India vs Pakistan: ಯುದ್ಧದ ಹೊಡೆತದ ಮಧ್ಯೆಯೂ ಪಾಕಿಸ್ತಾನದ ಷೇರುಪೇಟೆ ಏರಿಕೆ; ಭಾರತದ ಮಾರುಕಟ್ಟೆ ಇಳಿಕೆ; ಏನು ಕಾರಣ?

Stock markets of India and Pakistan: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಎರಡೂ ದೇಶಗಳ ಷೇರುಮಾರುಕಟ್ಟೆಯ ವರ್ತನೆ ಶುಕ್ರವಾರ ಭಿನ್ನವಾಗಿದೆ. ಪಾಕಿಸ್ತಾನದ ಷೇರು ಮಾರುಕಟ್ಟೆ ಶುಕ್ರವಾರ ಬೆಳಗ್ಗೆ ಉತ್ತಮ ಮಟ್ಟಕ್ಕೆ ಏರಿದೆ. ಭಾರತದ ಷೇರುಮಾರುಕಟ್ಟೆ ಹಿನ್ನಡೆ ಕಂಡಿದೆ. ಸೆನ್ಸೆಕ್ಸ್ ಬಹುತೇಕ 900 ಅಂಕಗಳಷ್ಟು ನಷ್ಟ ಕಂಡಿದೆ. ಕರಾಚಿ-100 ಇಂಡೆಕ್ಸ್ ಒಂದು ಹಂತದಲ್ಲಿ 1,000 ಅಂಕಗಳಷ್ಟು ಏರಿಕೆ ಕಂಡಿತ್ತು.

India vs Pakistan: ಯುದ್ಧದ ಹೊಡೆತದ ಮಧ್ಯೆಯೂ ಪಾಕಿಸ್ತಾನದ ಷೇರುಪೇಟೆ ಏರಿಕೆ; ಭಾರತದ ಮಾರುಕಟ್ಟೆ ಇಳಿಕೆ; ಏನು ಕಾರಣ?
ಷೇರು ಮಾರುಕಟ್ಟೆ

Updated on: May 09, 2025 | 11:20 AM

ನವದೆಹಲಿ, ಮೇ 9: ಕಳೆದ ಕೆಲ ದಿನಗಳಿಂದಲೂ ಭಾರತ ಮತ್ತು ಪಾಕಿಸ್ತಾನದ ಷೇರು ಮಾರುಕಟ್ಟೆಗಳು (stock market) ಪರಸ್ಪರ ಭಿನ್ನ ದಾರಿ ಹಿಡಿಯುವುದು ಇವತ್ತೂ ಮುಂದುವರಿದಿದೆ. ನಿನ್ನೆ, ಮೊನ್ನೆಯೆಲ್ಲಾ ಭಾರತದ ಮಾರುಕಟ್ಟೆ ಸಕಾರಾತ್ಮಕವಾಗಿದ್ದರೆ, ಪಾಕಿಸ್ತಾನದ ಷೇರು ಪೇಟೆ ಜರ್ಝರಿತಗೊಂಡಿತ್ತು. ನಿನ್ನೆ ಕರಾಚಿ-100 ಸೂಚ್ಯಂಕ ಶೇ. 7ರಷ್ಟು ಕುಸಿತವಾಗಿ ಒಂದಷ್ಟು ಹೊತ್ತು ವ್ಯವಹಾರವೇ ನಿಂತುಹೋಗಿತ್ತು. ಇವತ್ತು ವಿಭಿನ್ನ ಸ್ಥಿತಿ ಇದೆ. ಇಂದು ಶುಕ್ರವಾರ ಭಾರತದ ಷೇರು ಮಾರುಕಟ್ಟೆ ಕುಸಿತ ಕಂಡರೆ, ಪಾಕಿಸ್ತಾನವು ಮಿರಮಿರ ಮಿಂಚುತ್ತಿದೆ.

ಯುದ್ದದ ನಡುವೆಯೂ ಪಾಕಿಸ್ತಾನದ ಷೇರುಬಜಾರು ಏರಿಕೆ ಆಗುತ್ತಿರುವುದು ಕುತೂಹಲ ಮೂಡಿಸಿದೆ. ಪಾಕ್ ಷೇರು ಮಾರುಕಟ್ಟೆಯ ಪ್ರಮುಖ ಕರಾಚಿ-100 ಸೂಚ್ಯಂಕವು ಇಂದು ಶುಕ್ರವಾರ ಒಂದು ಹಂತದಲ್ಲಿ ಶೇ. 1.80ರಷ್ಟರವರೆಗೂ ಏರಿಕೆ ಆಗಿತ್ತು. ನಂತರ ನಿರಂತರವಾಗಿ ಇಳಿಕೆಯಾಗುತ್ತಾ ಬಂದು, ಈ ವರದಿ ಬರೆಯುವ ವೇಳೆಗೆ ಕೆಂಪು ಬಣ್ಣಕ್ಕೆ ತಿರುಗಿದೆ.

