಧಾರ್ ಅನ್ನು ಆನ್​ಲೈನ್ ಮೂಲಕ ಜೋಡಣೆ ಮಾಡಬಹುದು. Umang ಮೊಬೈಲ್ ಆ್ಯಪ್ ಅಥವಾ ಒಟಿಪಿ ಮೂಲಕ ದೃಢೀಕರಣ ಮಾಡಬಹುದು. ಸಾಮಾನ್ಯವಾಗಿ ಇದು ಎರಡರಿಂದ ಮೂರು ನಿಮಿಷ ಸಮಯ ತೆಗೆದುಕೊಳ್ಳುತ್ತದೆ.

ಪ್ರಕ್ರಿಯೆ https://unifiedportal-mem.epfindia.gov.in/memberinterface/ಗೆ ಭೇಟಿ ನೀಡಿ

‘Manage’ ವಿಭಾಗದ ಅಡಿಯಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್ ಪ್ರಕಾರ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.

ನೀವು ವಿವರಗಳನ್ನು ಸೇವ್ ಮಾಡಿದ ನಂತರ ನಿಮ್ಮ ಆಧಾರ್ ಅನ್ನು UIDAI ಮಾನ್ಯ ಮಾಡುತ್ತದೆ. ಇದು ಒಂದು ಅಥವಾ ಎರಡು ನಿಮಿಷ ತೆಗೆದುಕೊಳ್ಳುತ್ತದೆ.

ನಿಮ್ಮ ಕೆವೈಸಿ ಡಾಕ್ಯುಮೆಂಟ್ ಅನ್ನು ಎರಡೂ ಕಡೆಗಳಿಂದ ಮೌಲ್ಯಮಾಪನ ಮಾಡಿದ ನಂತರ ಸಿಸ್ಟಮ್ ಸ್ವಯಂಚಾಲಿತವಾಗಿ ಇಪಿಎಫ್ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಜೋಡಣೆ ಮಾಡುತ್ತದೆ.

ಆಧಾರ್ ಅನ್ನು ಆನ್‌ಲೈನ್‌ನಲ್ಲಿ, ‘ಉಮಾಂಗ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ಒಟಿಪಿ ಪರಿಶೀಲನೆ ಮೂಲಕ ಸೀಡ್ ಮಾಡಬಹುದು. ಇದು ಸಾಮಾನ್ಯವಾಗಿ 2-3 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

OTP ಮೂಲಕ ಜೋಡಣೆ www.epfindia.gov.in/eKYC/ ದಲ್ಲಿ ಲಾಗಿನ್ ಆಗಿ.

UAN ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

‘OTP ಜನರೇಟ್’ ಆಯ್ಕೆಯನ್ನು ಕ್ಲಿಕ್ ಮಾಡಿ.

ಅಗತ್ಯವಿರುವ ಸ್ಥಳದಲ್ಲಿ OTP ನಮೂದಿಸಿ ಮತ್ತು gender (ಲಿಂಗವನ್ನು) ಆಯ್ಕೆ ಮಾಡಿ.

ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಆಧಾರ್ ಪರಿಶೀಲನೆ’ ವಿಧಾನವನ್ನು ಆಯ್ಕೆ ಮಾಡಿ.

‘ಮೊಬೈಲ್ ಬಳಸಿ ಅಥವಾ ಇ-ಮೇಲ್ ಆಧಾರಿತ ಪರಿಶೀಲನೆ’ ಆಯ್ಕೆಯನ್ನು ಆರಿಸಿ. ನಿಮ್ಮ ಆಯ್ಕೆಯ ಪ್ರಕಾರ ಇನ್ನೊಂದು OTP ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಬರುತ್ತದೆ.

ಈಗ ಆ OTP ಅನ್ನು ನಮೂದಿಸಿ ಹಾಗೂ ನಿಮ್ಮ EPF ಮತ್ತು ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.

‘Umang’ ಆ್ಯಪ್ ಮೂಲಕ ‘Umang’ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ಮತ್ತು OTP ಅಥವಾ MPIN ಮೂಲಕ ಆ್ಯಪ್ ತೆರೆಯಿರಿ.

ಈಗ ‘ಎಲ್ಲಾ ಸೇವೆಗಳ ಟ್ಯಾಬ್’ ಗೆ ಹೋಗಿ ಮತ್ತು ‘EPFO’ ಅನ್ನು ಆಯ್ಕೆ ಮಾಡಿ.

EPFO ವಿಭಾಗದ ಅಡಿಯಲ್ಲಿ ‘e-KYC ಸೇವೆಗಳು’ ಮೇಲೆ ಕ್ಲಿಕ್ ಮಾಡಿ.

ಈಗ ‘ಇ-ಕೆವೈಸಿ ಸೇವೆಗಳು’ ವಿಭಾಗದ ಅಡಿಯಲ್ಲಿ ‘ಆಧಾರ್ ಸೀಡಿಂಗ್’ ಆಯ್ಕೆಯನ್ನು ಆರಿಸಿ.

ನಿಮ್ಮ UAN ಅನ್ನು ನಮೂದಿಸಿ ಮತ್ತು ‘OTP ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ಪಡೆಯುತ್ತೀರಿ.

OTP ಪರಿಶೀಲಿಸಿ ಮತ್ತು ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ.

ಮತ್ತೊಮ್ಮೆ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.

‘Confirm’ ಮತ್ತು ‘Submit’ ಕ್ಲಿಕ್ ಮಾಡಿ. ಈ ಪ್ರಕ್ರಿಯೆಯು ಒಂದು ನಿಮಿಷದೊಳಗೆ ಪೂರ್ಣಗೊಂಡ ನಂತರ ನಿಮ್ಮ ಆಧಾರ್ ಅನ್ನು UANಗೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ: How EPF Saves More Than 1 Crore: ಇಪಿಎಫ್​ ಮೂಲಕ ರೂ. 1.65 ಕೋಟಿ ಉಳಿಸುವುದು ಹೇಗೆಂದು ತಿಳಿಯಿರಿ

ಇದನ್ನೂ ಓದಿ: PF Rules Change: ಯುಎಎನ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಉದ್ಯೋಗಿ ಪಿಎಫ್​ ಖಾತೆಗೆ ಹಣ ಜಮೆ ಆಗಲ್ಲ

(If Aadhaar not seeding with PF account employer contribution will not be credited)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada