EPFO: ವಿಲೀನವಾದ ಬ್ಯಾಂಕ್​ನಲ್ಲಿ ಖಾತೆಯಿದ್ದರೆ ತಕ್ಷಣವೇ ಪಿಎಫ್​ ಅಕೌಂಟ್​ನಲ್ಲಿ ಬ್ಯಾಂಕ್ ಮಾಹಿತಿ ಅಪ್​ಡೇಟ್ ಮಾಡಿ​

| Updated By: Srinivas Mata

Updated on: Jun 26, 2021 | 1:21 PM

ಈಚೆಗೆ ಕೆಲವು ಬ್ಯಾಂಕ್​ಗಳ ವಿಲೀನವಾಗಿದೆ. ಒಂದು ವೇಳೆ ಆ ಬ್ಯಾಂಕ್​ಗಳಲ್ಲಿನ ಖಾತೆ ಜತೆಗೆ ಪಿಎಫ್​ ಅಕೌಂಟ್​ ಅಪ್​ಡೇಟ್​ ಆಗಿದ್ದಲ್ಲಿ ಅವುಗಳ ಮಾಹಿತಿಯನ್ನು ಬದಲಾವಣೆ ಮಾಡಬೇಕಾಗುತ್ತದೆ. ಏಕೆಂದರೆ ಅವುಗಳ ಐಎಫ್​ಎಸ್​ಸಿ ಕೋಡ್ ಏಪ್ರಿಲ್ 1, 2021ರಿಂದ ಅಸಿಂಧುವಾಗಿದೆ.

EPFO: ವಿಲೀನವಾದ ಬ್ಯಾಂಕ್​ನಲ್ಲಿ ಖಾತೆಯಿದ್ದರೆ ತಕ್ಷಣವೇ ಪಿಎಫ್​ ಅಕೌಂಟ್​ನಲ್ಲಿ ಬ್ಯಾಂಕ್ ಮಾಹಿತಿ ಅಪ್​ಡೇಟ್ ಮಾಡಿ​
ಪ್ರಾತಿನಿಧಿಕ ಚಿತ್ರ
Follow us on

ನೀವೇನಾದರೂ ಪಿಎಫ್​ (ಪ್ರಾವಿಡೆಂಟ್ ಫಂಡ್) ಹಣ ವಿಥ್​ಡ್ರಾ ಮಾಡಬೇಕು ಅಂದುಕೊಂಡಿದ್ದೀರಾ? ಅದಕ್ಕಾಗಿ ಮೊದಲಿಗೆ ಪಿಎಫ್​ ಖಾತೆಯಲ್ಲಿ ಬ್ಯಾಂಕ್ ಮಾಹಿತಿಯನ್ನು ಅಪ್​ಡೇಟ್​ ಮಾಡಬೇಕು. ಇಲ್ಲದಿದ್ದಲ್ಲಿ ಪಿಎಫ್​ ಖಾತೆಯಿಂದ ಹಣ ಡ್ರಾ ಮಾಡಲು ಆಗಲ್ಲ. ಈಚೆಗೆ ವಿಲೀನವಾದ ಬ್ಯಾಂಕ್​ಗಳಲ್ಲಿ ಯಾವುದಾದರೂ ಒಂದರಲ್ಲಿ ಖಾತೆ ಇದ್ದಲ್ಲಿ ಇವತ್ತೇ ಖಾತೆಯ ಮಾಹಿತಿಯನ್ನು ಅಪ್​ಡೇಟ್ ಮಾಡುವುದು ಉತ್ತಮ. ಸಾರ್ವಜನಿಕ ಸ್ವಾಮ್ಯದ ಕೆಲವು ಬ್ಯಾಂಕ್​ಗಳು ಈಚೆಗೆ ವಿಲೀನ ಆಗಿವೆ. ಆ ಬ್ಯಾಂಕ್​ಗಳ ಐಎಫ್​ಎಸ್​ಸಿ ಕೋಡ್​ಗಳು ಏಪ್ರಿಲ್​ 1, 2021ರಿಂದ ಅಸಿಂಧುವಾಗಿದೆ. ಆ ಕಾರಣಕ್ಕೆ ಕ್ಲೇಮ್​ಗಳು ಪ್ರೊಸೆಸ್ ಆಗುವುದಿಲ್ಲ. ಪ್ರಾವಿಡೆಂಟ್ ಫಂಡ್ ಅಕೌಂಟ್​ನಲ್ಲಿ ತಮ್ಮ ಬ್ಯಾಂಕ್​ ಖಾತೆಯ ಮಾಹಿತಿಯನ್ನು ಅಪ್​ಡೇಟ್​ ಮಾಡುವಂತೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದಿಂದ ಮನವಿ ಮಾಡಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸರ್ಕಾರದಿಂದ ನಾನ್- ರೀಫಂಡಬಲ್ ಪಿಎಫ್ ಮುಂಗಡವನ್ನು ಘೋಷಿಸಲಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣಕಾಸು ತುರ್ತು ಇರುವವರು ಈಗಿನ ಅವಕಾಶವನ್ನು ಬಳಸಿಕೊಳ್ಳಬಹುದು.

