Rules Changing From June 1: ಜೂನ್ನಲ್ಲಿ ಆರ್ಟಿಒದಿಂದ ಹಿಡಿದು ಆಧಾರ್ವರೆಗೆ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ
June 2024 financial rule changes: ನಮ್ಮ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ಪ್ರಮುಖ ಘಟನೆಗಳು, ನಿಯಮಗಳು ಜೂನ್ ತಿಂಗಳಲ್ಲಿ ಇವೆ. ಜೂನ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜೂನ್ 14ರವರೆಗೆ ಅವಕಾಶ ಇದೆ. ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಎಂಟು ದಿನ ಇದೆ. ಪೂರ್ಣ ವಿವರ ಈ ಸುದ್ದಿಯಲ್ಲಿದೆ ಓದಿ....
2024ರ ಜೂನ್ ತಿಂಗಳು ಹತ್ತಿರ ಇದೆ. ಆ ತಿಂಗಳು ಏನಾದರೂ ಪ್ರಮುಖ ಹಣಕಾಸು ಘಟನೆಗಳು (financial events) ಇವೆಯಾ ಎಂದು ಮುಂಚಿತವಾಗಿ ತಿಳಿಯುವುದು ಉತ್ತಮ. ಬ್ಯಾಂಕ್ ರಜೆಗಳಲ್ಲದೇ ಇನ್ನೂ ಕೆಲ ಪ್ರಮುಖ ಸಂಗತಿಗಳು, ಜನರ ದೈನಂದಿನ ಹಣವಂತಿಕೆಯ ಮೇಲೆ ಪರಿಣಾಮ ಬೀರಬಲ್ಲಂತಹ ಸಂಗತಿಗಳು ಮೊದಲೇ ಅರಿವಿದ್ದರೆ ಸರಿ. ಜೂನ್ ತಿಂಗಳಲ್ಲಿ ಇಂಥ ಹಣಕಾಸು ಪ್ರಭಾವ ಇರುವ ಪ್ರಮುಖ ವಿಚಾರಗಳು ಇಲ್ಲಿವೆ. ಜೂನ್ 4ರಂದು ಬರುವ ಲೋಕಸಭಾ ಚುನಾವಣೆಯ ಫಲಿತಾಂಶ ಕೂಡ ಪರಿಣಾಮ ಬೀರುತ್ತದೆ. ಅದನ್ನು ಬಿಟ್ಟು ಒಂದಿಷ್ಟು ಪ್ರಮುಖ ಘಟನೆಗಳ ವಿವರ ಇಲ್ಲಿದೆ.
ಎಲ್ಪಿಜಿ ಸಿಲಿಂಡರ್ ದರ
ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಪ್ರತೀ ತಿಂಗಳು ಎಲ್ಜಿಪಿ ದರಗಳ ಪರಿಷ್ಕರಣೆ ಮಾಡುತ್ತವೆ. ಮೇ 1ರಂದು ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ ಇಳಿಕೆ ಮಾಡಲಾಗಿತ್ತು. ಜೂನ್ 1ರಂದು ಬೆಲೆ ಇಳಿಕೆ ಆಗುತ್ತದಾ, ಏರಿಕೆ ಆಗುತ್ತದಾ ಅಥವಾ ಬದಲಾವಣೆ ಆಗದಾ ಕಾದು ನೋಡಬೇಕು.
ಬ್ಯಾಂಕ್ ರಜಾ ದಿನಗಳು
ಜೂನ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಒಳಗೊಂಡಿವೆ. ಕರ್ನಾಟಕದಲ್ಲಿ ಎಂಟು ದಿನ ರಜೆ ಇದೆ.
ಇದನ್ನೂ ಓದಿ: ಪಾನ್ ಕಾರ್ಡ್ಗೆ ಆಧಾರ್ ಲಿಂಕ್; ಮೇ 31ಕ್ಕೆ ಡೆಡ್ಲೈನ್; ಮೀರಿದರೆ ಕಷ್ಟಕಷ್ಟ; ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಸಂದೇಶ
ಆಧಾರ್ ಕಾರ್ಡ್ ಅಪ್ಡೇಟ್
ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಅವಕಾಶ ಜೂನ್ 14ರವರೆಗೂ ಇದೆ. ಆ ಬಳಿಕ ಆಧಾರ್ ಅಪ್ಡೇಟ್ ಮಾಡಲು 50 ರೂ ಶುಲ್ಕ ಪಾವತಿಸಬೇಕು.
ಟ್ರಾಫಿಕ್ ನಿಯಮದಲ್ಲಿ ಬದಲಾವಣೆ
ಜೂನ್ 1ರಿಂದ ಹೆಚ್ಚು ಕಟ್ಟುನಿಟ್ಟಾಗಿರುವ ಟ್ರಾಫಿಕ್ ನಿಯಮಗಳು ಚಾಲನೆಗೆ ಬರಲಿವೆ. ದಂಡದ ಮೊತ್ತ ಹೆಚ್ಚಲಿದೆ. ವಾಹನವನ್ನು ಹೆಚ್ಚು ವೇಗದಲ್ಲಿ ಚಲಾಯಿಸಿದರೆ ಎರಡು ಸಾವಿರ ರೂವರೆಗೂ ದಂಡ ಕಟ್ಟಬೇಕಾದೀತು. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ 25,000 ರೂ ದಂಡ ಕಟ್ಟಬೇಕಾಗುತ್ತದೆ. ಆ ಹುಡುಗ ಅಥವಾ ಹುಡುಗಿಗೆ 25 ವರ್ಷ ವಯಸ್ಸಾಗುವವರೆಗೂ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 28 May 24