ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕ ಬೆಳವಣಿಗೆಯಲ್ಲಿ ತತ್ತರಿಸಿದ ಬಿಟ್​ಕಾಯಿನ್; ಥರಗುಟ್ಟಿದ ಕ್ರಿಪ್ಟೋಕರೆನ್ಸಿಗಳು

| Updated By: Srinivas Mata

Updated on: Sep 09, 2021 | 2:34 PM

Cryptocurrency: ಬಿಟ್​ಕಾಯಿನ್, ಎಥರ್ ಸೇರಿದಂತೆ ಇತರ ಪ್ರಮಖ ಕ್ರಿಪ್ಟೋಕರೆನ್ಸಿಗಳ ದರ ಇಂತಿದೆ. ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕದಲ್ಲಿನ ಬೆಳವಣಿಗೆಗಳು ಕ್ರಿಪ್ಟೋಕರೆನ್ಸಿ ಮೇಲೆ ಆಗಿದೆ.

ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕ ಬೆಳವಣಿಗೆಯಲ್ಲಿ ತತ್ತರಿಸಿದ ಬಿಟ್​ಕಾಯಿನ್; ಥರಗುಟ್ಟಿದ ಕ್ರಿಪ್ಟೋಕರೆನ್ಸಿಗಳು
ಪ್ರಾತಿನಿಧಿಕ ಚಿತ್ರ
Follow us on

ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಗುರುವಾರ ಶೇ 2.80ರಷ್ಟು ಇಳಿಕೆಯಾಗಿ, 45,813.90 ಯುಎಸ್​ಡಿಗೆ ಕುಸಿದಿದೆ. ಮತ್ತೊಂದೆಡೆ, ಬಿಟ್‌ಕಾಯಿನ್‌ನ ಪ್ರತಿಸ್ಪರ್ಧಿ ಕರೆನ್ಸಿಯಾದ ಎಥೆರಿಯಮ್ ಶೇಕಡಾ 1.13 ರಷ್ಟು ಇಳಿಕೆಯಾಗಿ 3,474.44 ಡಾಲರ್​ಗೆ ಇಳಿದಿದೆ. ಬಿಟ್​ಕಾಯಿನ್ ಮತ್ತು ಎಥೆರಿಯಮ್ ಎರಡರ ಒಟ್ಟು ಮಾರುಕಟ್ಟೆ ಬಂಡವಾಳ ಕ್ರಮವಾಗಿ 861.7 ಬಿಲಿಯನ್ ಯುಎಸ್​ಡಿ, 408.062 ಬಿಲಿಯನ್ ಯುಎಸ್​ಡಿ ಆಗಿದೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿನ ಈ ಕುಸಿತಕ್ಕೆ ಭಾಗಶಃ ಎಲ್ ಸಲ್ವಡಾರ್, ಲ್ಯಾಟಿನ್ ಅಮೆರಿಕನ್ ದೇಶದಿಂದ ಚಾಲನೆ ಸಿಕ್ಕಿದೆ. ಅಂದಹಾಗೆ ಬಿಟ್ ಕಾಯಿನ್ ಅನ್ನು ಕಾನೂನುಬದ್ಧ ಮಾಡಿ, ಅಳವಡಿಸಿಕೊಂಡ ವಿಶ್ವದ ಮೊದಲ ರಾಷ್ಟ್ರ ಎಲ್​ ಸಲ್ವಡಾರ್​. ದೇಶದಾದ್ಯಂತ ಈ ದೊಡ್ಡ ಪ್ರಮಾಣದ ಬಿಟ್ ಕಾಯಿನ್ ಅಳವಡಿಕೆ ಗೊಂದಲಮಯ ಸನ್ನಿವೇಶವನ್ನು ಸೃಷ್ಟಿಸಿದೆ. ಬಿಟ್​ಕಾಯಿನ್​ ವಿಪರೀತ ಏರಿಳಿಕೆ ದಾಖಲಿಸುವುದರಿಂದ ಆ ದೇಶದ ಜನರು ಬಿಟ್​ಕಾಯಿನ್ ಬಳಸಲು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