ಪಿಎಫ್​ ಹಣ ವಿಥ್​ಡ್ರಾಗೆ ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಬಗೆಯಲ್ಲಿ ಅರ್ಜಿ ಸಲ್ಲಿಸಬಹುದು. ಪಿಎಫ್ ಖಾತೆಯಲ್ಲಿ ಒಂದು ವೇಳೆ ಬ್ಯಾಂಕ್ ಖಾತೆಯ ಮಾಹಿತಿ ಅಪ್​ಡೇಟ್ ಆಗಿಲ್ಲ ಅಂತಾದರೆ ಕ್ಲೇಮ್ ಪಡೆದುಕೊಳ್ಳುವುದು ಕಷ್ಟ. ಇಪಿಎಫ್​ಒ ತಿಳಿಸಿರುವಂತೆ, ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಅಲಹಾಬಾದ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಂಕ್​ನ ಐಎಫ್​ಎಸ್​ಸಿ ಕೋಡ್​ಗಳು ಅಸಿಂಧುವಾಗಿವೆ. ಉದ್ಯೋಗದಾತರ ಮೂಲಕ ಸರಿಯಾದ ಐಎಫ್​ಎಸ್​ಸಿ ಕೋಡ್​ ಅಪ್​ಡೇಟ್​ ಮಾಡದಿದಲ್ಲಿ ಆನ್​ಲೈನ್ ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಐಎಫ್​ಎಸ್​ಸಿ ಪಡೆದು, ಬ್ಯಾಂಕ್ ಮಾಹಿತಿ ಅಪ್​​ಲೋಡ್ ಮಾಡಿ, ಅಪ್ರೂವ್ ಕೂಡ ಆಗಬೇಕು. ಆಗಷ್ಟೇ ಬ್ಯಾಂಕ್​ಗೆ ಬಂದ ಹಣ ವಾಪಸ್ ಹೋಗುವುದಿಲ್ಲ.

ಬ್ಯಾಂಕ್ ಖಾತೆ ಅಪ್​ಡೇಟ್ ಹೇಗೆ?
1. ಇಪಿಎಫ್​ಒ ಯುನಿಫೈಡ್ ಸದಸ್ಯರ ಪೋರ್ಟಲ್ https://unifiedportal-mem.epfindia.gov.in/memberinterface/ ಇದಕ್ಕೆ ತೆರಳಬೇಕು
2. UAN ಮತ್ತು ಪಾಸ್​ವರ್ಡ್​ನೊಂದಿಗೆ ಲಾಗ್​ ಇನ್ ಆಗಬೇಕು.
3. Manage ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
4. ಈ ಮೆನುವಿನಲ್ಲಿ KYC ಆಯ್ಕೆ ಮಾಡಬೇಕು.
5. ಈಗ ಬ್ಯಾಂಕ್ ಆಯ್ಕೆ ಮಾಡಿ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು ಹೊಸ ಐಎಫ್​ಎಸ್​ಸಿ ಕೋಡ್ ಭರ್ತಿ ಮಾಡಿ, ಸೇವ್ ಮಾಡಬೇಕು.
6. ಈ ಮಾಹಿತಿಯು ಮೊದಲು ಉದ್ಯೋಗದಾತರಿಂದ ಅಪ್ರೂವ್ ಆಗಬೇಕು. ಆ ನಂತರ ಅಪ್​ಡೇಟ್ ಆಗಿರುವ ಬ್ಯಾಂಕ್​ ಮಾಹಿತಿಯು ಅಪ್ರೂವ್ ಆಗಿರುವ ಕೆವೈಸಿ ವಿಭಾಗದಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: SBI UPI Services: ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದ ನಿಮ್ಮ ಖಾತೆಗೆ ಯುಪಿಐ ಸೇವೆ ಆ್ಯಕ್ಟಿವೇಟ್ ಹಾಗೂ ಡಿಆ್ಯಕ್ಟಿವೇಟ್ ಹೇಗೆ?

(If your account with merged banks need to update with PF account. Here is the reason why?)