ಇದನ್ನೂ ಓದಿ: ನೆಲ ಒರೆಸುವ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಉನ್ನತ ಪದವಿಗೆ ಏರಿದ ಮಹಿಳೆಯ ಕಥೆ; ಇದು ಪ್ರತೀಕ್ಷಾ ಫಲ

ಇದನ್ನೂ ಓದಿ
ಭಾರತೀಯ ಸೇನೆ ದಾಳಿ ಮಾಡಿದ ಪಾಕಿಸ್ತಾನದ ನಗರಗಳ ಇತಿಹಾಸವೇನು ಗೊತ್ತೇ?
ಪಾಕ್​ನಿಂದ ಸ್ವಾತಂತ್ರ್ಯ ಕೋರಿ ವಿಶ್ವಸಂಸ್ಥೆಗೆ ಮನವಿ ಮಾಡಿದ ಖ್ಯಾತ ಬರಹಗಾರ
ಪಾಕ್ ಸೇನಾ ಪೋಸ್ಟ್ ಉಡೀಸ್: ಸೇನೆಯೇ ಬಿಡುಗಡೆ ಮಾಡಿದ ವಿಡಿಯೋ ಇಲ್ಲಿದೆ
‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ

ಇನ್ನೊಂದೆಡೆ, ಭಾರತದ ಷೇರು ಮಾರುಕಟ್ಟೆ ಇಂದು ಶುಕ್ರವಾರ ಸ್ಪಷ್ಟ ಹಿನ್ನಡೆ ಕಂಡಿದೆ. ಸೆನ್ಸೆಕ್ಸ್ ಶೇ. 1.1ರಷ್ಟು ಇಳಿಕೆ ಆಗಿದೆ. ಬೆಳಗ್ಗೆ 11 ಗಂಟೆಗೆ ಸೆನ್ಸೆಕ್ಸ್ ಬರೋಬ್ಬರಿ 890 ಅಂಕಗಳಷ್ಟು ಕುಸಿತ ಕಂಡಿತ್ತು. ಬಿಎಸ್​​ಇನ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಹಿನ್ನಡೆ ಕಂಡಿವೆ. ಬಿಎಸ್​​ಇ ಮಾತ್ರವಲ್ಲ, ಎನ್​​ಎಸ್​​ಇಯ ಎಲ್ಲಾ ನಿಫ್ಟಿ ಸೂಚ್ಯಂಕಗಳೂ ಕೂಡ ಕಳೆಗುಂದಿವೆ.

ಭಾರತದ ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ?

ಹೂಡಿಕೆದಾರರು ಭಾರತದ ಆರ್ಥಿಕತೆ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದರು. ಈಗ ಪಾಕಿಸ್ತಾನದೊಂದಿಗಿನ ಸಂಘರ್ಷ ಅತಿರೇಕಕ್ಕೆ ಹೋಗುವ ಸಾಧ್ಯತೆ ಇರುವುದು ಹೂಡಿಕೆದಾರರ ಆಶಯವನ್ನು ಮಬ್ಬುಗೊಳಿಸಿದೆ. ಯುದ್ಧವಾದಲ್ಲಿ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂಬುದು ಒಂದು ಕಾರಣ.

ಇದನ್ನೂ ಓದಿ: ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು

ಮತ್ತೊಂದು ಕಾರಣ, ಅಮೆರಿಕದ ಡಾಲರ್ ಇಂಡೆಕ್ಸ್ ಮತ್ತೆ ಪ್ರಾಬಲ್ಯ ಪಡೆದಿರುವುದು. ಹಾಗೆಯೇ, ಏಷ್ಯಾದ ಕೆಲ ಪ್ರಮುಖ ಮಾರುಕಟ್ಟೆಗಳೂ ಕೆಳಗಿಳಿದಿವೆ. ಇದು ಭಾರತದ ಸೆನ್ಸೆಕ್ಸ್, ನಿಫ್ಟಿ ಮೇಲೆ ಪರಿಣಾಮ ಬೀರಿರಬಹುದು ಎಂದು ಭಾವಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