ಸೋಮವಾರದಂದು ಎಲ್ ಸಲ್ವಡಾರ್ ತನ್ನ ಮೊದಲ 400 ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸಿತು. ತಾತ್ಕಾಲಿಕವಾಗಿ ಬಿಟ್‌ಕಾಯಿನ್‌ ಶೇ 1.49ರಷ್ಟು ಬೆಲೆ ಏರಿಕೆಯಾಗಿ, 52,680 ಡಾಲರ್​ಗೂ ಹೆಚ್ಚಾಯಿತು. ಗುರುವಾರದ ಹೊತ್ತಿಗೆ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ 2.09 ಲಕ್ಷ ಕೋಟಿ ಡಾಲರ್​ಗಳಾಗಿವೆ. ಇದು ಕೊನೆಯ ದಿನಕ್ಕಿಂತ ಶೇ 1.11 ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆ ವಾಲ್ಯೂಮ್ 179.80 ಬಿಲಿಯನ್ ಯುಎಸ್​ಡಿ ಆಗಿದ್ದು, ಅದು ಶೇ 25.59 ಇಳಿಕೆಯಾಗಿದೆ. DeFiನಲ್ಲಿನ ಒಟ್ಟು ವಾಲ್ಯೂಮ್ ಪ್ರಸ್ತುತ 23.66 ಬಿಲಿಯನ್ ಡಾಲರ್ ಆಗಿದ್ದು, ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಶೇಕಡಾ 13.16ರಷ್ಟು 24 ಗಂಟೆಯ ವಾಲ್ಯೂಮ್ ಇದಾಗಿದೆ. ಎಲ್ಲ ಸ್ಥಿರ ಕಾಯಿನ್​ಗಳ ವಾಲ್ಯೂಮ್ ಈಗ 140.74 ಬಿಲಿಯನ್ ಡಾಲರ್ ಆಗಿದೆ. ಇದು ಒಟ್ಟು ಕ್ರಿಪ್ಟೋ ಮಾರುಕಟ್ಟೆಯ 24 ಗಂಟೆಗಳ ವಾಲ್ಯೂಮ್​ನ ಶೇಕಡಾ 78.28ರಷ್ಟಾಗುತ್ತದೆ. ಮತ್ತೊಂದೆಡೆ, ಕಳೆದ 24 ಗಂಟೆಗಳಲ್ಲಿ ಬಿಟ್‌ಕಾಯಿನ್‌ನ ಪ್ರಾಬಲ್ಯವು ಶೇ 0.60 ಹೆಚ್ಚಾಗಿದೆ ಮತ್ತು ಪ್ರಸ್ತುತ ಶೇ 41.39ರಲ್ಲಿದೆ. ಕಾರ್ಡಾನೋ ಶೇ 5.65 ಇಳಿಕೆ ಆಗಿ, 2.40 ಡಾಲರ್ ಆಗಿದ್ದರೆ, Dogecoin ಶೇ 3.62ರಷ್ಟು ಇಳಿಕೆ ಆಗಿ, 0.2514 ಡಾಲರ್​ನಲ್ಲಿ ವಹಿವಾಟಾಗುತ್ತಿತ್ತು.

ಬಿಟ್ ಕಾಯಿನ್ 45,813 ಯುಎಸ್​ಡಿ ಅಥವಾ (ಶೇ -2.80) 24 ಗಂಟೆಗಳಲ್ಲಿ ಬದಲಾವಣೆ
Ethereum 3,474.44 ಯುಎಸ್​ಡಿ ಅಥವಾ (ಶೇ -1.13) 24 ಗಂಟೆಗಳಲ್ಲಿ ಬದಲಾವಣೆ
ಕಾರ್ಡಾನೊ 2.40 ಯುಎಸ್​ಡಿ ಅಥವಾ (ಶೇ -5.65) 24 ಗಂಟೆಗಳಲ್ಲಿ ಬದಲಾವಣೆ
Binance ಕಾಯಿನ್ 404.89 ಯುಎಸ್​ಡಿ ಅಥವಾ (ಶೇ -4.35) 24 ಗಂಟೆಗಳಲ್ಲಿ ಬದಲಾವಣೆ
ಟೆಥರ್ 1.00 ಯುಎಸ್​ಡಿ ಅಥವಾ (ಶೇ +0.00) 24 ಗಂಟೆಗಳಲ್ಲಿ ಬದಲಾವಣೆ
XRP 1.09 ಯುಎಸ್​ಡಿ ಅಥವಾ (ಶೇ -4.42) 24 ಗಂಟೆಗಳಲ್ಲಿ ಬದಲಾವಣೆ
ಸೋಲಾನಾ 208.54 ಯುಎಸ್​ಡಿ (ಶೇ 18.33) 24 ಗಂಟೆಗಳಲ್ಲಿ ಬದಲಾವಣೆ
Dogecoin 0.2516 ಯುಎಸ್​ಡಿ ಅಥವಾ (ಶೇ -3.47) 24 ಗಂಟೆಗಳಲ್ಲಿ ಬದಲಾವಣೆ
ಪೋಲ್ಕಡೋಟ್ 27.18 ಯುಎಸ್​ಡಿ ಅಥವಾ (ಶೇ -4.78) 24 ಗಂಟೆಗಳಲ್ಲಿ ಬದಲಾವಣೆ
USD ಕಾಯಿನ್ 1.00 ಯುಎಸ್​ಡಿ ಅಥವಾ (ಶೇ 0.05) ಕಳೆದ 24 ಗಂಟೆಗಳಲ್ಲಿ ಬದಲಾವಣೆ
Uniswap 23.07 ಡಾಲರ್ ಅಥವಾ (ಶೇ -6.50) 24 ಗಂಟೆಗಳಲ್ಲಿ ಬದಲಾವಣೆ
ಚೈನ್ ಲಿಂಕ್ 26.66 ಯುಎಸ್​ಡಿ ಅಥವಾ (ಶೇ -7.70) 24 ಗಂಟೆಗಳಲ್ಲಿ ಬದಲಾವಣೆ

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಬಗ್ಗೆ ಸುಳಿವು ನೀಡಿದ ಹಣಕಾಸು ಸಚಿವೆ

(Including Bitcoin Ether And Other Major Cryptocurrency Today Price Here)