AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕೆ ಬಂದರೆ ಐಟಿ ಅಧಿಕಾರಿಗಳಿಗೆ ನಿಮ್ಮ ಇಮೇಲ್, ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನು ಭೇದಿಸಿ ನೋಡುವ ಅಧಿಕಾರ

Income tax dept authorised to access email in tax fraud cases: ನೀವು ತೆರಿಗೆ ವಂಚನೆ ಮಾಡಿರಬಹುದು ಎಂದು ಸಂಶಯ ಬಂದರೆ ಐಟಿ ಅಧಿಕಾರಿಗಳು ನಿಮ್ಮ ಇಮೇಲ್ ಬಗೆದು ನೋಡುವ ಅಧಿಕಾರ ಹೊಂದಿರಲಿದ್ದಾರೆ. ಇಮೇಲ್, ಸೋಷಿಯಲ್ ಮೀಡಿಯಾ ಅಕೌಂಟ್ ಸೇರಿದಂತೆ ಡಿಜಿಟಲ್ ಪ್ಲಾಟ್​​ಫಾರ್ಮ್​ಗಳ ಅಕ್ಸೆಸ್ ಐಟಿ ಅಧಿಕಾರಿಗಳಿಗೆ ಇರಲಿದೆ. ಹೊಸ ಐಟಿ ಮಸೂದೆ ಮೂಲಕ 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದೆ. 2026ರ ಏಪ್ರಿಲ್​ನಿಂದ ಇದು ಜಾರಿಗೆ ಬರಬಹುದು.

ಶಂಕೆ ಬಂದರೆ ಐಟಿ ಅಧಿಕಾರಿಗಳಿಗೆ ನಿಮ್ಮ ಇಮೇಲ್, ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನು ಭೇದಿಸಿ ನೋಡುವ ಅಧಿಕಾರ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2025 | 4:03 PM

Share

ನವದೆಹಲಿ, ಮಾರ್ಚ್ 4: ನೀವು ಕಪ್ಪು ಹಣ ಹೊಂದಿದ್ದೀರಿ, ಆದಾಯ ತೆರಿಗೆ ಪಾವತಿಸಿಲ್ಲ, ಮೌಲ್ಯಯುತ ವಸ್ತುಗಳನ್ನು (valuable assets) ಹೊಂದಿದ್ದೀರಿ ಎನ್ನುವ ಯಾವುದೇ ಅನುಮಾನ ಬಂದರೂ ಆದಾಯ ತೆರಿಗೆ ಇಲಾಖೆ ನಿಮ್ಮ ಯಾವುದೇ ಡಿಜಿಟಲ್ ಸಾಧನಗಳನ್ನು (digital platforms) ಶೋಧಿಸುವ ಅಧಿಕಾರ ಹೊಂದಿರಲಿದೆ. ಹೊಸ ಆದಾಯ ತೆರಿಗೆ ಮಸೂದೆ (New Income Tax act) ಮೂಲಕ 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿಮ್ಮ ಖಾಸಗಿ ಇಮೇಲ್, ಬ್ಯಾಂಕ್ ಖಾತೆ, ಸೋಷಿಯಲ್ ಮೀಡಿಯಾ ಅಕೌಂಟ್, ಆನ್​ಲೈನ್ ಇನ್ವೆಸ್ಟ್​ಮೆಂಟ್ ಅಕೌಂಟ್, ಟ್ರೇಡಿಂಗ್ ಅಕೌಂಟ್ ಮತ್ತಿತರ ಯಾವುದೇ ಸಾಧನವನ್ನೂ ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ನಿಮ್ಮ ಒಪ್ಪಿಗೆ ಇಲ್ಲದೆಯೇ ಅಧಿಕಾರಿಗಳು ನಿಮ್ಮ ಅಕೌಂಟ್​ಗಳನ್ನು ತೆಗೆದು ನೋಡಬಹುದು.

ಈಗಿರುವ ಕಾನೂನಿನಲ್ಲಿ ಇದಕ್ಕೆ ಅವಕಾಶ ಇರಲಿಲ್ಲವಾ?

1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಪ್ರಸ್ತಾಪ ಇಲ್ಲ. ಸೆಕ್ಷನ್ 132 ಪ್ರಕಾರ ಯಾವುದೇ ವ್ಯಕ್ತಿ ತೆರಿಗೆ ವಂಚನೆ ಮಾಡಿರಬಹುದು ಎನ್ನುವ ಶಂಕೆ ಬಂದರೆ ಬ್ಯಾಂಕ್ ಆಸ್ತಿಗಳನ್ನು ಶೋಧಿಸಬಹುದು. ಮನೆಯ ಬಾಗಿಲಿನ ಲಾಕ್ ತೆಗೆಯುವ, ಲಾಕರ್​ಗಳನ್ನು ತೆಗೆಯುವ ಅಧಿಕಾರವನ್ನು ಇಲಾಖೆಯ ಅಧಿಕಾರಿಗಳು ಹೊಂದಿರುತ್ತಾರೆ.

ಈ ಕಾಯ್ದೆಯಲ್ಲಿ ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಪ್ರಸ್ತಾಪ ಇಲ್ಲದೇ ಇದ್ದರಿಂದ ಐಟಿ ರೇಡ್​ಗಳಲ್ಲಿ ಕಾನೂನು ತೊಡಕು ಮತ್ತು ಸಂದಿಗ್ಧತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದೆ. ಈಗ ಶಂಕಿತ ಯಾವುದೇ ವ್ಯಕ್ತಿಯ ವರ್ಚುವಲ್ ಡಿಜಿಟಲ್ ಸ್ಪೇಸ್ ಅನ್ನು ಐಟಿ ಅಧಿಕಾರಿಗಳು ಶೋಧಿಸುವ ಅಧಿಕಾರ ತಂದುಕೊಡುತ್ತದೆ ಹೊಸ ಕಾಯ್ದೆ.

ಇದನ್ನೂ ಓದಿ: ರಾಜ್ಯಗಳ ಪೈಕಿ ಕರ್ನಾಟಕದ್ದು 5ನೇ ಅತಿಹೆಚ್ಚು ಸಾಲ; ಆದರೆ, ಜಿಡಿಪಿಗೆ ಹೋಲಿಸಿದರೆ ಇತರ ರಾಜ್ಯಗಳಿಗಿಂತ ಉತ್ತಮ

ಇಲ್ಲಿ ವರ್ಚುವಲ್ ಡಿಜಿಟಲ್ ಸ್ಪೇಸ್ ಎಂದರೆ ಒಬ್ಬ ವ್ಯಕ್ತಿಯ ಸೋಷಿಯಲ್ ಮೀಡಿಯಾ ಅಕೌಂಟ್​​ಗಳು, ಬ್ಯಾಂಕ್ ಅಕೌಂಟ್​ಗಳು, ಟ್ರೇಡಿಂಗ್ ಅಕೌಂಟ್​​ಗಳು, ಇನ್ವೆಸ್ಟ್​ಮೆಂಟ್ ಅಕೌಂಟ್​​​ಗಳು ಮತ್ತು ಇಮೇಲ್​​ಗಳು ಒಳಗೊಳ್ಳುತ್ತವೆ. ಮುಂದಿನ ವರ್ಷ (2026) ಏಪ್ರಿಲ್ 1ರಿಂದ ಈ ಕಾಯ್ದೆ ಜಾರಿಗೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